ನಳಿನ್ ಕುಮಾರ್ ಕಟೀಲ್ ಗೆ ಜಿ-ಕೆಟಗರಿಯಲ್ಲಿ ಹಂಚಿಕೆಯಾದ ಸೈಟ್ ಗೆ ಶುದ್ಧ ಕ್ರಯಪತ್ರ ನೀಡಲು ಸಂಪುಟ ಅಸಮ್ಮತಿ

Picture of Savistara

Savistara

Bureau Report

ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾ‌ರ್ ಕಟೀಲ್‌ ಅವರಿಗೆ ಜಿ ಕೆಟಗರಿ ಕೋಟಾದಲ್ಲಿ 50X80 ಅಡಿ ಅಳತೆಯ ನಿವೇಶನಕ್ಕೆ ಶುದ್ಧ ಕ್ರಯಪತ್ರ ಮಾಡಿಕೊಡಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನುಮೋದನೆಯ ಮೇರೆಗೆ ಈ ಟಿಪ್ಪಣಿಯನ್ನು ಎ.II ರಂದು ನಡೆದ ಸಚಿವ ಸಂಪುಟ ಸಭೆಗೆ ಮಂಡಿಸಿದ್ದು ನಗರಾಭಿವೃದ್ಧಿ ಇಲಾಖೆ ಸಿದ್ಧತೆ ಮಂಡಿಸಿದೆ.

ಬೆಂಗಳೂರು: ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾ‌ರ್ ಕಟೀಲ್‌ ಅವರಿಗೆ ಜಿ ಕೆಟಗರಿ ಕೋಟಾದಲ್ಲಿ 50X80 ಅಡಿ ಅಳತೆಯ ನಿವೇಶನಕ್ಕೆ ಶುದ್ಧ ಕ್ರಯಪತ್ರ ಮಾಡಿಕೊಡಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅನುಮೋದನೆಯ ಮೇರೆಗೆ ಈ ಟಿಪ್ಪಣಿಯನ್ನು ಎ.11 ರಂದು ನಡೆದ ಸಚಿವ ಸಂಪುಟ ಸಭೆಗೆ ಮಂಡಿಸಿದ್ದು ನಗರಾಭಿವೃದ್ಧಿ ಇಲಾಖೆ ಸಿದ್ಧತೆ ಮಂಡಿಸಿದೆ.

ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾ‌ರ್ ಕಟೀಲ್‌ ಅವರಿಗೆ ಎಚ್ ಎಸ್ ಆರ್ ಬಡಾವಣೆಯಲ್ಲಿ ಹಂಚಿಕೆಯಾಗಿರುವ ಜಿ-ಕೆಟಗರಿ ನಿವೇಶನಕ್ಕೆ ಗುತ್ತಿಗೆ ಅವಧಿ ಯಲ್ಲೇ ಶುದ್ದ ಕ್ರಯಪತ್ರ ನೀಡುವ ಪ್ರಸ್ತಾವನೆ ಸಂಪುಟದಲ್ಲಿ ಚರ್ಚೆಗೆ ಬಂತು. ಆದರೆ, ಕೆಲವು ತಾಂತ್ರಿಕ ತೊಡಕುಗಳಿವೆ ಎಂಬ ಕಾರಣಕ್ಕೆ ಪ್ರಸ್ತಾಪವನ್ನು ಮುಂದೂಡಲಾಯಿತು.

ಏನಿದು ಪ್ರಕರಣ..?.ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ರಾಜಕಾರಣಿಗಳಿಗೆ ಕಾನೂನುಬಾಹಿರವಾಗಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಈ ಬದಲಿ ನಿವೇಶನಗಳನ್ನು ವಾಪಸ್ ಪಡೆಯುವಂತೆ ಪ್ರಾಧಿಕಾರಕ್ಕೆ ಅಕ್ಟೋಬರ್ 11 ರಂದು ನಿರ್ದೇಶನ ನೀಡಿತ್ತು. ನ್ಯಾಯಮೂರ್ತಿ ಎ.ವಿ.ಚಂದ್ರಶೇಖ‌ರ್ ಸಮಿತಿ ನೀಡಿರುವ ವರದಿಯನ್ನು ಪರಿಗಣಿಸಿ ಈ ಸೂಚನೆ ನೀಡಿತ್ತು.

