ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಸಿ. ಕಿಶೋರ್ ಕುಮಾರ್ ಪುತ್ತೂರು ಅವರು ಮಂಗಳೂರು ಸೆಂಟ್ರಲ್ ನಿಂದ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ (ಜಮ್ಮು ಮತ್ತು ಕಾಶ್ಮೀರ) ಗೆ ಸಾಗುವ ನವಯುಗ ಎಕ್ಸ್‌ಪ್ರೆಸ್ ರೈಲನ್ನು ಹೊಸ ಮಾರ್ಗದಲ್ಲಿ ಪುನರಾರಂಭಿಸುವ ಸಾಧ್ಯತಾ ಕ್ರಮಕ್ಕೆ ರಾಜ್ಯ ರೈಲ್ವೆ ಸಚಿವ ವಿ. ಸೊಮ್ಮಣ್ಣ ಮಾಡಿದರು.
ನವಯುಗ ಎಕ್ಸ್‌ಪ್ರೆಸ್ (ಟ್ರೆನ್ ಸಂಖ್ಯೆ 16687 / 16688) ಮಂಗಳೂರು ಸೆಂಟ್ರಲ್ – ಹಾಸನ – ಅರಸಿಕೇರಿ – ಹುಬ್ಬಳ್ಳಿ – ಬೆಳಗಾವಿ – ಮಿರಜ್ – ಪುಣೆ – ನವದೆಹಲಿ – ಪಠಾನ್ಕೋಟ್ – ಜಮ್ಮು – ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ.ಈ ಸಂಬಂಧ ವಿ. ಸೊಮ್ಮಣ್ಣ ಅವರು ಈಗಾಗಲೇ ಸಂಬಂಧಿತ ರೈಲ್ವೆ ವಿಭಾಗಗಳಿಗೆ ರೈಲು ಸೇವೆಯ ಪುನರ್ ಸ್ಥಾಪನೆಯ ಕುರಿತು ಗಮನ ಸೆಳೆದಿದ್ದಾರೆ. ಈ ಬೆನ್ನಲ್ಲೇ ಕಿಶೋರ್ ಕುಮಾರ್ ಅವರು ಈ ಪ್ರಯತ್ನಕ್ಕೆ ಧನ್ಯವಾದ ಸಲ್ಲಿಸಿ, ಈ ರೈಲು ಸಾಗುವ ಕೇಂದ್ರಗಳ ಪ್ರಮುಖ ಸಂಸದರ ಪ್ರಹ್ಲಾದ್ ಜೋಶಿ, ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಈ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. “ಮಂಗಳೂರು ಮತ್ತು ಕರಾವಳಿ ಪ್ರದೇಶದ ಜನರಿಗೆ ಉತ್ತರ ಭಾರತದ ಪ್ರಮುಖ ತೀರ್ಥಕ್ಷೇತ್ರವಾದ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ಸಂಪರ್ಕ ಕಲ್ಪಿಸುವ ನವಯುಗ ಎಕ್ಸ್‌ಪ್ರೆಸ್ ಮರುಪ್ರಾರಂಭದಿಂದ ಭಕ್ತಿಗೆ, ಪ್ರವಾಸೋದ್ಯಮಕ್ಕೆ, ಸೇನೆಯಲ್ಲಿ ಸೇವೆ ಸಲ್ಲಿಸುವ ಯೋಧರಿಗೆ, ವ್ಯಾಪಾರಿಗೂ ಸಹ ಜೋಡಣೆ ಸಾಧ್ಯವಾಗುತ್ತದೆ. ಈ ರೈಲನ್ನು ನಿಗದಿತ ಹೊಸ ಮಾರ್ಗದಲ್ಲಿ ಪುನರಾರಂಭಿಸಲು ರಾಜ್ಯದ ಎಲ್ಲಾ ಸಂಸದರು ಶ್ರಮಿಸಿ, ರೈಲ್ವೆ ಸಚಿವಾಲಯದ ಗಮನ ಸೆಳೆಯಬೇಕು.” ಕಿಶೋರ್ ಕುಮಾರ್ ಪುತ್ತೂರು ಎಂದು ಹೇಳಿದ್ದಾರೆ.











































