ಭಾರತ ದೇಶದಲ್ಲಿ ಭಾರತೀಯತೆ ಇದೆ, ಅದು ಸನಾತನ ಧರ್ಮದಲ್ಲಿದೆ. ಹಿಂದೂ ಧರ್ಮದ ಆಳ, ಅರಿವಿಲ್ಲದ ನಮ್ಮಲ್ಲಿ ಪರಿವರ್ತನೆ ಆಗದಿದ್ದರೆ ಸಾದ್ಯವಿಲ್ಲ. ಧರ್ಮಕ್ಕೆ ಆಳಿವಿಲ್ಲ ಆದರೆ ಪರಿವರ್ತನೆ ಅವಶ್ಯ, ಸಮಾಜದಲ್ಲಿ ಅಸ್ಪಶ್ಯತೆ ನಾಶ ಆಗಬೇಕು ಎಂದುಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಗುರುದೇವಾನಂದ ಸ್ವಾಮಿಗಳು ನುಡಿದರು.
ಅವರು ಹಿಂದೂ ಸಂಗಮ ಆಯೋಜನಾ ಸಮಿತಿ ಸುಳ್ಯ ಇದರ ವತಿಯಿಂದ ಫೆ. ೨ ರಂದು ಬೃಹತ್ ಹಿಂದೂ ಸಂಗಮ ಮತ್ತು ಶೋಭಾಯಾತ್ರೆದಿ. ತಮಯ್ಯ ಗೌಡ ಕೂಜುಗೋಡು ಕಟ್ಟೆಮನೆ ಕ್ರೀಡಾಂಗಣ, ಬೆಟ್ಟುಮಕ್ಕಿ ಮುಚ್ಚಾರ ಇಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಆಶೀರ್ವಚನ ನೀಡುತ್ತಿದ್ದರು.
ನಾವೆಲ್ಲಾ ಧರ್ಮ ಸಂರಕ್ಷಣೆಯ ಸೇನಾನಿಗಳಾಗಬೇಕು. ಸಂಘರ್ಷಕ್ಕೆ ಒಂದೇ ಉತ್ತರ ಸಂಘಟನೆ, ದೇಶದ ಉಳಿವು ಯುವಕರು ಮತ್ತು ಮಾತೆಯರು ಕೈಯಲ್ಲಿದೆ ಎಂದ ಅವರು. ಎಲ್ಲಾ ಯುಗದಲ್ಲಿ ರಾಕ್ಷಸ ಗುಣದವರು, ದೇವ ಗುಣದವರು ಬೇರೆ ಬೇರೆ ಆಗಿದ್ದರು, ಆದರೆ ನಾವೀಗ ಕಲಿಯುಗದಲ್ಲಿ ರಾಕ್ಷಸ ಗುಣ ದೇವ ಗುಣ ಮನುಷ್ಯ ಒಬ್ಬನಲ್ಲೇ ಮಿಲಿತವಾಗಿದೆ ಎಂದು ನುಡಿದ ಅವರು ಮನೆಯಲ್ಲಿ ದೇವರ ಕೋಣೆ ಹೇಗಿದ್ಯಾ ಹಾಗೇ ಪ್ರಪಂಚಕ್ಕೆ ಭಾರತ ದೇಶ ಪವಿತ್ರ ದೇಶ ಎಂಭ ಭಾವನೆ ಬರುವಂತಾಗಲಿ ಎಂದು ನುಡಿದರು.
ದಿಕ್ಕೂಚಿ ಭಾಷಣ ಮಾಡಿದ ಅಖಿಲಾ ಭಾರತೀಯ ವಿದ್ಯಾರ್ಥಿ ಪರಿಷತ್ ನ ಪ್ರಮುಖ್, ಉಪನ್ಯಾಸಕ ಕೇಶವ ಬಂಗೇರ ನಮ್ಮ ಕಾರ್ಯಕ್ರಮ ಇರುವುದು ಯಾರ ವಿರೋಧಕ್ಕಲ್ಲ, ನಾವೆಲ್ಲ ಒಂದು ಸೇರಬೇಕು ಎಂಬ ಒಂದು ಸಂಕಲ್ಪಕ್ಕಾಗಿ ನಾವು ಸೇರಬೇಕು. ನೂರು ವರ್ಷಗಳ ಹಿಂದೆ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಹೆಡ್ಡೆವಾರ್ ರ ಸಂಕಲ್ಪ ಹಿಂದೂಗಳ ಒಂದುಗೂಡಿಸುವ ಸಂಕಲ್ಪ ಬಂದದ್ದು ಹಾಗೇ ಹುಟ್ಟಿಕೊಂಡ ಸಂಘ ನಮ್ಮದು. ಹಿಂದುತ್ವ ಅಂದರೆ ಭಾರತೀಯರ ವಿಶ್ವ ದೃಷ್ಟಿ. ಜೀವನ ದರ್ಶನ, ಭಾರತೀಯರ ನಡವಳಿಕೆ ಆಗಿದೆ. ಹಿಂದುತ್ವದಿಂದ ಭಾರತವನ್ನು ಬಿಡಿಸಿ ನೋಡಲು ಸಾಧ್ಯವಿಲ್ಲ. ಧರ್ಮ ಅಂದರೆ ಅನುಶಾಸನ, ಕರ್ತವ್ಯ, ಪಿತೃಧರ್ಮ, ಮಾತೃ ಧರ್ಮ, ಆಚಾರ್ಯ ಧರ್ಮ, ರಾಜ ಧರ್ಮ ಎಲ್ಲವೂ ಹಿಂದೂ ಸಮಾಜ ಸಮ್ಮಿಳಿತವಾಗಿದೆ ಎಂದ ಅವರು. ಮಂಗಳೂರು ಭಾವುಟ ಗುಡ್ಡೆಯಲ್ಲಿ ಈ ಭಾಗದ ಹೋರಾಟಗಾರರು ೧೩ ದಿನಗಳ ಚಕ್ರಾಧಿಪತ್ಯ ಸಾರಿದರೋ ಅದನ್ನು ನೆನಪಿಸಿಕೊಳ್ಳಿ. ನಮಗೂ ಕೆಚ್ಚೆದೆ ಬೇಕಾಗಿದೆ ಎಂದ ಅವರು ಬಾಳುಗೋಡು ವೇದಿಕೆಯಲ್ಲಿ ನಿಂತು ಹೇಳುತ್ತೇನೆ. ನನ್ನೂರಿನ ಕಾಲೋನಿಗೆ ಹೋಗಿ ಅವರೊಂದಿಗೆ ನಿವಾಗಲು ಸಾಧ್ಯವಿದ್ದರೆ ಅದು ಹಿಂದೂ ಸಂಕಲ್ಪವಾಗಲಿ ಎಂದರು.
