ಪುತ್ತೂರಿನಿಂದ ಬೆಳ್ಳಾರೆ ಕುಕ್ಕುಜಡ್ಕಕ್ಕಾಗಿ ಸುಳ್ಯಕ್ಕೆ ಹೋಗುವ ಬಸ್ಸು ಕ್ಯಾನ್ಸಲ್| ಡಿಪ್ಪೋ ಮ್ಯಾನೇಜರ್ ರನ್ನು ತರಾಟೆಗೆ ತೆಗೆದುಕೊಂಡು ಪ್ರಯಾಣಿಕರು | ತಾತ್ಕಾಲಿಕ ಬಸ್ ವ್ಯವಸ್ಥೆ ಕಲ್ಪಿಸಿದ ಇಲಾಖೆ

Picture of Savistara

Savistara

Bureau Report

ಪುತ್ತೂರಿನಿಂದ ಬೆಳ್ಳಾರೆ ಕುಕ್ಕುಜಡ್ಕ ರೂಟ್ ಮೂಲಕ ಸುಳ್ಯಕ್ಕೆ ಬೆಳಿಗ್ಗೆ ಸಂಚರಿಸುತ್ತಿದ್ದ ಪುತ್ತೂರು ಡಿಪ್ಪೋಗೆ ಸೇರಿದ ಬಸ್ಸನ್ನು ಪುತ್ತೂರು ಡಿಪ್ಪೋದವರು ಏ. 7ರಿಂದ ಕ್ಯಾನ್ಸಲ್ ಮಾಡಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗೆ ಕರೆ ಮಾಡಿದ ಮೇರೆಗೆ ಏ. 8ರಂದು ತಾತ್ಕಾಲಿಕ ಬದಲಿ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.ಪುತ್ತೂರಿನಿಂದ ಬೆಳಿಗ್ಗೆ 7 ಗಂಟೆಗೆ ಹೊರಟು 7.45 ಕ್ಕೆ ಬೆಳ್ಳಾರೆಗೆ ತಲುಪಿ ಅಲ್ಲಿಂದ ಚೊಕ್ಕಾಡಿಯಾಗಿ ಸುಳ್ಯಕ್ಕೆ 8.50 ಕ್ಕೆ ಸುಳ್ಯಕ್ಕೆ ತಲುಪುತ್ತಿದ್ದ ಈ ಬಸ್ಸಿನ್ನುಕಳಂಜ, ಮುಂಡುಗಾರು, ಶೇಣಿ, ಚೊಕ್ಕಾಡಿ, ಕುಕ್ಕುಜಡ್ಕ, ಕಣಿಪ್ಪಿಲ ಭಾಗದಿಂದ ಶಾಲಾ ಕಾಲೇಜುಗಳಿಗೆ, ಕಚೇರಿ ಮತ್ತಿತರ ಕೆಲಸಗಳಿಗೆ ಹೋಗುವವರು ಅವಲಂಬಿಸಿದ್ದರು.

ಹಲವಾರು ವರ್ಷಗಳಿಂದ ಸಂಚರಿಸುತ್ತಿದ್ದ ಈ ಬಸ್ಸುನ್ನು ಏ. 7ರಿಂದ ಮೇ. 31ರ ತನಕ ಸ್ಥಗಿತಗೊಳಿಸಿರುವುದಾಗಿ ತಿಳಿದುಬಂದಿದೆ. ಏ. 7ರಂದು ಈ ಬಸ್ಸಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಾದು ಕಾದು ಸುಸ್ತಾಗಿ ಬಸ್ ಡಿಪ್ಪೋಗೆ ವಿಚಾರಿಸಿದಾಗ ಬಸ್ ಕ್ಯಾನ್ಸಲ್ ಆಗಿರುವ ಬಗ್ಗೆ ಮಾಹಿತಿ ತಿಳಿದುಕೊಂಡು ಅನೇಕ ಮಂದಿ ಕರೆ ಮಾಡಿ ಇದರಿಂದಾಗುವ ಸಮಸ್ಯೆಯನ್ನು ಹೇಳಿಕೊಂಡ ಮೇರೆಗೆ ತಾತ್ಕಾಲಿಕವಾಗಿ ಏ. 8ರಂದು ಬೇರೆ ರೂಟ್ ಬಸ್ಸನ್ನು ಬದಲಾಯಿಸಿ ಈ ರೂಟ್ ನಲ್ಲಿ ಕಳಿಸಿದ್ದಾರೆ. ಬೆಳಿಗ್ಗೆ 7.45 ಕ್ಕೆ ಬೆಳ್ಳಾರೆಯಿಂದ ಹೊರಡುವ ಈ ಒಂದು ಬಸ್ಸನ್ನು ಬಿಟ್ಟರೆ ಸಂಜೆ 4.45ರ ತನಕ ಈ ರೂಟಲ್ಲಿ ಬೇರೆ ಬಸ್ಸಿಲ್ಲ.

ಅದೇ ರೀತಿ ಪುತ್ತೂರು ನಿಂದ ಸುಳ್ಯಕ್ಕೆ ಬೆಳಿಗ್ಗೆ ಕಚೇರಿ ಕೆಲಸ, ಉದ್ಯೋಗಿಗಳು,ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುವ ಪ್ರಯಾಣಿಕರಿಗೂ ಸಮಸ್ಯೆ ಉಂಟಾಗಿದೆ, ಬೆಳಿಗ್ಗೆ 7.50 ಕ್ಕೆ ಕನಕಮಜಲು ನಿಂದ ಬರುವ ಬಸ್ ನ್ನು ಸ್ಥಗಿತಗೊಳಿಸಿದ್ದಾರೆ. ಬೆಳಿಗ್ಗೆ ಮತ್ತು ಸಾಯಂಕಾಲ ಹೊತ್ತು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವ ಬಗ್ಗೆ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಭಾಗದ ಪ್ರಯಾಣಿಕರು ಇರುವ ಏಕೈಕ ಬಸ್ಸನ್ನು ಅವಲಂಬಿಸಿದರೆ ಇಲಾಖೆ ಇದ್ದ ಒಂದು ಬಸ್ಸನ್ನು ಕ್ಯಾನ್ಸಲ್ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಯಾಣಿಕರ ಆಕ್ರೋಶದ ಬಳಿಕ ಆರಂಭಗೊಂಡಿರುವ ಬಸ್ಸನ್ನು ಇಲಾಖೆ ಇದುವರೆಗೆ ಮುಂದುವರಿಸಿದ್ದು ಅದನ್ನು ಮತ್ತೆ ಸ್ಥಗಿತಗೊಳಿಸಿದರೆ ಜನರ ಆಕ್ರೋಶ ಎದುರಿಸಬೇಕಾಗುತ್ತದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!