ಸುಳ್ಯ: ಸುಳ್ಯ ತಾಲೂಕಿನಾದ್ಯಂತ ಸುರಿದ ಭಾರಿ ಗಾಳಿ ಮಳೆಗೆ ವಿದ್ಯುತ್ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅಂದಾಜು 30 ಎಚ್‌ಟಿ 75 ಎಲ್‌ಟಿ ಕಂಬಗಳು ಸಹಿತ ಒಟ್ಟು 100ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಮೂರು ಟಿಸಿಗೆ ಹಾನಿಯಾದ ಘಟನೆ ನಡೆದಿದೆ.ಮಳೆಯ ಜೊತೆಗೆ ಬೀಸಿದ ಗಾಳಿಗೆ ಶುಕ್ರವಾರ ಮತ್ತು ಶನಿವಾರ ರಾತ್ರಿ ಸಂಪೂರ್ಣ ಕತ್ತಲಿನಲ್ಲಿ ತಾಲೂಕು ಕಾಲ ಕಳೆದಿದ್ದು, ಸಂಪರ್ಕ ಸಾಧಿಸಲು ಕಷ್ಟಕರವಾಗಿದೆ. ಶನಿವಾರ ಬೀಸಿದ ಗಾಳಿಗೆ ಸುಳ್ಯ ಸಂಪರ್ಕಿಸುವ ಬೆಳ್ಳಾರೆ ಮಾಡವು ಹಾಗೂ ಕಾವು ಮಾಡವು ಎರಡು ಕಡೆ ವಿದ್ಯುತ್ ಸಂಪರ್ಕ ಸಂಪರ್ಕ ಕಡಿತಗೊಂಡಿದೆ.*ಹಲವೆಡೆ ಅಪಾರ ಹಾನಿ*ಆದರೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ನೆಲಕಚ್ಚಿದ್ದು, ಶುಕ್ರವಾರ ಮತ್ತು ಶನಿವಾರ ಸಂಜೆಯಿಂದ ಬೀಸಿದ ಗಾಳಿ ಮಳೆಗೆ ಸುಳ್ಯ ತಾಲೂಕಿನಾದ್ಯಂತ ವಿದ್ಯುತ್ ಕಂಬ, ತಂತಿಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ.ಮೆಸ್ಕಾಂ ಸಿಬ್ಬಂದಿ ಗಳು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದರು ನಿರಂತರ ಗಾಳಿ, ಮಳೆಗೆ ಅಲ್ಲಲ್ಲಿ ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದಿದ್ದು ದುರಸ್ತಿಗೆ ಅಡಚಣೆಯಾಗಿದೆ.33ಕೆವಿ ಲೈನ್ ಮೈಂಟೆನೆನ್ಸ್ ವಿಭಾಗದ ಸತೀಶ್, ಮಣಿಕಂಠ, ಸುನಿಲ್ ನೇತೃತ್ವದ ತಂಡ ನಿರಂತರ ಶ್ರಮ ವಹಿಸುತ್ತಿದೆ.











