‘ಸುಪ್ರೀಂ ಕೋರ್ಟ್ 2021ರ ಅಕ್ಟೋಬರ್‌ನಲ್ಲಿ ನೀಡಿರುವ ಆದೇಶವನ್ನು ಉಲ್ಲಂಘಿಸಿ ಪ್ರಾಧಿಕಾರವು ಆರ್‌ಎಂವಿ ಎರಡನೇ ಹಂತದಲ್ಲಿ ರಾಜಕಾರಣಿಗಳಿಗೆ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದೆ. ಇದು 1984ರ ನಿವೇಶನ ಹಂಚಿಕೆ ನಿಯಮದ ಸೆಕ್ಷನ್ 11 ಎ ಯ ಉಲ್ಲಂಘನೆ’ ಎಂದು ಸಮಿತಿ ವರದಿ ಸಲ್ಲಿಸಿತ್ತು.

ಮರು ಸ್ವಾಧೀನ ಪಡೆದಿರುವ ಅಥವಾ ಪೂರ್ಣ ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಸಾರ್ವಜನಿಕ ಹರಾಜಿನ ಮೂಲಕ ಮಾತ್ರ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ 2021ರ ಅಕ್ಟೋಬ‌ರ್ 29ರಂದು ಆದೇಶಿಸಿತ್ತು. ನಳಿನ್ ಕುಮಾರ್ ಕಟೀಲ್ ಅವರಿಗೆ ನಿವೇಶನ ನೀಡಲು ಮುಂದಾಗಿರುವುದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ನೊಂದಾವಣೆಗೆ ಕಾನೂನು ಇಲಾಖೆ ಆಕ್ಷೇಪ:

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ನಿವೇಶನ ಹಂಚಿಕೆ) ನಿಯಮ 1984ರ 14(3) (ಎ) ಮತ್ತು ಬಿ ಅನ್ವಯ, 10 ವರ್ಷಗಳ ಗುತ್ತಿಗೆ ಮತ್ತು ಮಾರಾಟ ಒಪ್ಪಂದ ಕರಾರು ಅವಧಿ ಮುಕ್ತಾಯಗೊಂಡ ಬಳಿಕವೇ ಹಂಚಿಕೆದಾರರಿಗೆ ಶುದ್ದ ಕ್ರಯಪತ್ರ ನೋಂದಾಯಿಸಲು ಅವಕಾಶ ಇದೆ ಎಂದು ನಗರಾಭಿವೃದ್ಧಿ ಇಲಾಖೆಯ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಅಭಿಪ್ರಾಯ ನೀಡಿರುವ ಕಾನೂನು ಇಲಾಖೆ, ಪ್ರಾಧಿಕಾರದ ನಿವೇಶನ ಹಂಚಿಕೆ ನಿಯಮಗಳ ಪ್ರಕಾರ ಗುತ್ತಿಗೆ ಅವಧಿಯಲ್ಲಿ ಶುದ್ದ ಕ್ರಯಪತ್ರ ನೋಂದಾಯಿಸಲು ಅವಕಾಶ ಇಲ್ಲ ಎಂದೂ ಇಲಾಖೆಯು ಸ್ಪಷ್ಟಪಡಿಸಿದೆ.

