ರಾಜ್ಯಕ್ಕೆ ಮಾದರಿ ಬಿಎಸ್‌ವೈ ಆಡಳಿತದ ಶೈಲಿ | ನಿಖರತೆ, ಸ್ಪಷ್ಟತೆ, ದೂರದರ್ಶಿತ್ವದ ಮುಖಂಡ ಯಡಿಯೂರಪ್ಪ | ಜನಪರ ಕಾಯಕ, ದಣಿವರಿಯದ ನಾಯಕ ಬಿಎಸ್‌ವೈ

Picture of Savistara

Savistara

Bureau Report

. ಎಸ್.ಯಡಿಯೂರಪ್ಪ 2007ರಿಂದ 2021ರವರೆಗೆ ಒಟ್ಟು ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡರು. ಹಾಗಂತ ಅವರು ಈ ರಾಜ್ಯದ ಆಡಳಿತ ನಡೆಸಿದ್ದು ಅಬ್ಬಬ್ಬಾ ಅಂದರೆ ಐದು ವರ್ಷ. ಆದರೆ ಮೂಡಿಸಿದ ಭಾವು ಅಗಾಧ. ಆರೆಸ್ಸೆಸ್ ಸ್ವಯಂಸೇವಕನಾಗಿ, ಧೈಯ ಸಾಧನೆಯ ಹಾದಿಯಲ್ಲಿ ಪೂರ್ಣವಾದಿಕಾರ್ಯಕರ್ತನಾಗಿ, ಶಿಕಾರಿಪುರಪುರಸಭೆ ಅಧ್ಯಕ್ಷರಾಗಿ, ಕರ್ನಾಟಕ ವಿಧಾನಸಭೆ ಶಾಸಕರಾಗಿ, ವಿಪಕ್ಷ ನಾಯಕರಾಗಿ, ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿ ಅವರು ಮೂಡಿಸಿದ ಹೆಜ್ಜೆ ಗುರುತುಗಳು ಅವರಿಗೆ ಅವರೇ ಸಾತಿ!

