ಕನ್ನಡ ಅನುತ್ತೀರ್ಣ ಅಧ್ಯಯನಕ್ಕೆ ಪ್ರಾಧಿಕಾರದಿಂದ ಉಪಸಮಿತಿ

Picture of Savistara

Savistara

Bureau Report

ಧಾರವಾಡ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿಇವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿರುವುದು ಕಳವಳಕಾರಿ. ಮಾತೃಭಾಷೆಯಲ್ಲೇ ವಿದ್ಯಾರ್ಥಿಗಳು ಹಿಂದೆ ಬೀಳುತ್ತಿರುವುದು ಏಕೆ? ಎಂಬ ಕುರಿತು ಪ್ರಾಧಿಕಾರದಿಂದ ಅಧ್ಯಯನ ನಡೆಸಲಾಗುವುದು. ಅದಕ್ಕಾಗಿ ಐವರು ಸದಸ್ಯರ ಉಪ ಸಮಿತಿ ರಚಿಸಿ 3 ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದರು. ನಗರದಲ್ಲಿ ಬುಧವಾರ ಮಾತನಾಡಿ, ಜು.23ಕ್ಕೆ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಉಪ ಸಮಿತಿ ರಚಿಸಲಾಗುವುದು. ಸಮಿತಿಯಲ್ಲಿ ಶಿಕ್ಷಣ ತಜ್ಞರು, ಕನ್ನಡ ಭಾಷಾ ಶಿಕ್ಷಕರು ಇರಲಿದ್ದಾರೆ.ಕನ್ನಡ ವಿಷಯದಲ್ಲಿ ಅನುತ್ತೀರ್ಣರಾದವರ ಜಿಲ್ಲಾವಾರು ಮಾಹಿತಿಯನ್ನು ಶಿಕ್ಷಣ ಇಲಾಖೆಯಿಂದ ಸಂಗ್ರಹಿಸಲಾಗುವುದು. ಅನುತ್ತೀರ್ಣರಾಗಲು ವಿದ್ಯಾರ್ಥಿ, ಶಿಕ್ಷಕ ಅಥವಾ ಪಠ್ಯ ಕಾರಣವೋ ಎಂಬುದನ್ನು ಸಮಿತಿ ಅಧ್ಯಯನ ಮಾಡಲಿದೆ ಎಂದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!