ಅಜನಮಾಧ್ಯಮ, ಭಟ್ಕಳ, ಕಳೆದ ನೂರು ವರ್ಷಗಳಿಂದ ದೇಶದಲ್ಲಿ ಆರ್.ಎಸ್.ಎಸ್. ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದು ದೇಶ ವಿದೇಶಗಳಲ್ಲಿ ಪ್ರಭಾವಶಾಲಿಯಾಗಿ ಬೆಳೆದಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಈಶ್ವರ ಎಂ. ನಾಯ್ಕ ಹೇಳಿದರು.ಅವರು ಇಲ್ಲಿನ ಅಯೋಧ್ಯಾ ನಗರದಲ್ಲಿರುವ ಶ್ರೀ ಗುರು ಸುಧೀಂದ್ರ ಕಾಲೇಜು ಆವರಣದಲ್ಲಿ ನಿರ್ವಡಿಸಲಾಗಿದ್ದ ವಿಜಯದಶಮಿಯ ಪ್ರಯುಕ್ತ ಆರ್.ಎಸ್.ಎಸ್. ಪಥ ಸಂಚಲನ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.ಭಾರತ ಒಂದು ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯುವಲ್ಲಿ ಕೂಡಾ ಆರ್. ಎಸ್. ಎಸ್. ಮಹತ್ವದ ಪಾತ್ರ ವಹಿಸಿದ್ದು ದೇಶದ ಜನತೆಯಲ್ಲಿ ಶ್ರದ್ಧೆ ದೇಶಭಕ್ತಿ ಮೂಡಿಸುವಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯವನ್ನು ಮಾಡುವಲ್ಲಿ ಕೂಡಾ ಮುಂಚೂಣಿಯಲ್ಲಿದೆ ಎಂದರು. ತ್ಯಾಗ, ಬಲಿದಾನ, ರಾಷ್ಟ್ರೀಯತೆ, ಹಿಂದುತ್ವದಿಂದಾಗಿ ಶಕ್ತಿಶಾಲಿಯಾಗಿ ಹೊರ ಹೊಮ್ಮಿದ ಸಂಘಟನೆಯನ್ನು ನಾವು ಶಾಶ್ವತವಾಗಿಸುವಲ್ಲಿ ಶ್ರಮಿಸಬೇಕಾಗಿದೆ. ಆರ್.ಎಸ್.ಎಸ್.ಗೆ ಬೆನ್ನೆಲುಬಾಗಿ ನಾವೆಲ್ಲರೂ ನಿಂತಾಗ ಮಾತ್ರ ದೇಶದಲ್ಲಿ ಉತ್ತಮ ವಾತಾವರಣ ನಿರ್ಮಾಣ ಸಾಧ್ಯ ಎಂದೂ ಅವರು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಉಪಸ್ಥಿತರಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಪ್ರಚಾರಕ ನರೇಂದ್ರಜಿ ಮಾತನಾಡಿ, ಆರ್.ಎಸ್.ಎಸ್. ಯಾವುದೇ ಒಂದು ಧರ್ಮದ ವಿರುದ್ಧ ಹುಟ್ಟಿಕೊಂಡಿರುವ ಸಂಘವಲ್ಲ ಬದಲಾಗಿ ಅನೇಕ ಸಕಾರಾತ್ಮವಾದ ದೃಷ್ಟಿಯನ್ನಿಟ್ಟುಕೊಂಡು ಹುಟ್ಟಿಕೊಂಡ ಸಂಘಟನೆಯಾಗಿದ್ದು 100 ವರ್ಷ ಪೂರೈಸಿದೆ ಎನ್ನುವುದು ನಮ್ಮ ಪ್ರಚಾರದ ಸರಕಲ್ಲ ಬದಲಾಗಿ ಬದಲಾವಣೆಯೇ ನಮ್ಮ ಗುರಿ ಎಂದರು.
ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳ ಕಾಲ ವಿದೇಶಿಯರು ಆಳ್ವಿಕೆ ಮಾಡುವುದಕ್ಕೆ ನಮ್ಮಲ್ಲಿರುವ ದೌರ್ಬಲ್ಯವೇ? ಕಾರಣವಾಗಿತ್ತು. ನಮ್ಮಲ್ಲಿಯ ತಪ್ಪುಗಳಿಂದಾಗಿಯೇ ಬಟಿಷರು ನಮ್ಮನ್ನಾಳುವಂತಾಯಿತು. ಜಗತ್ತಿನ ಎಲ್ಲ ದೇಶಗಳಿಗೆ ನಮ್ಮ
ದೇಶವನ್ನು ಲೂಟಿ ಮಾಡುವಲ್ಲಿ ಅವಕಾಶವಾಯಿತು ಎಂದು ಹೇಳಿದ ಅವರು ಆದರೂ ನಮ್ಮ ದೇಶ ಇಂದಿಗೂ ಶ್ರೀಮಂತ ದೇಶವಾಗಿಯೇ ಉಳಿದುಕೊಂಡಿದೆ ಎಂದರು.ನಮ್ಮ ದೇಶ ಸಂಪತ್ತಿನಲ್ಲಿ ಹೇಗೆ ಶ್ರೀಮಂತವಾಗಿತ್ತೋ
ಅದೇ ರೀತಿ ಜ್ಞಾನ ಶ್ರೀಮಂತಿಕೆ ಕೂಡಾ ನಮ್ಮ ದೇಶದಲ್ಲಿತ್ತು. ಜಗತ್ತಿನ ಅನೇಕ ದೇಶಗಳಿಗೆ ಬದುಕು ಕಲಿಸಿಕೊಟ್ಟಿರುವ ದೇಹ ನಮ್ಮದು ಭಾರತ ವಿಶ್ವಗುರುವಾಗಿ ಬೆಳೆಯಬೇಕು ಎಂಬುದು ಡಾ. ಹೆಗ್ರೇವಾರ್ ಅವರ ಸಂಕಲ್ಪವಾಗಿತ್ತು. ಇಂದು ಜಗತ್ತಿನ 2-3 ದೇಶಗಳಲ್ಲಿ ಆರ್.ಎಸ್.ಎಸ್. ತನ್ನ ಶಾಖೆಯನ್ನು ತೆರೆದಿದ್ದು ವಿಶ್ವದ ಅತ್ಯಂತ ದೊಡ್ಡ ಸಂಘಟನೆಯಾಗಿ ಹೊರ ಹೊಮ್ಮಿದೆಯಲ್ಲದೇ ವಿಶ್ವದ ಅತ್ಯಂತ ಶ್ರೇಷ್ಠ ಪದ್ಧತಿ ಆರ್.ಎಸ್. ಎನ್.ನದ್ದಾಗಿದೆ ಎನ್ನುವುದಕ್ಕೆ ಹೆಮ್ಮೆಯೆನಿಸುತ್ತದೆ ಎಂದರು.ಸಂಘದ ಏಕಮಾತ್ರ ಗುರಿ ದೇಶದ ಹಿತ ಕಾಪಾಡುವುದಾಗಿದೆ. ಸಮಾಜದಲ್ಲಿಯ ಸಜ್ಜನ ಶಕ್ತಿಯನ್ನು ಜಾಗೃತಗೊಳಿಸುವುದು, ದೇಶದ ಮುನ್ನಡೆಯಲ್ಲಿ ಮಹತ್ವದ ಪಾತ್ರ ವಹಿಸುವುದಾಗಿದೆ. ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆರ್. ఎనో. ఎనో. తిరసియ విభాగ నంబాలక రామ ಕಾಮತ್ ಉಪಸ್ಥಿತರಿದ್ದರು. ಇದಕ್ಕೂ ಪೂರ್ವ ಸಾವಿರಾರು ಗಣವೇಷಧಾರಿಗಳು ಅತ್ಯಂತ ಶಿಸ್ತಿನಿಂದ ಎರಡು ವಿಭಾಗವಾಗಿ ಪಥ ಸಂಚಲನ ನಡೆಸಿ ನಂತರ ಒಟ್ಟಾಗಿ ಇಲ್ಲಿನ ಆಯೋಧ್ಯಾ ನಗರದ ಶ್ರೀಗುರು ಸುರ್ಧಿಂದ್ರ ಕಾಲೇಜು ಮೈದಾನದಲ್ಲಿ ಸೇರಿದರು.