ಶಬರಿಮಲೆ | ದ್ವಾರಪಾಲಕ ಮೂರ್ತಿಯಲ್ಲಿ ಚಿನ್ನದ ತೂಕದಲ್ಲಿ ಕಡಿತ: ಹೈಕೋರ್ಟ್‌ ಕಿಡಿ

Picture of Savistara

Savistara

Bureau Report

ತಿರುವನಂತಪುರ: ಶಬರಿಮಲೆ ದೇವಸ್ಥಾನದ ಪ್ರವೇಶದ್ವಾರದ ಬಳಿನಿಲ್ಲಿಸಿರುವ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚದಲ್ಲಿನ ಚಿನ್ನದ ತೂಕವು 4.5 ಕೆ.ಜಿಯಷ್ಟು ಕಡಿಮೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಭದ್ರತಾ ಅಧಿಕಾರಿಗಳಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.

ನ್ಯಾಯಾಲಯದ ಈ ನಿರ್ದೇಶನದಿಂದ ಮಂಡಳಿಗೆ ತೀವ್ರ ಮುಜುಗರ ಉಂಟಾಗಿದೆ. ಚಿನ್ನದ ತೂಕ ಕಡಿಮೆ ಆಗಿರುವ ಬಗ್ಗೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸುತ್ತಿದೆ. ‘ಚಿನ್ನದ ತೂಕದಲ್ಲಿ ವ್ಯತ್ಯಾಸ ಕಂಡುಬಂದಿದ್ದನ್ನು ದೇವಸ್ಥಾನದ ಮಂಡಳಿಯು ದಾಖಲು ಮಾಡಿಲ್ಲ’ ಎಂದೂ ಕೋರ್ಟ್ ಹೇಳಿದೆ.*2019ರಲ್ಲಿ ಮೂರ್ತಿಗಳಿಂದ ಚಿನ್ನ ಲೇಪಿತ ಕವಚವನ್ನು ಮೂರ್ತಿಯಿಂದ ಬೇರ್ಪಡಿಸಿ ಹೊಸದಾಗಿ ಚಿನ್ನ ಲೇಪನಕ್ಕೆಂದು ಚೆನ್ನೈನ ಕಂಪನಿಯೊಂದಿಗೆ ನೀಡಲಾಗಿತ್ತು. ಈ ವೇಳೆ ಚಿನ್ನದ ತೂಕವು 42.8 ಕೆ.ಜಿ ಇತ್ತು. ಕವಚ ತೆಗೆದಿಟ್ಟ ಸುಮಾರು ಒಂದು ತಿಂಗಳು 9 ದಿನಗಳ ಬಳಿಕ ಕಂಪನಿಗೆ ನೀಡಲಾಗಿತ್ತು. ಈ ಹೊತ್ತಿಗೆ ಚಿನ್ನದ ತೂಕವು 38.24 ಕೆ.ಜಿ.ಯಷ್ಟಾಗಿದೆ’ ಎಂದು ನ್ಯಾಯಾಲಯ ಬುಧವಾರ ಗುರುತಿಸಿದೆ.

[t4b-ticker]
error: Content is protected !!