ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರಿಗೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಇನ್ನು ಮುಂದೆ ‘ಡಿಕೆ ಸ್ಯಾಂಡ್ ಬಝಾರ್’ (DK SAND BAZAAR) ಆ್ಯಪ್ ಮೂಲಕ ಸುಲಭವಾಗಿ ಮರಳು ಲಭ್ಯವಾಗಲಿದೆ. ಜಿಲ್ಲೆಯ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಗುರುತಿಸಲಾದ 15 ಮರಳು ಬ್ಲಾಕ್‌ಗಳಲ್ಲಿನ ದಾಸ್ತಾನನ್ನು ಈ ಆ್ಯಪ್ ಮೂಲಕವೇ ವಿತರಿಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ತೀರ್ಮಾನ ಕೈಗೊಂಡಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರಿಗೆಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಇನ್ನು ಮುಂದೆ ‘ಡಿಕೆ ‘ DK SAND ಬಜಾರ್ಮೂ ಆಪ್ ಮೂಲಕ ಸುಲಭವಾಗಿ ಮರಳು ಲಭ್ಯವಾಗಲಿದೆ.ಜಿಲ್ಲೆಯ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಗುರುತಿಸಲಾದ 15 ಮರಳು ಬ್ಲಾಕ್‌ಗಳಲ್ಲಿನ ದಾಸ್ತಾನನ್ನು ಈ ಆ್ಯಪ್ ಮೂಲಕವೇ ವಿತರಿಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ತೀರ್ಮಾನ ಕೈಗೊಂಡಿದೆ.
ಜಿಲ್ಲೆಯಲ್ಲಿ ಪರಿಸರ ವಿಮೋಚನಾ ಪತ್ರದನ್ವಯ ಒಟ್ಟು 3,30,405 ಮೆಟ್ರಿಕ್ ಟನ್ ಮರಳು ಗಣಿಗಾರಿಕೆಗೆ ಅವಕಾಶವಿದೆ. ಆದರೆ, ಪ್ರತಿ ವರ್ಷ ಜೂನ್ 5ರಿಂದ ಅಕ್ಟೋಬರ್ 15ರವರೆಗೆ ಮಳೆಗಾಲದ ಹಿನ್ನೆಲೆಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಲಾಗುತ್ತದೆ. ಪ್ರಸ್ತುತ. ಮರಳು ದಾಸ್ತಾನು ಕೇಂದ್ರಗಳಲ್ಲಿ ಒಟ್ಟು 27,550 ಮೆಟ್ರಿಕ್ ಟನ್ ಮರಳು ಲಭ್ಯವಿದ್ದು, ಈ ಪೈಕಿ ಮಾರ್ಚ್‌ನಿಂದ ಇಲ್ಲಿಯವರೆಗೆ 12,126 ಮೆಟ್ರಿಕ್ ಟನ್ ಮರಳನ್ನು ಆ್ಯಪ್ ಮೂಲಕ ವಿತರಿಸಲಾಗಿದೆ.
ಸದ್ಯ, 15,424 ಮೆಟ್ರಿಕ್ ಟನ್ ಮರಳು ದಾಸ್ತಾನು ಕೇಂದ್ರಗಳಲ್ಲಿ ಲಭ್ಯವಿದ್ದು, ಸಾರ್ವಜನಿಕರು dksandbazaar.com ವೆಬ್‌ಸೈಟ್ ಅಥವಾ ‘ಡಿಕೆ ಸ್ಯಾಂಡ್ ಬಝಾರ್’ ಆ್ಯಪ್ ಮೂಲಕ ಬುಕ್ ಮಾಡಿಕೊಳ್ಳಬಹುದಾಗಿದೆ. ಮರಳು ಸಾಗಾಟ ಮಾಡಲು ಇಚ್ಛಿಸುವ ವಾಹನಗಳ ಮಾಲೀಕರು ತಮ್ಮ ವಾಹನವನ್ನು ಇದೇ ಆ್ಯಪ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.
ಹೊರ ಜಿಲ್ಲೆಗೆ ಪೂರೈಕೆ ಇಲ್ಲ
ಜಿಲ್ಲೆಯ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ, ಯಾವುದೇ ಕಾರಣಕ್ಕೂ ಮರಳನ್ನು ಹೊರ ಜಿಲ್ಲೆಗಳಿಗೆ ಸಾಗಾಟ ಮಾಡಲು ಅವಕಾಶವಿರುವುದಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರಳು ಬುಕಿಂಗ್ ಅಥವಾ ಆ್ಯಪ್ ಬಳಕೆಯಲ್ಲಿ ಯಾವುದೇ ತಾಂತ್ರಿಕ ತೊಂದರೆಗಳು ಎದುರಾದರೆ, ಸಾರ್ವಜನಿಕರು ನಗರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕಚೇರಿಯನ್ನು (ದೂರವಾಣಿ ಸಂಖ್ಯೆ : 0824-2429932 ಅಥವಾ ಮೊಬೈಲ್: 6364019555) ಸಂಪರ್ಕಿಸಬಹುದು ಎಂದು ಹಿರಿಯ ಭೂವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











