ಸರ್ವರಿಗೂ ಸಮಪಾಲು/ಸಮಬಾಳು

ಯಡಿಯೂರಪ್ಪ ನಂಬಿದ ತತ್ವ, ಅನುಸರಿಸಿದ ಸಿದ್ಧಾಂತ: ಅಂದುವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎಲ್ಲ ಇಲಾಖೆಗಳ ಮುಖ್ಯಸ್ಥರ ಸಭೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅತ್ಯಂತ ಗಂಭೀರ ವಾದನರಾಗಿ ಮಾತು ಆರಂಭಿಸಿದರು.ಅವರ ಮೊದಲ ಮಾತು, ‘ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು’ ಎನ್ನುವುದೇ ನಮ್ಮ ಸರಕಾರದ ಆದ್ಯತೆ, ನಾವೆಲ್ಲರೂ ಬದ್ಧತೆ, ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಈ ಗುರಿ ಸಾಧನೆ ಕಷ್ಟವೇನಲ್ಲಿ ಎಂಬುದಾಗಿತ್ತು. ಹಾಗೆಯೇ ಖಡಕ್ ಐಎಎಸ್ ಅಧಿಕಾರಿಯೊಬ್ಬರನ್ನು ಉದ್ದೇಶಿಸಿ,’ಏನ್ ಸ್ವಾಮೀ, ನಾನು ಹೇಳಿದ್ದಕ್ಕೆ ನೀವು ಸಹಮತ ವ್ಯಕ್ತಪಡಿಸು ತ್ತೀರಾ’ ಎಂದು ಪ್ರಶ್ನಿಸಿದವರೇ ‘ಸರಕಾರ ಮಾನವೀಯ ಅಂತಃಕರ ಣದಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಎಲ್ಲದಕ್ಕೂ ಕಾನೂನು ಕಟ್ಟಳೆ ಎಂದುಕೊಂಡು ವಿಳಂಬಿಸಿದರೆ ಬಡವರ, ಜನ ಸಾಮಾನ್ಯರ ಬದುಕನ್ನು ಹಸನುಗೊಳಿಸಲು ಸಾಧ್ಯವಾಗುವುದಿಲ್ಲ. ಬಡವರ ಅಭಿವೃದ್ಧಿ ವಿಚಾರ ಬಂದಾಗ ನಿಯಮಗಳನ್ನು ಸ್ವಲ್ಪ ಸಡಿಲಿಸಬೇಕು. ನಾವು ಅವರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸಬೇಕು’ ಎಂದು ಅಷ್ಟೇ ಖಡಕ್ಕಾಗಿ ಹೇಳಿದರು. ಅದಕ್ಕೆ ಆ ಐಎಎಸ್ ಅಧಿಕಾರಿ ನಗುತ್ತಲೇ ಸ್ಪಂದಿಸಬೇಕಾಯಿತು.ಕೆಲಸ ಮಾಡಿದರೆಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಂ ತಹ ಉನ್ನತ ಸ್ಥಾನದಲ್ಲಿದ್ದ ಆ ಅಧಿಕಾರಿ ಸ್ವಲ್ಪ ಜಿಗುಟಿನ ಸ್ವಭಾವದವರಾಗಿದ್ದರು. ಹಾಗಾಗಿ ಉನ್ನತಾಧಿಕಾರಿಗಳು ಸ್ಪಂದನಶೀಲರಾಗಿ ಕೆಲಸ ಮಾಡಿದರೆ ಮಾತ್ರ ಆಡಳಿತ ಯಂತ್ರಕ್ಕೆ ನಿರೀಕ್ಷಿತ ವೇಗ ಸಿಗಲು ಸಾಧ್ಯ. ಹಿರಿಯ ಅಧಿಕಾರಿಗೆ ನಯವಾಗಿ ಚಾಟಿ ಬೀಸುವ ಮೂಲಕ ಈ ಸಂದೇಶವನ್ನು ಯಡಿಯೂರಪ್ಪನವರು ರವಾನಿಸಿದ್ದರು. ತನ್ಮೂಲಕ ತಮ್ಮ ನೇತೃತ್ವದ ಸರಕಾರದ ಆದ್ಯತಾ ಈ ಸಂದೇಶವನ್ನು ಸೂಚಿಯನ್ನು ಪ್ರಾರಂಭದಲ್ಲಿ ಸ್ಪಷ್ಟಗೊಳಿಸಿದ್ದರು.ಸವೆಸಿದ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ. ಅದು ಕಲ್ಲುಮುಳ್ಳಿನ ಹಾದಿಯಾಗಿತ್ತು. ಯಡಿಯೂರಪ್ಪ ಎಂದರೆ ಅಕ್ಷರಶಃ ಕಾದ ಕುಲುಮೆಯಲ್ಲಿ ಸೋಸಿ ಪರಿಪಕ್ವವಾದ ವ್ಯಕ್ತಿತ್ವ, ಶಿಕಾರಿಪುರದಿಂದ ಆರಂಭವಾಗಿ ವಿಧಾನ ಸೌಧದ ಮೂರನೇ ಮಹಡಿದರೆಗೆ ಪ್ರತಿದಿನ ರಾಜಕೀಯದಲ್ಲಿ ಆರಂಭದಿಂದ ಕೊನೆವರೆಗೆ ಯಡಿಯೂರಪ್ಪಪ್ರತಿ ಕ್ಷಣ ಹೋರಾಟ ಹೋರಾಟ ಹೋರಾಟ. ಯಡಿಯೂರಪ್ಪ ಇಂದಿನ ಕೆಲಸ ನಾಳೆ ಮಾಡು ಎಂಬ ಜಾಯ ಮಾನದವರಲ್ಲ. ಇಂದಿನ ಕೆಲಸವನ್ನು ಈ ಕ್ಷಣದಲ್ಲೇ ಮಾಡು ಎನ್ನು ವವರು. ಅವರ ಪದಕೋಶದಲ್ಲಿ ಆಯಿತು, ಹೋಯಿತು. ನೋಡೋಣ ಎಂಬ ಪದಗಳೇ ಇರಲಿಲ್ಲ. ಅದರ ಪರಿಣಾಮ ಅಧಿಕಾರದುದ್ದಕ್ಕೂ ಯಡಿಯೂರಪ್ಪ ನಡೆದು ಸಾಗಿದರೆ ಸಹವರ್ತಿ ಮಂತ್ರಿಗಳು ಮತ್ತು ಅಧಿಕಾರಿಗಳು ಇಡುಸಿರುಬಿಡುತ್ತಾ ಓಡಲೇ ಬೇಕಾಗಿತ್ತು. ಬೆಳಗಿನ ಜಾವ ನಾಲ್ಕೂವರೆಯಿಂದ ರಾತ್ರಿ 12ರ ನಡುರಾತ್ರಿಯವರೆಗೆ ಯಡಿಯೂರಪ್ಪ ಕಾರ್ಯ ತತ್ಪರ ಬಿಡುವಿಲ್ಲದ ಕೆಲಸವೇ ಅವರ ವಿಶ್ರಾಂತಿ, ವಿರಾಮ.

