ಗಣೇಶೋತ್ಸವ ಇನ್ನು ಮಹಾರಾಷ್ಟ್ರದ “ರಾಜ್ಯಹಬ್ಬ’: ಸರ್ಕಾರ

Picture of Savistara

Savistara

Bureau Report

ಮುಂಬೈ: ಮಹಾರಾಷ್ಟ್ರದಲ್ಲಿ ಸುಮಾರು 1 ಶತಮಾನದಿಂದ ಆಚರಣೆ ಮಾಡಲಾಗುತ್ತಿರುವ ಸಾರ್ವಜನಿಕ ಗಣೇಶೋತ್ಸವವನ್ನು “ರಾಜ್ಯ ಹಬ್ಬ’ವಾಗಿ ಘೋಷಣೆ ಮಾಡಲಾಗಿದೆ.ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಮಹಾರಾಷ್ಟ್ರ ಸರ್ಕಾರವು ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದೆ.ವಿಧಾನಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಸ್ಕೃತಿ ಸಚಿವ ಆಶೀಶ್ ಶೇಲಾರ್, “1893ರಲ್ಲಿ ಬಾಲ ಗಂಗಾಧರ ತಿಲಕ್ ಅವರು ಈ ಗಣೇಶೋತ್ಸವವನ್ನು ಆರಂಭಿಸಿದ್ದರು. ಇದು ರಾಜ್ಯದಲ್ಲಿ ಸಾಮಾಜಿಕ ಒಗ್ಗಟ್ಟು, ರಾಷ್ಟ್ರೀಯತೆಯನ್ನು ಮೂಡಿಸಿತ್ತು. ಹೀಗಾಗಿ ಇದನ್ನು ರಾಜ್ಯ ಹಬ್ಬವಾಗಿ ಘೋಷಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

[t4b-ticker]
error: Content is protected !!