ಪ್ರಕರಣವೇನೂ..?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕಟೀಲ್‌ ಅವರಿಗೆ ಜಿ-ಕೆಟಗರಿಯಡಿ ಬನಶಂಕರಿ ಆರನೇ ಹಂತ ಏಳನೇ ಬಡಾವಣೆಯಲ್ಲಿ 15X24 ಮೀಟರ್ ಅಳತೆಯ ನಿವೇಶನ (ಸಂಖ್ಯೆ 204) ಹಂಚಿಕೆ ಮಾಡಿ ಯಡಿಯೂರಪ್ಪ ಅವಧಿಯಲ್ಲಿ 2009ರ ನವೆಂಬ‌ರ್ 2ರಂದು ಹಂಚಿಕೆ ಪತ್ರ ನೀಡಲಾಗಿತ್ತು. ನಂತರ ಕಟೀಲ್ ಮನವಿಯ ಮೇರೆಗೆ ಎಚ್‌ಎಸ್‌ಆರ್ ಬಡಾವಣೆಯ ಸೆಕ್ಟರ್ 3ರಲ್ಲಿ ನಿವೇಶನ (ಸಂಖ್ಯೆ 13 ಬಿ1) ಹಂಚಿಕೆ ಮಾಡಿ 2011ರ ಜೂನ್‌ನಲ್ಲಿ ಹಂಚಿಕೆ ಪತ್ರ ನೀಡಲಾಗಿತ್ತು. ಹೆಚ್ಚುವರಿ ವಿಸ್ತೀರ್ಣದ ಮೌಲ್ಯ ಹಾಗೂ ಬಡ್ಡಿ ಪಾವತಿಸಿದ್ದ ಕಟೀಲ್‌ ಅವರು ನಿವೇಶನವನ್ನು ನೋಂದಾಯಿಸಿಕೊಡುವಂತೆ ಮನವಿ ಮಾಡಿದ್ದರು. ಆದರೆ, ಜಿ ಕೆಟಗರಿಯ ನಿವೇಶನ ಹಂಚಿಕೆಗೆಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪ್ರಕರಣದಾಖಲಾಗಿದ್ದರಿಂದ ಪ್ರಾಧಿಕಾರವು ನಿವೇಶನದನೋಂದಣಿ ಮಾಡಿಕೊಟ್ಟಿರಲಿಲ್ಲ. ನ್ಯಾಯಮೂರ್ತಿಡಿ.ವಿ.ಶೈಲೇಂದ್ರ ಕುಮಾರ್ ವಿಚಾರಣಾ ಸಮಿತಿಆದೇಶದ ಪ್ರಕಾರ, ಪ್ರಾಧಿಕಾರವು ಗುತ್ತಿಗೆ ಹಾಗೂಮಾರಾಟ ಪತ್ರವನ್ನು ನೋಂದಾಯಿಸಿ 2020ರಲ್ಲಿಸ್ವಾಧೀನಪತ್ರ ನೀಡಿತ್ತು.

‘ಪೂರ್ಣ ಮೌಲ್ಯ ಪಾವತಿಸಿದ್ದರೂ ನಿವೇಶನವನ್ನು ತಡವಾಗಿ ನೋಂದಣಿ ಮಾಡಲಾಗಿದೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ನಿವೇಶನದ ಗುತ್ತಿಗೆ ಅವಧಿ ಸಡಿಲಿಸಿ ಶುದ್ಧ ಕ್ರಯಪತ್ರ ಮಾಡಿಕೊಡಬೇಕು’ ಎಂದು ನಳಿನ್ ಅವರು ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು.ಈ ಪ್ರಸ್ತಾವನೆ ತಿರಸ್ಕರಿಸಬಹುದು ಅಥವಾ ಶುದ್ಧ ಕ್ರಯಪತ್ರ ನೋಂದಾಯಿಸಲು ಅನುಮತಿ ನೀಡಬಹುದು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅವರು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ. ಇದೀಗ ಶುದ್ಧ ಕ್ರಯಪತ್ರ ನೀಡಲು ಸಂಪುಟ ಅಸಮ್ಮತಿ ಸೂಚಿಸಿದೆ.

[t4b-ticker]
error: Content is protected !!