ಶುದ್ಧ ಅಂತಃಕರಣ!

ಸಣ್ಣ ವ್ಯತ್ಯಾಸ ಕಂಡರೂ ಸಿಡಿಮಿಡಿಗೊಳ್ಳುವ, ಕೋಪಗೊಳ್ಳುವ ಪ್ರವೃತ್ತಿ ಯಡಿಯೂರಪ್ಪ ಅವರದ್ದಾಗಿತ್ತು. ಆದರೆ, ಅವರು ಅಧಿಕಾ ರಕ್ಕೆ ಬಂದ ಬಳಿಕ ರಾಜ್ಯದ ಕಟ್ಟ ಕಡೆಯ ಜನರಿಗೂ ಸರಕಾರದ ಯೋಜನೆಗಳನ್ನು ತಲುಪಿಸುವ ದೃಷ್ಟಿಯಿಂದ ಆಡಳಿತ ಯಂತ್ರವನ್ನು ವಿಶ್ವಾಸಕ್ಕೆ ತೆಗೆದುಕೊಂಡರು.

ಅದಕ್ಕೆ ಅಪಾರವಾದ ಸಹನೆ, ತಮ್ಮ ಸುದೀರ್ಘ ರಾಜಕೀಯ ಅನುಭವವನ್ನು ಬಂಡವಾಳವಾಗಿ ತೊಡಗಿಸಿದರು. ಅಂದರೆ ಜನರ ಕೆಲಸವಾಗ ಬೇಕು, ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ డయ్య బిలకు ఎంబ ళజయింద ಸಿಟ್ಟನ್ನು ನಿಯಂತ್ರಿಸಿಕೊಂಡರು. ಅರ್ಥಾತ್ ಅಗತ್ಯ ಬಂದಾಗ ಕುಸುಮದಷ್ಟು ಮೃದುವಾ ದರು. ಅಧಿಕಾರಿಗಳು ನಿಷ್ಕಾಳಜಿ, ಬೇಜವಾ ಬ್ದಾರಿಯಾಗಿ ನಡೆದುಕೊಂಡಾಗ ಬೈದು ಬಿಗಿ ಮಾಡಲು ಹಿಂದೇಟು ಹಾಕಲಿಲ್ಲ.ಯಡಿಯೂರಪ್ಪ ಅವರ ಅಧಿಕಾರ ಪರ್ವ ಆರಂಭವಾದದ್ದು ಸಮ್ಮಿಶ್ರ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಯಾಗುವ ಮೂಲಕ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಹಣಕಾಸು ಖಾತೆಯನ್ನೂ ನಿರ್ವಹಿಸುತ್ತಿದ್ದ ಅವರು ತಮ್ಮ ಮೊದಲ ಮುಂಗಡ ಪತ್ರದಲ್ಲೇ ಛಾವು ಮೂಡಿಸಿದ್ದರು. ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ರುಜುವಾಗಿಸಿದರು.ಪರಿಣಾಮ ಬಡ ರೈತರ ಸಾಲ ಮನ್ನಾದಂತಹ ಅಸಾಧ್ಯ ನಿಲುವು ತಾಳಿದರು. ಕುಟುಂಬದ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯನ್ನು ಘೋಷಿಸಿ ಜಾರಿಗೊಳಿಸಿದರು. ಕೃಷಿ ಹೊಂಡ ನಿರ್ಮಾಣ ಸೇರಿದಂತೆ ರೈತ ಪರವಾದ ಹತ್ತು ಹಲವು ಕಾರ್ಯಕ್ರಮ ಘೋಷಿಸಿದರು. ಗ್ರಾಮಗಳ ಹಳ್ಳಿಹಳ್ಳಿಗೆ ರಸ್ತೆ, ವಿದ್ಯುತ್, ಕುಡಿಯುವ ನೀರು, ತಲೆ ಮೇಲೊಂದು ಸೂರು ಕಲ್ಪಿಸಿದರು. ಶಾಲಾ ಮಕ್ಕಳಿಗೆ ಬೈಸಿಕಲ್ ಯುಡಿಯೂರಪ್ಪ ಜನಪ್ರಿಯ ಯೋಜನೆಗಳಲ್ಲಿ ಹೊಸ ಮೈಲಿಗಲ್ಲು, ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ ಯೋಜನೆಯಂತಹ ವಿನೂತನ ಯೋಜನೆ ರೂಪಿ ಸಿದರು. ಸಾರಾಯಿ ಮಾರಾಟ ನಿಷೇಧ ಕೂಡ ಯಡಿಯೂರಪ್ಪ

