ಬೆಳ್ತಂಗಡಿ : ಜು 27 ಬೆಳ್ತಂಗಡಿ ರಸ್ತೆ ನಿರ್ಮಾಣ ಮಾತ್ರವಲ್ಲದೆ ಕನಿಷ್ಠ ರಸ್ತೆ ನಿರ್ವಹಣೆಗೆ ಕೂಡ ಅನುದಾನ ನೀಡದೆ ಇರುವುದರಿಂದ ನಾಗರೀಕರಿಗೆ ಸಂಚಾರಕ್ಕೆ ಯಾವುದೇ ತೊಂದರೆಯಾಗಬಾರದೆಂದು ಪಡಂಗಡಿ- ಸೋಣಂದೂರು- ಮಾಲಾಡಿ ಬಿಜೆಪಿ ಗ್ರಾಮ ಸಮಿತಿಯಿಂದ ನಡೆದಗರ್ಡಾಡಿ-ಸೋಣಂದೂರು – ಮಾಲಾಡಿ ಕೊಲ್ಪೆದಬೈಲು ಸಂಪರ್ಕ ರಸ್ತೆ ಸ್ವಚ್ಛತಾ ಕಾರ್ಯದಲ್ಲಿ ಜೊತೆಗೂಡಿ ನಡೆಸಲಾದ ಶ್ರಮದಾನದಲ್ಲಿ ಶಾಸಕ ಹರೀಶ್ ಪೂಂಜರವರು ಭಾಗಿಯಾದರು.

ಈ ಸಂದರ್ಭದಲ್ಲಿ ಮಾಲಾಡಿ ಸೋಣಂದೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ, ಪಂಚಾಯತ್ ಸದಸ್ಯರುಗಳಾದ ಶ್ರೀ ದಿನೇಶ್ ಕರ್ಕೇರ ಮತ್ತು ಶ್ರೀ ರಾಜೇಶ ಕೊಡ್ಯೇಲು, ಮಾಲಾಡಿ ಪಂಚಾಯತ್ ಸದಸ್ಯೆ- ಮಂಡಲ ಬಿಜೆಪಿ ಮಹಿಳಾಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ತುಳಸಿ ಉಮೇಶ್, ಸೋಣಂದೂರು ಬಿಜೆಪಿ ಬೂತ್ ಅಧ್ಯಕ್ಷರಾದ ಪುರುಷೋತ್ತಮ್ ಶೆಟ್ಟಿ,

ಮಡಂತ್ಯಾರ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳಾದ ಶ್ರೀ ಸುರೇಶ್ ಮತ್ತು ಶ್ರೀಮತಿ ಧನಲಕ್ಷ್ಮಿ ಚಂದ್ರಶೇಖರ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.











































