ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ಕುಟುಂಬವಾಗಿರುವ ಜಾರಕಿಹೊಳಿ ಕುಟುಂಬದ ಮತ್ತೊಂದು ಕುಡಿ ರಾಜಕಾರಣಕ್ಕೆ ಎಂಟ್ರಿ ಕೊಡಲು ಸಕಲ ತಯಾರಿ ಮಾಡಿಕೊಳ್ತಿದೆ. ಬೆಳಗಾವಿ ಜಿಲ್ಲಾ ರಾಜಕಾರಣದ ಮೇಲೆ ತನ್ನದೇ ಹಿಡಿದ ಹೊಂದಿರುವ ಜಾರಕಿಹೊಳಿ ಕುಟುಂಬದಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಗೆದ್ದು ಕಾಂಗ್ರೆಸ್ ಸಂಸದರಾಗಿದ್ದಾರೆ.ಇದೀಗ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಯುವ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದು, ಜಾರಕಿಹೊಳಿ ಕುಟುಂಬದ ಮುಂದಿನ ರಾಜಕೀಯ ನೇತಾರರಾಗಿದ್ದಾರೆ. ಅ.3ರಂದು ತಮ್ಮ 26ನೇ ಹುಟ್ಟುಹಬ್ಬ ಆಚರಿಸಿಕೊಂಡ ರಾಹುಲ್ ಜಾರಕಿಹೊಳಿ ಅವರಿಗೆ ರಾಜ್ಯಾದ್ಯಂತ ಶುಭಾಶಯಗಳು, ಅಭಿನಂದನೆಗಳು ವ್ಯಕ್ತವಾಗಿದ್ದವು.ಇದೀಗ ರಾಹುಲ್ ಜಾರಕಿಹೊಳಿ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಹೋದ ಪೊಲೀಸರಿಗೆ ತೊಂದರೆ ಶುರುವಾಗಿದ್ದು, ಪೊಲೀಸರಿಗೆ ನೋಟಿಸ್ ಕೊಡಲು ಹಿರಿಯ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.

ಸತೀಶ್ ಜಾರಕಿಹೊಳಿ ಪುತ್ರನ ಬರ್ತ್ಡೇಗೆ ವಿಶ್ ಮಾಡಲು ಹೋದ ಪೊಲೀಸರಿಗೆ ತೊಂದರೆ – ನೋಟಿಸ್ ಕೊಡಲು ಹಿರಿಯ ಅಧಿಕಾರಿಗಳು ಸೂಚನೆ!

Savistara
Bureau Report
[t4b-ticker]