ಕಾಂಞಗಾಡ್ – ಕಾಣಿಯೂರು ರೈಲ್ವೇ ಮಾರ್ಗಕ್ಕೆ ಬದಲಿ ಪ್ರಸ್ತಾವನೆ

Picture of Savistara

Savistara

Bureau Report

ಪುತ್ತೂರು: ಅಂತರ, ಪರಿಸರ ಉಳಿವು, ಪಟ್ಟಣಕ್ಕೆ ಪೂರಕಎಂಬ ಮೂರು ವಿಷಯಗಳನ್ನು ಮುಂದಿಟ್ಟುಕೊಂಡು, ಕಾಂಞಗಾಡ್ – ಕಾಣಿಯೂರು ರೈಲ್ವೆ ಮಾರ್ಗಕ್ಕೆ ಬದಲಾಗಿ ಹೊಸ ಮಾರ್ಗದ ಪ್ರಸ್ತಾವನೆಯನ್ನು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ತಜ್ಞರ ಸಮಿತಿ ತಯಾರಿಸಿದೆ.

ಪ್ರಸ್ತುತ ಕಾಂಣಿಗಾಡ್- ಕಾಣಿಯೂರು ಮಾರ್ಗದ ಪ್ರಸ್ತಾವನೆ ರೈಲ್ವೇ ಇಲಾಖೆ ಮುಂದಿದೆ. ಈ ಯೋಜನೆ ಪೂರ್ಣಗೊಂಡರೆ ಕೇರಳದಿಂದ ಬೆಂಗಳೂರು ತಲುಪುವ ಅಂತರ ಕಡಿಮೆಯಾಗಲಿದೆ ಎನ್ನುವುದು ಇಲಾಖೆಯ ಯೋಜನೆ. ಆದರೆ ಇಲ್ಲಿ ಕಾಂಞಗಾಡ್ ಹಾಗೂ ಕಾಣಿಯೂರು ನಡುವಿನ ಅಂತರ ಸುಮಾರು 135 ಕಿಲೋ ಮೀಟರ್. ಇದಕ್ಕೆ ಬದಲಾಗಿ ಕಾಂಣಿಗಾಡ್- ಕುಟ್ಟಿಕ್ಕಲ್- ಮುಳ್ಳೇರಿಯಾ ನಾಟೆಕಲ್ – ಏತಡ್ಕ- ಪೆರ್ಲ – ಅಡ್ಯನಡ್ಕ – ವಿಟ್ಲ- ಪುತ್ತೂರು ರೈಲ್ವೇ ಮಾರ್ಗ ನಿರ್ಮಾಣವಾದರೆ ಅನೇಕ ಅನುಕೂಲಗಳಿವೆ ಎನ್ನುವುದು ಪುತ್ತೂರು ವರ್ತರ ಸಂಘದ ಅಧ್ಯಕ್ಷ ವಾಮನ್‌ ತಿಳಿಸಿದ್ದಾರೆ.ಈ ಹೊಸ ರಸ್ತೆಯ ಅಂತರ ಕೇವಲ 85 ಕಿಲೋ ಮೀಟರ್. ಎರಡನೆಯದಾಗಿ, ರಸ್ತೆಗೆ ಹೊಂದಿಕೊಂಡಂತೆ ರೈಲ್ವೇ ಮಾರ್ಗ ನಿರ್ಮಾಣವಾಗುವುದರಿಂದ ಪರಿಸರ ನಾಶದ ಪ್ರಮಾಣ ಕಡಿಮೆಯಾಗಲಿದೆ. ಮರ ಗಿಡಗಳ ಹಾನಿ, ಗುಡ್ಡಗಳ ತೆರವು ಮೊದಲಾದ ಅನಾವಶ್ಯಕ ಪ್ರಕೃತಿ ನಾಶಕ್ಕೆ ಅವಕಾಶವೇ ಇರುವುದಿಲ್ಲ. ಮಾತ್ರವಲ್ಲ, ಪುತ್ತೂರು ಸೇರಿದಂತೆ ಅಸುಪಾಸಿನ ಪಟ್ಟಣಗಳ ಅಭಿವೃದ್ಧಿಗೆ ಇದು ತುಂಬಾ ಪೂರಕವಾಗಿರಲಿದೆ. ಕೇರಳ, ಕರ್ನಾಟಕದ ಮೈಸೂರು-ಬೆಂಗಳೂರು, ಮಹಾರಾಷ್ಟ್ರ ಈ ಮೂರು ರಾಜ್ಯಗಳು ಪರಸ್ಪರ ಹತ್ತಿರವಾಗಲಿದೆ. ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾಕೇಂದ್ರದ ಕೂಗಿಗೆ ಪೂರಕವಾಗಿ ಈ ರೈಲ್ವೇ ಹೊಸ ಮಾರ್ಗ ಪುತ್ತೂರಿಗೆ ಇನ್ನೊಂದು ಮೈಲಿಗಲ್ಲು. ಹಾಗಾಗಿ, ಈ ಪ್ರಸ್ತಾವನೆಯನ್ನು ಕೇಂದ್ರ ರೈಲ್ವೇ ಸಚಿವರಿಗೆ, ರೈಲ್ವೇ ಇಲಾಖೆಯ ರಾಜ್ಯ ಖಾತೆಯ ಸಚಿವರಿಗೆ ದಕ್ಷಿಣ ಕನ್ನಡ ಸಂಸದರ ಮೂಲಕ ಸಲ್ಲಿಸಲಾಗುವುದು ಎಂದು ವಾಮನ್ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!