ಹಾದಿ ಬೀದಿಯಲ್ಲಿ ಮೈತ್ರಿ ಬಗ್ಗೆ ಚರ್ಚಿಸಲ್ಲ | ಪಾಂಡವಪುರದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾಯದರ್ಶಿ ಪ್ರೀತಂಗೌಡ ಹೇಳಿಕೆ

Picture of Savistara

Savistara

Bureau Report

“ನಾನು ಎನ್‌ಡಿಎ ಮೈತ್ರಿ ಪರವಾಗಿದ್ದೇನೆ. ಮೈತ್ರಿ ವಿಚಾರವಾಗಿ ಹಾದಿ ಬೀದಿಯಲ್ಲಿ ಚರ್ಚಿಸೋದು ಬೇಡ, “ಎಂದು ಬಿಜೆಪಿ ರಾಜ್ಯ ಪ್ರಧಾನ ಕಾಠ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ,” ನಾಲ್ಕು ಗೋಡೆ ಮಧ್ಯೆ ಚರ್ಚಿಸಬೇಕೆಂಬ ಸಲಹೆ ಕೊಟ್ಟಿದ್ದಾರೆ. ಆ ಸಲಹೆ ಸರಿಯಾಗಿದೆ. ಹಾಗಾಗಿ ನಾನು ಸೈಲೆಂಟ್ ಆಗಿದ್ದೇನೆ. ಜೆಡಿಎಸ್‌ನವರು ಸಹ ಮುಂದಿನ ಮುಖ್ಯಮಂತ್ರಿ, ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಚರ್ಚಿಸಬಾರದು, ಆ ವಿಚಾರವಾಗಿ ಚರ್ಚಿಸಿ దిల్లియ ನಾಯಕರು ತೀರ್ಮಾನಿಸಲಿದ್ದಾರೆ,” ಎಂದರು.

“ಮೈತ್ರಿಯ ರೀತಿ ರಿವಾಜುಗಳನ್ನು ತೀರ್ಮಾನಿಸುವುದು ದಿಲ್ಲಿಯ ನಾಯಕರು. ಹಾಗಾಗಿ ಅವರ ಸೂಚನೆಯನ್ನು ಎಲ್ಲಾ ಮೈತ್ರಿಯ ನಾಯಕರು ಪಾಲನೆ ಮಾಡಬೇಕು. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕಾರ್ಯಕರ್ತರ ಸಭೆಯಲ್ಲಿ

ಮಾತನಾಡುತ್ತಿರುವುದು ನಮ್ಮ ಕಾರಕರ್ತರಿಗೆ ಸ್ವಲ್ಪಗೊಂದಲ ಸೃಷ್ಟಿಸಿದೆ. ಹಾಗಾಗಿ ಗೊಂದಲ ಬಗೆಹರಿಸುವ ಕೆಲಸ ಮಾಡಿದ್ದೇವೆ ಅಷ್ಟೆ ಚಿಕ್ಕವರೇ ಆಗಲಿ ದೊಡ್ಡವರೇ ಆಗಲಿ ರಚನಾತ್ಮಕ ಸಲಹೆಗಳು ಬಂದರೆ ಅದನ್ನು ಎರಡು ಕಡೆಯವರು ಪಾಲನೆ ಮಾಡಬೇಕು,” ಎಂದು ತಿಳಿಸಿದರು.”ಪಕ್ಷ ನನಗೆ ಸಂಘಟನೆ ಮಾಡುವ ಜವಾಬ್ದಾರಿಕೊಟ್ಟಿದೆ. ಪಕ್ಷ ಬೆಳೆಸುವುದಷ್ಟೇ ನನ್ನ ಧೈಯವಾಗಿದೆ. ಈಗಾಗಲೆ ಪಕ್ಷ ಸಂಘಟನೆ ಮಾಡುವ ವಿಚಾರವಾಗಿ ಮಂಡ್ಯದಲ್ಲಿ ಹಲವು ಸಂಘಟನಾತ್ಮಕ ಕಾರಕರ್ತರ ಸಭೆ ನಡೆಸಿದ್ದೇವೆ. ಇದೀಗ ಮೈಸೂರು ಜಿಲ್ಲೆಯಲ್ಲಿ ಸಂಘಟನಾತ್ಮಕ ಸಭೆಯನ್ನು ನಡೆಸಿ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಎಲ್ಲರ ಜತೆಗೂಡಿ ಪಕ್ಷ ಸಂಘಟನೆ ಮಾಡಲಿದ್ದೇವೆ,” ಎಂದರು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!