ಇಂದು ಟ್ರಂಪ್-ಮೋದಿ ಭೇಟಿ: ಡೀಲ್ ಫೈನಲ್?

Picture of Savistara

Savistara

Bureau Report

ಪ್ಯಾರಿಸ್‌: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗದಲ್ಲಿ ಭಾಗಿಯಾಗಿರುವ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ವೇಳೆ ಭಾರತ ಹಾಗೂ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ, ಇತ್ತೀಚೆಗೆ ಭಾರತೀಯ ನಾವಿಕರ ಮೇಲೆ ಅಮೆರಿಕ ದಾಳಿ ಸೇರಿ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಭಾರತೀಯ ಸಿಬ್ಬಂದಿಯಿದ್ದ ಹಡಗಿನ ಮೇಲೆ ಹೊರ್ಮುಜ್ ಜಲಸಂಧಿ ಬಳಿ ಅಮೆರಿಕ ದಾಳಿ ನಡೆಸಿದ್ದ ಪರಿಣಾಮ 3 ಮಂದಿ ಮೃತಪಟ್ಟಿದ್ದರು. ಈ ಘಟನೆಯನ್ನು ಭಾರತವು ತೀವ್ರವಾಗಿ ಖಂಡಿಸಿತ್ತು.ಇದಲ್ಲದೇ ಸುಂಕ ವಿನಾಯ್ತಿಯೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ಭಾರತ ಹಾಗೂ ಅಮೆರಿಕ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಈ ವಿಚಾರವೂ ದ್ವಿಪಕ್ಷೀಯ ಮಾತುಕತೆಯ ಪ್ರಮುಖ ಅಂಶ ಎನ್ನಲಾಗಿದೆ. ಶ್ವೇತಭವನದ ಮಾಹಿತಿಯಂತೆ ಬುಧವಾರ ಮಧ್ಯಾಹ್ನ 2.45(ಸ್ಥಳೀಯ ಸಮಯ)ಕ್ಕೆ ಮೋದಿ-ಟ್ರಂಪ್‌ ಸಭೆ ನಡೆಯಲಿದ್ದು, 3.30ಕ್ಕೆ ಟ್ರಂಪ್ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.ಇದಕ್ಕೂ ಮೊದಲು ಫ್ಲೋವಾಕಿಯಾಗೆ ತೆರಳಿದ್ದ ಮೋದಿ ಅಲ್ಲಿಂದ ಸ್ವಿಜರ್ಲೆಂಡ್‌ಗೆ ಭೇಟಿ ಕೊಟ್ಟು ಜಿನೀವಾದಿಂದ ಜಿ7 ಶೃಂಗ ನಡೆಯುತ್ತಿರುವ ಏವಿಯನ್ ನಗರಕ್ಕೆ ಬಂದಿಳಿದಿದ್ದಾರೆ. ಭಾರತವು ಸತತ 8ನೇ ಬಾರಿಗೆ ಜಿ7 ಶೃಂಗದಲ್ಲಿ ಅತಿಥಿ ರಾಷ್ಟ್ರವಾಗಿ ಆಹ್ವಾನಿಸಲ್ಪಟ್ಟಿದೆ.

16 ತಿಂಗಳುಗಳ ಬಳಿಕ ಮುಖಾಮುಖೀ: ಜಿ7 ಶೃಂಗಸಭೆ ಹಿನ್ನೆಲೆಯಲ್ಲಿ ಮಂಗಳವಾರವೇ ಮೋದಿ, ಟ್ರಂಪ್ ಸೇರಿ ಹಲವು ದೇಶದ ನಾಯಕರು ಫ್ರಾನ್ಸ್ ತಲುಪಿದ್ದಾರೆ. ಶೃಂಗದ ಆರಂಭಕ್ಕೂ ಮುನ್ನ ವಿಶ್ವ ನಾಯಕರು ಫೋಟೋಗೆ ಪೋಸ್ ನೀಡಿದ್ದು, ಇದಕ್ಕೂ ಮೊದಲು ಮೋದಿ ಹಾಗೂ ಟ್ರಂಪ್ ಮುಖಾಮುಖೀಯಾಗಿ ಕೈ ಕುಲುಕಿದ್ದಾರೆ. ಇದರೊಂದಿಗೆ 16 ತಿಂಗಳುಗಳ ಬಳಿಕ ಮೋದಿ ಹಾಗೂ ಟ್ರಂಪ್ ಪರಸ್ಪರ ಭೇಟಿಯಾದಂತಾಗಿದೆ. 2025ರ ಫೆಬ್ರುವರಿಯಲ್ಲಿ ಮೋದಿ ಅಮೆರಿಕಕ್ಕೆ ತೆರಳಿದ್ದ ವೇಳೆ ಕೊನೆಯ-ದಾಗಿ ಉಭಯ ನಾಯಕರೂ ಭೇಟಿಯಾಗಿದ್ದರು.

