ಸಿದ್ದರಾಮಯ್ಯ ಇಷ್ಟೊಂದು ದುರ್ಬಲ ಎಂದು ಗೊತ್ತಿರಲಿಲ್ಲ: ಜೆ.ಸಿ.ಮಾಧುಸ್ವಾಮಿ

Picture of Savistara

Savistara

Bureau Report

ತುಮಕೂರು: ‘ಕುರುಬರನ್ನು ಎಸ್.ಟಿ ಪಟ್ಟಿಗೆ ಸೇರಿಸುತ್ತೇವೆ’ಎನ್ನುವ ಸ್ಥಿತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಾರೆ, ಅವರು ಇಷ್ಟೊಂದು ದುರ್ಬಲರು ಎಂದು ಭಾವಿಸಿರಲಿಲ್ಲ’ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಭಾನುವಾರ ಹೇಳಿದರು.

ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಜನ್ಮದಿನ ನಿಮಿತ್ತ ಇಲ್ಲಿ ಜೆ.ಎಚ್‌.ಪಟೇಲ್ ಪ್ರತಿಷ್ಠಾನ ಏರ್ಪಡಿಸಿದ್ದ ‘ವ್ಯವಸ್ಥೆ ಸುಧಾರಣೆಯಲ್ಲಿ ನಮ್ಮ ಪಾತ್ರ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.’ಜಾತಿ ಸೋಂಕು ಅತಿಯಾಗುತ್ತಿದೆ. ಕುರುಬರ ಹೋರಾಟದ ವೇಳೆ ಸಿದ್ದರಾಮಯ್ಯ ಭಾಗವಹಿಸಲಿಲ್ಲ. ಈಗ ಅವರೇ ಕುರುಬರನ್ನು ಎಸ್.ಟಿಗೆ ಸೇರಿಸಬೇಕು ಎಂದು ಭಾಷಣ ಮಾಡುತ್ತಿದ್ದಾರೆ’ ಎಂದರು.’ಇಂತಹ ಸಮಯದಲ್ಲಿ ನಾವೂ ಸಹ ಲಿಂಗಾಯತರನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ಎಂದು ಮಾತನಾಡುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ’ ಎಂದು ಹೇಳಿದರು.

[t4b-ticker]
error: Content is protected !!