
ಬೆಳಕು ಕೊಟ್ಟು ತಾವು ಕತ್ತಲಲ್ಲಿ ಕುಳಿತಿದ್ದ ಜನಗಳಿಗೆ ಬೆಳಕು ಮೂಡುವ ಸಮಯ
ಸಿಗಂಧೂರು ಚೌಡೇಶ್ವರಿ ಆಲಯಕ್ಕೆ ಸುಲಭ ಸಂಪರ್ಕ ಸಾಧಿಸುವ ಅಂಬರಗೋಡು -ಕಳಸವಳ್ಳಿ ಸೇತುವೆ ಇಂದು ಲೋಕಾರ್ಪಣೆ ಗೊಳ್ಳುತ್ತಿದೆ. ವಿದ್ಯುತ್ ಯೋಜನೆಗಾಗಿ ಡ್ಯಾಮ್ ನಿರ್ಮಿಸಿದಾಗ ಹಲವು ಜನರ ಮನೆಗಳು ಮುಳುಗಿದ್ದ ಜನರನ್ನು ಸ್ಥಳಾಂತರ ಮಾಡಿದ ಸರಕಾರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಇದ್ದಾಗ ಆ ಜನ ಹೋರಾಟ ಶುರು ಮಾಡಿದರು.ಈ ಯೋಜನೆ ಕಾರ್ಯಗತವಾಗುವಲ್ಲಿ ಶ್ರಮಿಸಿದ್ದು ಸಂಸದ ಬಿವೈ ರಾಘವೇಂದ್ರ ,ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಹಾಗೂ ನಿತಿನ್ ಗಡ್ಕರಿ ಹಾಗೂ ಮೋದಿಜೀಯವರ ಸರಕಾರ. ಪ್ರಸನ್ನ ಕೆರೆಕೈ ಪಾತ್ರ ಉಲ್ಲೇಖನೀಯ
ಕರೂರು, ತುಮರಿ ಭಾಗದ ಜನ ಇಷ್ಟು ದಿನ ಆರೋಗ್ಯ ಸಮಸ್ಯೆ ಆದಾಗ ಪಟ್ಟ ಕಷ್ಟ , ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಎಲ್ಲೆಲ್ಲೋ ಬಾಡಿಗೆ ಮನೆ ಮಾಡಿಕೊಂಡು ಕುಳಿತ ಕೆಲ ಜನ. ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಮುಕ್ತಿ ದೊರಕುತ್ತಿದೆ.
ಈ ಸೇತುವೆ 2.44 ಕಿ.ಮೀ ಉದ್ದವಿದ್ದು 16 ಮೀ ಅಗಲ ಹೊಂದಿರುತ್ತದೆ ಇದಕ್ಕೆ 2018ರಲ್ಲಿ ಶಿಲಾನ್ಯಾಸ ಮಾಡಲಾಗಿತ್ತು.
ಇನ್ಮೇಲೆ ಈ ಜನ ನಮ್ಮ ನಿಮ್ಮಂತೆ ಸಾಮಾನ್ಯ ಜೀವನ ನಡೆಸಬಹುದು, ಹೊಳೆ ದಾಟಲು ದೋಣಿಗೆ ಕಾಯಬೇಕಿಲ್ಲ ಒಬ್ಬ ಸಂಸದ ಮನಸ್ಸು,ಇಚ್ಚಾ ಶಕ್ತಿಯಿದ್ದರೆ ಏನನ್ನು ಮಾಡಬಹುದು ಅನ್ನೋದಕ್ಕೆ ಬಿವೈ ರಾಘವೇಂದ್ರ ರು ಸಾಕ್ಷಿಯಾಗಿದ್ದರೆ ಈ ಶತಮಾನದ ಹೊಸ ಬೆಳಕಿಗೆ ಸಿಗಂದೂರು ಸಾಕ್ಷಿಯಾಗುತ್ತಿದೆ. ಪಕ್ಷಾತೀತವಾಗಿ ಇಂತಹ ಕಾರ್ಯವನ್ನು ಬೆಂಬಲಿಸಿದಾಗ ಮಾತ್ರ ನಾವು ಪ್ರಜ್ಞಾವಂತ ಪ್ರಜೆಯಾಗಲು ಸಾಧ್ಯ.














































