ರಾಜ್ಯದ ಮಹಿಳೆಯರಿಗೂ ಕೇರಳ ಬಸ್ ಪ್ರಯಾಣ ಉಚಿತ

Picture of Savistara

Savistara

Bureau Report

ಮಂಗಳೂರು, ಜೂ. 15: ಕೇರಳ ಸರಕಾರದ ಪ್ರಿಯದರ್ಶಿನಿ ಯೋಜನೆ ಆರಂಭಗೊಂಡಿದ್ದು, ಮಹಿಳೆಯರಿಗೂ ಸೋಮವಾರ ಕರ್ನಾಟಕದ ವರದಾನವಾಗಿದೆ. ಕೇರಳ ಮೂಲದ ಅಂತಾರಾಜ್ಯ ಬಸ್‌ಗಳಲ್ಲೂ ಎಲ್ಲಮಹಿಳೆ · ಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಗಡಿ ಹಂಚಿಕೊಂಡಿರುವ ದ. ಕ. ಜಿಲ್ಲೆಯ ಮಹಿಳೆಯರು ಕೇರಳದ ಪ್ರಿಯದರ್ಶಿನಿ ಯೋಜನೆಯ ಫಲಾನುಭವಿಗಳಾಗಿದ್ದಾರೆ.ಮೊದಲ ದಿನವೇ ನೂರಾರು ಮಹಿಳೆ ಯರು ಕೇರಳ ಮೂಲದ ಕೆಎಸ್ ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.ಪ್ರಮುಖವಾಗಿ ಕಾಸರಗೋಡು-ಮಂಗಳೂರು, ಕಾಸರಗೋಡು-ಪುತ್ತೂರು, ಕಾಸರಗೋಡು-ಸುಳ್ಯ ಮಾರ್ಗ ದಲ್ಲಿ ಸಂಚರಿಸುವ ಕೇರಳ ಬಸ್‌ಗಳಲ್ಲಿ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ ಕಾರಣ ಕರ್ನಾಟಕ ಮಹಿಳೆಯರಿಗೆ ಡಬಲ್ ಧಮಾಕ!

ಯಾವುದೇ ದಾಖಲೆ ಬೇಡ

ಕರ್ನಾಟಕ ಸರಕಾರದ ಮಾದರಿ ಯೋಜನೆಯಾಗಿರುವ ಶಕ್ತಿ ಯೋಜನೆ ಮೂಲಕ ಉಚಿತವಾಗಿ ಪ್ರಯಾಣಿಸಬೇ ಕಾದರೆ ಆಧಾರ್ ಕಾರ್ಡ್ ಕಡ್ಡಾಯ. ಲಕ್ಷುರಿ, ಅಂತಾರಾಜ್ಯ ಸಂಚರಿಸುವ ಬಸ್‌ಗಳಲ್ಲಿ ಶಕ್ತಿ ಯೋಜನೆ ಅನ್ವಯಿಸು ವುದಿಲ್ಲ ಮತ್ತು ಹೊರ ರಾಜ್ಯದ ಮಹಿಳೆ ಯರಿಗೂ ಉಚಿತವಿಲ್ಲ. ಆದರೆ, ಕೇರಳದ ಎಲ್ಲ ಅಂತಾರಾಜ್ಯ ಆರ್ಡಿನರಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಮಹಿಳೆಯರು ಮತ್ತು ಮಂಗಳಮುಖಿ ಯರಿಗೆ ಉಚಿತವಾಗಿದ್ದು, ಪ್ರಯಾಣದ ವೇಳೆ ಯಾವುದೇ ದಾಖಲೆ ಅಗತ್ಯವಿಲ್ಲ. ಉಚಿತ ಪ್ರಯಾಣದ ಟಿಕೆಟ್ ಪಡೆಯುವುದು ಮಾತ್ರ ಕಡ್ಡಾಯ.

ವಿದ್ಯಾರ್ಥಿನಿಯರಿಗೆ ಪ್ರಯೋಜನ

ಕಾಸರಗೋಡು, ಕುಂಬಳೆ, ಉಪ್ಪಳ, ಮಂಜೇಶ್ವರ ಸಹಿತ ವಿವಿಧ ಭಾಗಗಳಿಂದ ಹೆಚ್ಚಿನ ಟಿಕೆಟ್ ದರ ಪಾವತಿಸಿ ಮಂಗ ಳೂರಿನ ಹಲವು ಕಾಲೇಜುಗಳಿಗೆ ವಿದ್ಯಾರ್ಥಿನಿ ಯರು ಆಗಮಿಸುತ್ತಿದ್ದಾರೆ. ಅಲ್ಲದೆ, ಬದಿಯಡ್ಕ ಪೆರ್ಲ, ಅಡ್ಯನಡ್ಕ ಭಾಗದಿಂದ ಪುತ್ತೂರು, ಸುಳ್ಯದ ಕಾಲೇಜುಗಳಿಗೆ ವಿದ್ಯಾರ್ಥಿನಿಯರು ತೆರಳುತ್ತಿದ್ದಾರೆ. ಅವರಿಗೆಪ್ರಿಯದರ್ಶಿನಿ ಯೋಜನೆ ಲಾಭದಾಯಕವಾಗಿ ಪರಿಣಮಿಸಿದೆ.

ಕರ್ನಾಟಕ ಕೆಎಸ್‌ಆರ್‌ಟಿಸಿಗೆ ಆದಾಯ ನಷ್ಟ ಆತಂಕ

ಮಂಗಳೂರು ಹಾಗೂ ಕಾಸರ ಗೋಡು ಕೆಎಸ್‌ಆರ್‌ಟಿಸಿ ವಿಭಾಗ ದವರ ಒಪ್ಪಂದದಂತೆ ಪ್ರತೀ ಒಂದು ಗಂಟೆಗೊಮ್ಮೆ ಒಂದು ವಿಭಾಗದ ಬಸ್ ಗಳು ಸಂಚರಿಸುತ್ತವೆ. ಕಾಸರಗೋಡು ಮಂಗಳೂರು ಪ್ರಯಾಣಿಸುವ ಮಹಿಳೆಯರು ಕೇರಳ ಬಸ್‌ಗಳನ್ನೇ ಆಶ್ರಯಿಸಿದರೆ, ಕರ್ನಾಟಕ ಕೆಎಸ್ ಆರ್‌ಟಿಸಿ ಬಸ್‌ಗಳಿಗೆ ಆದಾಯ ನಷ್ಟದ ಭೀತಿ ಎದುರಾಗಬಹುದು ಎನ್ನಲಾಗುತ್ತಿದೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!