ವಿಶ್ವದ ದುಬಾರಿ ಮಾವು ಶ್ರೀರಾಮನಿಗೆ ಅರ್ಪಣೆ

Picture of Savistara

Savistara

Bureau Report

ಅಯೋಧ್ಯೆ: ವಿಶ್ವದ ಅತ್ಯಂತ ದುಬಾರಿ ಹಾಗೂ ಜಪಾನ್ ಮೂಲದ ‘ಮಿಯಾಜಾಕಿ’ ತಳಿಯ ಮಾವಿನ ಹಣ್ಣನ್ನು ಇದೇ ಮೊದಲ ಬಾರಿಗೆ ಅಯೋಧ್ಯೆಯ ರಾಮಮಂದಿರದಲ್ಲಿ ದೇವರಿಗೆ ಸಮರ್ಪಿಸಲಾಗಿದೆ. ‘ಸೂರ್ಯನ ಮೊಟ್ಟೆ’ ಎಂದೇ ಜನಪ್ರಿಯವಾಗಿರುವ ಈ ವಿಶಿಷ್ಟ ಮಾವಿನ ಹಣ್ಣನ್ನು ಅಯೋಧ್ಯೆಯ ಸ್ಥಳೀಯ ರೈತರೊಬ್ಬರು ತಮ್ಮ ತೋಟದಲ್ಲಿ ಬೆಳೆದಿದ್ದಾರೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ಪ್ರತಿ ಕೆ.ಜಿ.ಗೆ 2.5 ಲಕ್ಷದಿಂದ 3 ಲಕ್ಷ ರೂಪಾಯಿ ಬೆಲೆ ಇದೆ. ಕೇವಲ ಒಂದು ಹಣ್ಣಿನ ಬೆಲೆಯೇ ಅಂದಾಜು 1 ಲಕ್ಷ ರೂ.ಗಳಷ್ಟಿದ್ದು, ಇದು ಜಗತ್ತಿನ ಅತ್ಯಂತ ದುಬಾರಿ ಮಾವಿನ ತಳಿಯಾಗಿದೆ. ಸೋಮವಾರ ಸ್ಥಳೀಯ ಸಂಪ್ರದಾಯದಂತೆ ತುಳಸಿ ಎಲೆಯೊಂದಿಗೆ ಭಕ್ತಿಪೂರ್ವಕವಾಗಿ ಈ ಹಣ್ಣನ್ನು ದೇವರಿಗೆ ಅರ್ಪಿಸಲಾಯಿತು. ರೈತ ಓಂಪ್ರಕಾಶ್ ಸಿಂಗ್ ಅವರು ಅಯೋಧ್ಯೆಯ ಹವಾಮಾನದಲ್ಲಿ ಇದು ಬೆಳೆಯುತ್ತದೆಯೇ ಎಂದು ಪರೀಕ್ಷಿಸಲು ಎರಡು ವರ್ಷಗಳ

ಹಿಂದೆ ಈ ಸಸಿ ನೆಟ್ಟಿದ್ದರು. ಗಿಡ ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಂಡಿದ್ದು, ಈ ಬಾರಿ 150ರಿಂದ 300 ಗ್ರಾಂ ತೂಕದ ಸುಮಾರು ಒಂದು ಡಜನ್ ಹಣ್ಣುಗಳನ್ನು ಬಿಟ್ಟಿದೆ. ತಮ್ಮ ಮೊದಲ ಬೆಳೆಯನ್ನು ದೇವರಿಗೆ ಅರ್ಪಿಸುವ ಹಿಂದೂ ಸಂಪ್ರದಾಯದಂತೆ ಈ ಹಣ್ಣನ್ನು ನೈವೇದ್ಯ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ಈ ತಳಿಯು ಇತರ ಹಣ್ಣುಗಳಿಗಿಂತ ಹೆಚ್ಚು ಸಿಹಿಯಾಗಿದ್ದು, ನಾರಿನಂಶ ಹಾಗೂ ಓಂಪ್ರಕಾಶ್ ಸಿಂಗ್ ಅವರು ಮಿಯಾಜಾಕಿ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಮಾತ್ರವಲ್ಲದೆ, ಥಾಯ್ಲೆಂಡ್‌ನ ‘ಬನಾನಾ ಭಾರತದ ‘ಚೌಸಾ’ ಮತ್ತು ‘ದಶೇರಿ’ಯಂಥ ತಳಿಗಳನ್ನೂ ಮ್ಯಾಂಗೋ’, ಅಸ್ಟ್ರೇಲಿಯಾದ ‘ಆ‌ರ್2ಇ2’, ಬೆಳೆಯುತ್ತಿದ್ದಾರೆ. ಮಹಂತ್ ಸೀತಾರಾಮ್ ದಾಸ್ ಜಿ ಮಹಾರಾಜ್ ಅವರು ಈ ಹಣ್ಣಿನ ನೈವೇದ್ಯದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಇದರ ಬಣ್ಣವು ಜಗತ್ತಿಗೆ ಬೆಳಕು ನೀಡುವ ಸೂರ್ಯ ದೇವರಿಗೆ ಹೋಲುತ್ತದೆ ಎಂದು ಬಣ್ಣಿಸಿದ್ದಾರೆ.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!