ನಾನಿರದಿದ್ದರೆ ಇಸ್ರೇಲ್ ಇರುತ್ತಿರಲಿಲ್ಲ: ನೆತನ್ಯಾಹುಗೆ ಟ್ರಂಪ್ ಚಾಟಿ

ಅಮೆರಿಕ ಇಲ್ಲದಿದ್ದಿದ್ದರೆ ಇಸ್ರೇಲ್ ಎಂಬ ದೇಶವೇ ಇರುತ್ತಿರಲಿಲ್ಲ, ನಾನಿರದಿದ್ದರೆ ಇಸ್ರೇಲ್ ಇರುತ್ತಿರಲಿಲ್ಲ ಏಕೆಂದರೆ ನಾನು ಇಸ್ರೇಲ್‌ಗೆ ಮಾಡಿದ್ದನ್ನು ಬೇರ್ಯಾವ ಅಧ್ಯಕ್ಷರೂ ಮಾಡಲು ಸಿದ್ಧರಿರಲಿಲ್ಲ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಫ್ರಾನ್ಸ್‌ನಲ್ಲಿ ಪುನರುಚ್ಚರಿಸಿದ್ದಾರೆ. ಇಸ್ರೇಲ್‌ ಅಧ್ಯಕ್ಷ ನೆತನ್ಯಾಹು ಜತೆ ನನಗೆ ಉತ್ತಮ ಸಂಬಂಧವಿದೆ. ಆದರೆ ಲೆಬನಾನ್ ವಿಚಾರದಲ್ಲಿ ಅವರು ಎಚ್ಚರಿಕೆ ವಹಿಸಬೇಕು. ಹೆಬ್ಬುಲ್ಲಾ ಉಗ್ರರ ಹುಡುಕಾಟಕ್ಕಾಗಿ ಲೆಬನಾನ್‌ನಲ್ಲಿ ಕಟ್ಟಡಗಳ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದ್ದು ಅಮಾಯಕರ ಸಾವಿಗೂ ಕಾರಣವಾಗುತ್ತಿದೆ. ಈ ಬಗ್ಗೆ ಇಸ್ರೇಲ್ ಎಚ್ಚರಿಕೆ ವಹಿಸಬೇಕು ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ಉಕ್ರೇನ್ ಯುದ್ಧ ತಡೆಗೆ ಜಿ7 ಶೃಂಗದಲ್ಲಿ ಅಮೆರಿಕ ಮಿತ್ರ ರಾಷ್ಟ್ರಗಳ ಚರ್ಚೆ

4 ವರ್ಷಗಳಿಗೂ ಅಧಿಕ ಸಮಯದಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್ ಯುದ್ಧವನ್ನು ನಿಲ್ಲಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ರೂಪಿಸಿರುವ ಕಾರ್ಯಸೂಚಿಗೆ ಬೆಂಬಲ ನೀಡುವುದಾಗಿ ಅಮೆರಿಕ ಮಿತ್ರ ರಾಷ್ಟ್ರಗಳು ಜಿ7 ಶೃಂಗಸಭೆಯಲ್ಲಿ ನಿರ್ಣಯ ಕೈಗೊಂಡಿವೆ. ಉಕ್ರೇನ್‌ಗೆ ಹೆಚ್ಚಿನ ಬೆಂಬಲ ನೀಡಿ ರಷ್ಯಾ ಮೇಲೆ ಮತ್ತಷ್ಟು ಒತ್ತಡ ಹಾಕುವ ಮೂಲಕ ಶಾಂತಿ ಒಪ್ಪಂದ ಮಾಡಿಸಲು ಟ್ರಂಪ್ ಮನವೊಲಿಸುವುದಾಗಿ ಅತಿಥೇಯ ರಾಷ್ಟ್ರ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರನ್ ಹೇಳಿದ್ದಾರೆ.

ಜಗತ್ತು ಇನ್ನು ಜಿ7 ರಾಷ್ಟ್ರಗಳಿಂದ ನಡೆಯಲ್ಲ: ಕೆನಡಾ ಪ್ರಧಾನಿ ಕಾರ್ನಿ

ಜಗತ್ತು ಇನ್ನು ಮುಂದೆ ಜಿ7 ರಾಷ್ಟ್ರಗಳಿಂದ ನಿಯಂತ್ರಿಸಲ್ಪಡಲ್ಲ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಹೇಳಿದ್ದಾರೆ. ಜಿ7 ಶೃಂಗದಲ್ಲಿ ಭಾರತದ ಭಾಗವಹಿಸುವಿಕೆಯು ಇದಕ್ಕೆ ಸಾಕ್ಷಿ ಎಂದು ಶ್ಲಾ ಸಿರುವ ಕಾರ್ನಿ, ಜಿ7 ಸದಸ್ಯರಲ್ಲದ ದೇಶಗಳು ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಹೆಚ್ಚು ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಭಾರತ, ಬ್ರೆಜಿಲ್, ಕೊಲ್ಲಿ ರಾಷ್ಟ್ರಗಳು, ಕೀನ್ಯಾದ ನಾಯಕರೂ ಸಭೆಯಲ್ಲಿ ಭಾಗಿಯಾಗಿದ್ದು, ಈ ಮೂಲಕ ಜಿ7 ವಿಶ್ವವನ್ನು ನಿಯಂತ್ರಿಸುವುದಿಲ್ಲ ಎಂಬ ಮಾನ್ಯತೆ ನೀಡಿವೆ ಎಂದಿದ್ದಾರೆ.

[t4b-ticker]
error: Content is protected !!