ಅವರದ್ದೇ ಇಚ್ಛಾಸಕ್ತಿಯ ಪರಿಣಾಮ ಎಲ್ಲ ಬಗೆಯ ಲಾಟರಿಗಳನ್ನು ನಿಷೇಧಿಸಿ 2007ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಕರ್ನಾಟಕ ವನ್ನು ಲಾಟರಿ ಮುಕ್ತ ರಾಜ್ಯವೆಂದು ಘೋಷಿಸಿದ್ದು ಐತಿಹಾಸಿಕ ಕ್ರಮ ಎನ್ನಲು ಅಡ್ಡಿಯಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಆಡಳಿತದ ಮುಖ್ಯಸ್ಥರೊಬ್ಬರ ನಡವಳಿಕೆ ಅವರ ಕೆಳಗಿನವರ ಮೇಲೆ ಪ್ರಭಾವ ಬೀರುತ್ತದೆ. ಸರಕಾರಿ ವ್ಯವಸ್ಥೆಯೆಂದರೆ ಜಡ ಭರತನ ಸ್ಥಿತಿಯಲ್ಲಿರುತ್ತದೆ. ಜಿಡ್ಡು ಗಟ್ಟಿದ ಂತಹ ಇಂತಹ ವ್ಯವಸ್ಥೆಯನ್ನು ಸರಿದಾರಿಗೆ ತರಲು ಸಾಧ್ಯವೇ ಇಲ್ಲ ಎಂಬ ಅಸಹನೆಯ ಮಾತು ಎಲ್ಲೆಡೆ ಕೇಳಿ ಬರುತ್ತದೆ. ಹಾಗಾಗಿ ಆಡಳಿತ ಯಂತ್ರವನ್ನು ಸರಿ ದಿಕ್ಕಿನಲ್ಲಿ ಸಾಗಿಸುವ ದೃಷ್ಟಿಯಿಂದ ತಾವೇ ಮುಂದಾಗಿ ಮೇಲ್ಪಂಕ್ತಿ ಹಾಕಿಕೊಟ್ಟವರು ಯಡಿಯೂರಪ್ಪ ಅವರು, ಅವರು ಯಾವುದೇ ಇಲಾಖೆಯ ಸಭೆ ನಡೆಸುವುದಿದ್ದರೂ ಪೂರ್ಣ ಮಾಹಿತಿಯೊಂದಿಗೆ ಬಂದು ಕುಳಿತುಕೊಳ್ಳುತ್ತಿದ್ದರು. ಅಧಿ ಕಾರಿಗಳು ನೀಡುವ ಫೀಡ್‌ಬ್ಯಾಕ್ ಒಂದನ್ನೇ ನೆಚ್ಚಿಕೊಂಡರೆ ಜನ ಕಲ್ಯಾಣದ ವಿಷಯದಲ್ಲಿ ಪೂರ್ಣ ನ್ಯಾಯ ಕೊಡಲು ಆಗುವುದಿಲ್ಲ, ರಾಜಕಾರಣಿಯಾದವರಿಗೆ ಸ್ವತಃ ದೂರದೃಷ್ಟಿ ಇರಬೇಕಾಗುತ್ತದೆ.ಈ ನಿಟ್ಟಿನಲ್ಲಿ ಯಡಿಯೂರಪ್ಪ ಸ್ಪಷ್ಟತೆ ಹೊಂದಿದ್ದರು. ಹಾಗಾಗಿ ಅವರು ನಡೆಸುವ ಸಭೆಗಳು ಫಲಿತಾಂಶ ಆಧಾರಿತವಾಗಿರುತ್ತಿದ್ದವು.

ಶಿಸ್ತು ಸಮಯಪಾಲನೆಗೆ ಅಗ್ರ ಸ್ಥಾನ

ವಿವಿಧ ಇಲಾಖಾ ಮುಖ್ಯಸ್ಥರ ಸಭೆಗಳಿರಲಿ, ಜಿಲ್ಲಾಡಳಿತದೊಂದಿಗಿನ ಸಭೆ ಅಥವಾ ಸಚಿವ ಸಂಪುಟ ಸಭೆಯಿರಬಹುದು.

