ಸುಳ್ಯದಲ್ಲಿ ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನೆ

Picture of Savistara

Savistara

Bureau Report

ಸುಳ್ಯ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಮತ್ತು ಕೆಂಪುಕಲ್ಲು ಕೊರತೆ ವಿರುದ್ಧ ಸುಳ್ಯ ಬಿಜೆಪಿ ಮಂಡಲ ವತಿಯಿಂದ ಖಾಸಗಿ ಬಸ್ ನಿಲ್ದಾಣ ಬಳಿ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಕೆಂಪು ಕಲ್ಲು, ಮರಳು ಕೊರತೆಯಿಂದ ನೂರಾರು ಕುಟುಂಬಗಳಿಗೆ ತೊಂದರೆಯಾಗಿದೆ, ಮನೆ,ಕಟ್ಟಡ ನಿರ್ಮಾಣ ಅರ್ಧಕ್ಕೆ ಬಾಕಿ ಉಳಿದಿದ್ದು ಅಭಿವೃದ್ಧಿ ಕುಂಠಿತವಾಗಿದ್ದು ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯೆಂದು ಆರೋಪಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ ಕೆಂಪು ಕಲ್ಲು,ಮರಳು ಅಲಭ್ಯತೆ ಯಿಂದ ಸಾವಿರಾರು ಕಟ್ಟಡ ಕಾರ್ಮಿಕರು,ಲಾರಿ ಮಾಲಕರು,ಅದನ್ನೇ ನಂಬಿ ಬದುಕು ನಡೆಸುವವರಿಗೆ ತೊಂದರೆಯಾಗಿದೆ ಸರ್ಕಾರದ ಅಸ್ಪಷ್ಟ ನೀತಿಯಿಂದ ಈ ಸಮಸ್ಯೆ ಉಂಟಾಗಿದ್ದು ತಕ್ಷಣ ಈ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಸರ್ಕಾರ ಮಾಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಎ.ಟಿ ಕುಸುಮಧಾರ,ವಿನಯ್ ಕಂದಡ್ಕ,ಸುಬೋಧ್ ಶೆಟ್ಟಿ ಮೇನಾಳ,ಶಶಿಕಲಾ ನೀರಬಿದಿರೆ,ಶ್ರೀಕಾಂತ್ ಮಾವಿನಕಟ್ಟೆ,ಬಿಜೆಪಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

[t4b-ticker]
error: Content is protected !!