ಕೊಡಗು ಬಿಜೆಪಿಯಲ್ಲಿ ಹೊಸ ಸಂಚಲನ | ರಸ್ತೆ ಅವ್ಯವಸ್ಥೆ, ಕಾಮಗಾರಿ ವಿಚಾರವಾಗಿ ಆಡಳಿತರೂಡ ಕಾಂಗ್ರೆಸ್ ಪಕ್ಷಕ್ಕೆ ಬಿಸಿ ಮುಟ್ಟಿಸುತ್ತಿರುವ ಬಿಜೆಪಿ ನಾಯಕ ಶಾಂತಯೆಂಡ ರವಿ ಕುಶಾಲಪ್ಪ

Picture of Savistara

Savistara

Bureau Report

ಮಡಿಕೇರಿ :ಕಳೆದ ಆನೇಕ ವರ್ಷಗಳಿಂದ ಬಿಜೆಪಿ ಯ ಭದ್ರಕೋಟೆಯಾಗಿದ್ದ ಕೊಡಗು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿತ್ತು.ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವೈಫಲ್ಯ ಬಗ್ಗೆ ಬಿಜೆಪಿ ಮುಖಂಡ ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೆಯೆಂಡ ರವಿ ಕುಶಾಲಪ್ಪ ಕೊಡಗಿನ ರಸ್ತೆ ಅವ್ಯವಸ್ಥೆ ಬಗ್ಗೆ ವಿಡಿಯೋ ಚಿತ್ರೀಕರಣ ರಿಯಲ್ ಫಾಕ್ಟ್ ಚೆಕ್ ಮಾಡುವ ಮುಖಾಂತರ ಜಿಲ್ಲೆಯ ಶಾಸಕರಾದ ಮಂತರ್ ಗೌಡ ಮತ್ತು ಪೊನ್ನಣ್ಣ ರಿಗೆ ಸವಾಲು ಹಾಕಿದ್ದಾರೆ.ಕೊಡಗಿನ ಕಾಡಾನೆ ಸಮಸ್ಯೆ, ಗ್ರಾಮೀಣ ರಸ್ತೆಗಳ ದುಸ್ಥಿತಿ, ಕುಡಿಯುವ ನೀರಿನ ಹಾಹಾಕಾರ ಸೇರಿದಂತೆ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಅತ್ಯಂತ ವಿಸ್ತಾರವಾಗಿ ಅಂಕಿ-ಅಂಶಗಳನ್ನು ಜೊತೆಗಿಟ್ಟುಕೊಂಡಿರುವ ರವಿ ಕುಶಾಲಪ್ಪರ ಸ್ಪಷ್ಟವಾದ ಮಾತು ಕೊಡಗು ಬಿಜೆಪಿ ಕಾರ್ಯಕರ್ತರಿಗೆ ಹೊಸ ಹುರುಪು ತಂದಿದೆ.ಅರೆಭಾಷೆ ಮತ್ತು ಒಕ್ಕಲಿಗ ಗೌಡ ರ ಜೊತೆ ನಿಕಟ ಸಂಭಂದ ಹಿಂದುತ್ವ ವಿಚಾರದಲ್ಲಿ ಅಚಲವಾದ ನಂಬಿಕೆ,ಪಕ್ಷ ನಿಷ್ಠೆ,ಯಾವುದೇ ರಾಜಿಯಿಲ್ಲದಿರುವುದು ಕಾರ್ಯಕರ್ತರ ವಿಶ್ವಾಸ ಹೆಚ್ಚಿಸಿದೆ. 20 ತಿಂಗಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಯಡೀಯೂರಪ್ಪನವರು ಮುಖ್ಯಂತ್ರಿಯಾದ ಸಂದರ್ಭದಲ್ಲಿ 2.25 ಕೋಟಿ ವಿಶೇಷ ಅನುದಾನ ಕೊಟ್ಟಿದ್ದರು ಅದನ್ನು 28 ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ತಲಾ 8 ಲಕ್ಷವನ್ನು ತಮ್ಮ ತಮ್ಮ ವ್ಯಾಪ್ತಿಗೆ ಬರುವ ಕೆಲಸವನ್ನು ಮಾಡಲು ಅನುಕೂಲ ಮಾಡಿಕೊಟ್ಟಿರುತ್ತಾರೆ.ಅತ್ಯುತ್ತಮ ಜಿಲ್ಲಾಪಂಚಾಯಿತಿಗೆ ನೀಡುವ ಪ್ರಶಸ್ತಿಯನ್ನು ಕೂಡ ನನ್ನ 20 ತಿಂಗಳ ಅವಧಿಯಲ್ಲಿ ಪಡೆದುಕೊಂಡಿದ್ದು, ⁠ಸೋಮವಾರಪೇಟೆ ತಾಲೂಕು ಶಾಂತಳ್ಳಿ ಹೋಬ್ಳಿಯ ನಾಡ್ನನಳ್ಳಿ ಗ್ರಾಮಕ್ಕೆ ಸೇತುವೆ,ಮೂರ್ನಾಡು ಪಂಚಾಯಿತಿಯಲ್ಲಿ ಮಾಚಿಕಡವು ಸೇತುವೆ ನಿರ್ಮಾಣ ಕಾರ್ಯ ಇವರ ಅವಧಿಯಲ್ಲಾಗಿದೆ.ವಿಶೇಷ ಅನುಧಾನದಲ್ಲಿ ಅಯ್ಯಂಗೇರಿ ಪಂಚಾಯಿತಿಯ ಬಂಡಿಕಡವು ಸೇತುವೆ ನಿರ್ಮಾಣ,ಜಿಲ್ಲೆಯ ನಾನಾ ಭಾಗಗಳಲ್ಲಿನ ಜನರಿಗೆ ಕರೆಂಟ್ ಪಂಪ್ ಕರಿಕೆಯಿಂದ -ಬಿರುನಾಣಿಯವರೆಗೆ ಹಲವಾರು ರಸ್ತೆ ಕೆಲಸಜಿಲ್ಲೆಯ ಹಲವಾರು ಶಾಲೆಗಳಿಗೆ ಕಟ್ಟಡ ನಿರ್ಮಾಣದ ಕಾರ್ಯ. ಹಲವಾರು ಹಾಡಿಗಳಿಗೆ ಬೇಟಿ ಕೊಟ್ಟು ನಿರ್ಗತಿಗರಿಗೆ ಮನೆ ಕಟ್ಟಿಸಿ ಕೊಡುವ ಕೆಲಸ ಕೂಡ ಮಾಡಿದ್ದಾರೆ.ಮುಂದಿನ ರಾಜಕೀಯ ಲೆಕ್ಕಾಚಾರ ಏನಿದ್ದರೂ ರವಿ ಕುಶಾಲಪ್ಪ ರ ಅಭಿವೃದ್ಧಿ ಕಾಳಜಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ

[t4b-ticker]
error: Content is protected !!