ಸವಿಸ್ತಾರ ನ್ಯೂಸ್ ಪಾಸಿಟಿವ್ ಇಂಪ್ಯಾಕ್ಟ್ | ಕುಕ್ಕೆ ದೇವಾಲಯದಲ್ಲಿ ಮೂಲ ಪ್ರಸಾದ ತೀರ್ಥ ವ್ಯವಸ್ಥೆ ಪ್ರಾರಂಭ

Picture of Savistara

Savistara

Bureau Report

​ಕುಕ್ಕೆ: ರಾಜ್ಯದ ನಂ 1 ದೇವಸ್ಥಾನ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕೆಲವು ದಿನಗಳಿಂದ ತೀರ್ಥದ ಬಾಟಲಿ ಸಿಗದೆ ಭಕ್ತಾದಿಗಳು ಅನುಭವಿಸುತ್ತಿದ್ದ ತೊಂದರೆ ಹಾಗೂ ಅವರ ಧಾರ್ಮಿಕ ಭಾವನೆಗಳಿಗಾಗಿದ್ದ ನೋವಿನ ಬಗ್ಗೆ ಸವಿಸ್ತಾರ ​ಮಾಧ್ಯಮದಲ್ಲಿ ಸುದ್ದಿ ಪ್ರಕಟ ಮಾಡಿತ್ತು ಈ ವಿಚಾರ ಪ್ರಸಾರವಾದ ತಕ್ಷಣವೇ ಅಧಿಕಾರಿಗಳು ಎಚ್ಚೆತ್ತುಕೊಂಡು, ಭಕ್ತರ ಸಮಸ್ಯೆಯ ತೀವ್ರತೆಯನ್ನು ಅರಿತು ಕೂಡಲೇ ಪವಿತ್ರ ತೀರ್ಥದ ಬಾಟಲಿಗಳ ಪೂರೈಕೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದಾರೆ.​​ದೂರದ ಊರುಗಳಿಂದ ಬರುವ ಭಕ್ತರ ಶ್ರದ್ದೆ ನಂಬಿಕೆ ಭಾಗವಾಗಿದ್ದ ಮೂಲ ಪ್ರಸಾದ ತೀರ್ಥ ಬಾಟಲಿ ನೀಡದ ಬಗ್ಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು ನಿನ್ನೆಯಿಂದ ಬಾಟಲಿ ತೀರ್ಥ ನೀಡಲು ಪ್ರಾರಂಭ ಮಾಡಿದ್ದು ಭಕ್ತರಿಗೆ ಸಂತಸ ತಂದಿದೆ ಈ ಬಗ್ಗೆ ಕ್ಷೇತ್ರದ ಭಕ್ತರು,ಸ್ಥಳೀಯ ಪ್ರಮುಖರು,ಮಾಜಿ ಟ್ರಸ್ಟಿ ಪ್ರಸನ್ನ ದರ್ಬೆ ಭಕ್ತರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಇದೀಗ ತೀರ್ಥ ಎಂದಿನಂತೆ ಭಕ್ತರಿಗೆ ಲಭ್ಯವಾಗಲಿದೆ.

[t4b-ticker]
error: Content is protected !!