ಈ ಎಲ್ಲ ಸಭೆಗಳಲ್ಲೂಯಡಿಯೂರಪ್ಪನವರು ನಿಗದಿತ ಸಮಯ ಕ್ಕಿಂತ 5 ನಿಮಿಷ ಮುಂಚೆಯೇ ಹಾಜರಿರುತ್ತಿದ್ದರು. ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದಿಂದ ಹಿಡಿದು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ನಡೆಸುವ ಯಾವುದೇ ಸಭೆಗಳಿಗೆ ಅವರು ತಡವಾಗಿ ಹೋದ ನಿದರ್ಶನವೇ ಇಲ್ಲ ಎನ್ನಬಹುದು. ಹಾಗಾಗಿ ಯಡಿಯೂರಪ್ಪನವರ ಅಧಿಕಾರ ಅವಧಿಯಲ್ಲಿ ಆಡಳಿತ ಯಂತ್ರ ಚುರುಕಾಗಿತ್ತು.

ನೀರಾದರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ, ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಪ್ರಯೋಗ, ನಗರ ಮತ್ತು ಗ್ರಾಮೀಣಾಭಿವೃದ್ಧಿ ಯಲ್ಲಿ ಸಮತೋಲನದ ಹೆಜ್ಜೆ, ಐಟಿ ಸಿಟಿ ಖ್ಯಾತಿಯ ಬೆಂಗಳೂರಿನ ಮೂಲಸೌಕರ್ಯಕ್ಕೆ ಮೊದಲ ಬಾರಿಗೆ ಹೆಚ್ಚು ನೆರವು ಕಲ್ಪಿಸಿದ್ದು ಸೇರಿದಂತೆ ಅಭಿವೃದ್ಧಿಯ ಹೊಸ ಅಧ್ಯಾಯವನ್ನೇ ಯಡಿಯೂರಪ್ಪ ಅವರು ಪ್ರಾರಂಭಿಸಿದ್ದರು.

ಮಾತು ಕೃತಿ ಬದ್ದತೆ:

ಇಂದು ಯಡಿಯೂರಪ್ಪ ಅವರ ಬಳಿ ಅಧಿಕಾರ ಎಲ್ಲ, ಆದರೆ ಈಗಲೂ ಜನಪ್ರಿಯತೆಯಲ್ಲಿ ಅವರನ್ನು ಮೀರಿಸಿದವ ರಿಲ್ಲ. ಅದಕ್ಕೆ ಕಾರಣ ಜನಸಾಮಾನ್ಯರು, ಕೆಳಹಂತದ ಕಾರ್ಯಕರ್ತ ರನ್ನು ಪ್ರೀತಿಯಿಂದ ಅವರು ನೋಡುವ ಪರಿ ಕಾರಣ. ಬಾರಣ್ಣ, ವಿನಣ್ಣ ಎಂದು ಯಡಿಯೂರಪ್ಪ ಅವರು ಬಾಚಿ ತಬ್ಬಿದರೆ ಮನಸೋಲದವರೇ ಇಲ್ಲ.ಸರ್ವ ಜನರ ಪ್ರಿಯ ನಾಯಕ: ಯಡಿಯೂರಪ್ಪ ಅವರನ್ನು ರೈತ ನಾಯಕ, ವೀರಶೈವ ಲಿಂಗಾಯತ ನಾಯಕ ಎಂದು ಕರೆಯುತ್ತಾರೆ ನಿಜ, ಆದರೆ ವಾಸ್ತವದಲ್ಲಿ ಅವರು ಇಡೀ ರಾಜ್ಯದಲ್ಲಿ ಸರ್ವ ಜನಪ್ರಿಯ ಆಗ್ರಗಣ್ಯ ನಾಯಕ. ಅದಕ್ಕೆ ಕಾರಣ ಅಧಿಕಾರ ಇಲ್ಲ ವಾಗ ಜಾತಿ ಮತ ನೋಡದೆ ಎಲ್ಲ ಜನಜಾತಿಗಳ ಪರ ಹೋರಾಟ ರೂಪಿಸಿದ್ದು, ಅಧಿಕಾರ ಬಂದಾಗ ಆಡಳಿತ ಮತ್ತು ಸರಕಾರದ ಯೋಜನೆಗಳನ್ನು ಎಲ್ಲ ಜನರ ಮನೆ ಬಾಗಿಲಿಗೆ ತಲುಪಿಸಿದ್ದು, ಪಕ್ಷದಲ್ಲಿ ಎಲ್ಲ ಭಾಗಗಳ ಎಲ್ಲ ಜಾತಿಗಳ ಎರಡು ಮತ್ತು ಮೂರನೇ ತಲೆಮಾರಿನ ನಾಯಕತ್ವವನ್ನು ಪ್ರೀತಿಸಿದ್ದು ಮತ್ತು ಬೆಳೆಸಿದ್ದು,

[t4b-ticker]
error: Content is protected !!