ಸಾಲು ಮರದ ತಿಮ್ಮಕ್ಕ ನಮಗೆ ಆದರ್ಶ ಆಗಲು ಸಾಧ್ಯವಿದ್ದಲಿ ಪಾಲಿಸಿ ಎಂದ ಅವರು ಅದನ್ನು ನಮ್ಮ ಶಿವಾಜಿ ಬೈಕ್ ಡೂಮ್, ಹಚ್ಚೆ ಬಿಟ್ಟು ಹೃದಯದಲ್ಲಿ ಶಿವಾಜಿ ಇರಲಿ ಹಿಂದೂ ಸಂಗಮದ ಮುಖಾಂತರ ನನ್ನೊಳಗಿನ ಜಾತಿಯತೇ ಬಿಡಬಹುದೆ ಎಂದವರು ನುಡಿದರು.
ಕಾರ್ಯಕ್ರಮಆರಂಭದಲ್ಲಿ ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕದಿಂದ ಬೈಕ್ ರ್ಯಾಲಿಯಲ್ಲಿ ಶೋಭಾಯಾತ್ರೆ ಹೊರಟು ಬಾಳುಗೋಡಿಗೆ ಬಂದು ಬಾಳುಗೋಡು ಅಂಚೆ ಕಛೇರಿ ಬಳಿ ಸೇರಿ ಅಲ್ಲಿಂದ ಶೋಭಾಯಾತ್ರೆಯಲ್ಲಿ ಬರಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಬಿ.ಎಸ್.ಎನ್.ಎಲ್, ಮೈಸೂರು ಇದರ ನಿವೃತ್ತ ವಿಭಾಗೀಯ ಅಭಿಯಂತರಾದ, ದೇವದಾಸ ಕಜೆಗದ್ದೆ ಬಾಳುಗೋಡು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ನಿವೃತ್ತ, ಮುಖ್ಯೋಪಾಧ್ಯಾಯರು, ಶಿವರಾಮ ಕುಂಞಟಿ, ನಿವೃತ್ತ ಉಪನ್ಯಾಸಕರು ರಾಮಚಂದ್ರ ಗೌಡ ಪಳಂಗಾಯ ಪಲ್ಲತ್ತಡ್ಕ, ಭೂ ಸೇನಾ ಯೋಧರು, ಯಶವಂತ ನಿಡುಬೆ, ಕಲ್ಮಕಾರು, ಶ್ರೀಮತಿ ದಮಯಂತಿ ಸುಧೀರ್ ಕಟ್ಟೆಮನೆ, ರಾಮಚಂದ್ರಪುರ ಮಠ ಮಾತೃ ಸಮಿತಿ ಮುಳ್ಳೇರಿಯ ಮಂಡಲ ಅಧ್ಯಕ್ಷ ಶ್ರೀಮತಿ ದೇವಕಿ ಭಟ್ ಪನ್ನೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಉಷಾ ಪ್ರಭಾಕರ ಕಿರಿಭಾಗ, ಪ್ರಗತಿಪರ ಕೃಷಿಕ ಸೀತಾರಾಮ ಗೌಡ ಬಿಳಿಮಲೆ, ನಾಟಿ ವೈದ್ಯರು ಮತ್ತು ಕೃಷಿ ಸಲಕರಣ ತಯಾರಕರು ಗಣಪತಿ ಭಟ್ ಬಿ ಎಸ್, ಪ್ರಶಸ್ತಿ ವಿಜೇತ ದೈವ ನರ್ತಕ ಬೊಳಿಯ ಬೆಂಡೋಡಿ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಲೋಕೇಶ್ ಮುಂಡೋಕಜೆ ಉಪಸ್ಥಿತರಿದ್ದರು.
ಅಜೇಯ್ ಪೊಯ್ಕೆಮಜಲು ಶಂಖನಾದ ಮಾಡಿದರು, ವಿನಯ್ ವೈಯ್ಯಕ್ತಿಕ ಗೀತೆ ಹಾಡಿದರು, ಚಂದ್ರಹಾಸ ಶಿವಾಲ ಸ್ವಾಗತಿಸಿದರು. ಸೋಮಶೇಖರ್ ಕಟ್ಟೆಮನೆ ಪ್ರಸ್ತಾವಿಕ ಮಾತನಾಡಿದರು. ಸತೀಶ್ ಟಿ.ಎನ್ ವಂದಿಸಿದರು, ಲೊಹಿತ್ ಮುಚ್ಚಾರ ಕಾರ್ಯಕ್ರಮ ನಿರೂಪಿಸಿದರು.









































