ಬೈಂದೂರು ಜನತೆಯ ಅನೇಕ ವರ್ಷ ಬೇಡಿಕೆ ಈಡೇರಿಸಿದ ಶಾಸಕ ಗಂಟಿಹೊಳೆ | ಕಸ್ತೂರ್ಬಾ ಹಾಸ್ಪಿಟಲ್‌, ಮಣಿಪಾಲ್‌ ಹಾಗೂ ಅಂಜಲಿ ಆಸ್ಪತ್ರೆ, ಬೈಂದೂರು ಇವರ ಸಹಕಾರದೊಂದಿಗೆ ಬೈಂದೂರಿನಲ್ಲಿ ಡಯಾಲಿಸಿಸ್ ಕೇಂದ್ರ ಉದ್ಘಾಟನೆ.

Picture of Savistara

Savistara

Bureau Report

ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾದ ಡಯಾಲಿಸಿಸ್ ಕೇಂದ್ರ ಮಾರ್ಚ್ 8 ರಂದು ಲೋಕಾರ್ಪಣೆ ಗೊಳ್ಳಲಿದೆ. ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಮೂಲಭೂತ ಸೌಲಭ್ಯಗಳ ದೃಷ್ಟಿಯಿಂದ ಸರ್ಕಾರ ಅನುದಾನ ವನ್ನು ಕಾಯದೇ ದಾನಿಗಳು,

ಉದ್ಯಮಿ ಗಳು,ಊರವರ ಸಹಕಾರದಿಂದ ಅನೇಕ ಕಡೆ ಕಾಲು ಸಂಕ ನಿರ್ಮಾಣ,ಶಾಲೆಗಳ ಅಭಿವೃದ್ಧಿಯತ್ತ ಕಾಳಜಿ ವಹಿಸಿದ್ದ ಶಾಸಕರು ಇದೀಗ ಬೈಂದೂರು ಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಿ ಸಾವಿರಾರು ಬಡ, ಮಧ್ಯಮ ವರ್ಗದ ಜನರ ಮೆಚ್ಚುಗೆಗೆ ಪಾತ್ರವಾಗಿದ್ದರೆ. ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ್ ಮತ್ತು ಅಂಜಲಿ ಆಸ್ಪತ್ರೆ ಬೈಂದೂರು ಸಹಕಾರದಿಂದ ಈ ಕೇಂದ್ರ ತೆರೆಯಲಾಗಿದ್ದು ಈ ಹಿಂದೆ ಡಯಾಲಿಸಿಸ್ ಗೆ ಬೈಂದೂರು ಜನ ಉಡುಪಿ,ಮಣಿಪಾಲ ಕಡೆ ತೆರಳಬೇಕಾಗಿತ್ತು.

[t4b-ticker]
error: Content is protected !!