ರಾಜ್ಯಸಭೆಗೆ ಹೋಗಲ್ಲ ರಾಜ್ಯದಲ್ಲೇ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ; ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತೇನೆ : ಸಿಎಂ ಪದವಿಗೆ ಭಾವುಕ ವಿದಾಯ ಹೇಳುತ್ತ ಸಿದ್ದರಾಮಯ್ಯ ಗುಡುಗು

Picture of Savistara

Savistara

Bureau Report

ಬೆಂಗಳೂರು, ಮೇ 28: ರಾಜ್ಯ ಕಂಡ ಅಪರೂಪದರಾಜಕಾರಣಿ, ಜನತಾ ಪರಿವಾರದ ಕೊನೆಯ ಕೊಂಡಿ ಸಿದ್ದರಾಮಯ್ಯ ಕಡೆಗೂ ಅಧಿಕಾರ ತ್ಯಜಿಸಿದ್ದು ಎರಡು ಅವಧಿಯ ಮುಖ್ಯಮಂತ್ರಿ ಪದವಿಗೆ ಭಾವುಕ ವಿದಾಯ ಹೇಳಿದ್ದಾರೆ. ರಾಜ್ಯಪಾಲರ ಕಚೇರಿಯಲ್ಲಿ ರಾಜಿನಾಮೆ ಪತ್ರ ಕೊಟ್ಟು ಬಂದ ಬಳಿಕ ತನ್ನ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ಹಂಚಿಕೊಂಡಿದ್ದಾರೆ. ನಡೆಸಿ ವಿದಾಯ ಮಾತುಗಳನ್ನುಕಾಂಗ್ರೆಸ್ ನನಗೆ ಎರಡು ಬಾರಿ ಮುಖ್ಯಮಂತ್ರಿ ಸ್ಥಾನ ಕೊಟ್ಟಿದೆ. ವಿಪಕ್ಷ ನಾಯಕ ಸ್ಥಾನವನ್ನೂ ಕೊಟ್ಟಿದೆ, ಇದಕ್ಕಾಗಿ ನನ್ನ ಮೇಲೆ ನಂಬಿಕೆಯಿಟ್ಟ ಸೋನಿಯಾ m໐໖, ರಾಹುಲ್ ಗಾಂಧಿಯವರಿಗೆ ಅಭಿನಂದನೆ ಹೇಳುತ್ತೇನೆ ಎಂದು ಹೇಳಿದ ಅವರು, ನಾನು ಕೊನೆಯ ಉಸಿರು ಇರೋ ವರೆಗೂ ರಾಜಕಾರಣದಲ್ಲಿ ಸಕ್ರಿಯನಾಗಿರುತ್ತೇನೆ. ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತೇನೆ. ಸಮಾನತೆಯ ವಿಚಾರದಲ್ಲಿ ಧ್ವನಿ ಎತ್ತುತ್ತೇನೆ ಎಂದು ಹೇಳಿದರು.

ನಾನು ನಂಬಿಕೊಂಡು ಬಂದ ತತ್ವ ಸಿದ್ಧಾಂತದಲ್ಲಿ ಎಂದಿಗೂ ರಾಜಿಯಾಗಿಲ್ಲ. ನಂಬಿದ ಮೌಲ್ಯಗಳಿಗೆ ಬದ್ಧನಾಗಿರುತ್ತೇನೆ. ಎಂದಿಗೂ ಹಣ, ಅಧಿಕಾರದ ಹಿಂದೆ ಹೋಗಿಲ್ಲ. ಕರ್ನಾಟಕದ ಜನರು ಪ್ರೀತಿ ಇಟ್ಟು ಅಧಿಕಾರ ನೀಡಿದ್ದಾರೆ, ಅದಕ್ಕಾಗಿ ಋಣಿಯಾಗಿರುತ್ತೇನೆ. ಈ ರಾಜ್ಯದ ಜಲ, ನೆಲದ ಕರ್ನಾಟಕದ ಜನರ ಹಕ್ಕು ಆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಎಂದಿಗೂ ರಾಜಿಯಾಗಲ್ಲ. ಆ ಹಕ್ಕನ್ನು ಎಂದಿಗೂ ಬಿಟ್ಟು ಕೊಡುವ ಪ್ರಶ್ನೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.ರಾಜ್ಯಸಭೆಗೆ ಬರಲು ಆಹ್ವಾನ ನೀಡಿದ್ದಾರೆ, ಆದರೆ ನನ್ನದು ರಾಜ್ಯ ರಾಜಕಾರಣ. ರಾಜ್ಯ ಬಿಟ್ಟು ಬರಲ್ಲ ಎಂದು ಹೇಳಿದ್ದೇನೆ. ನಾನು ಇಲ್ಲಿಯೇ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಕ್ಷೇತ್ರದ ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಕಾಂಗ್ರೆಸ್ ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ಮಾಡಿದ್ದೇನೆ. 2013-18ರ ಸರ್ಕಾರದಲ್ಲಿ ನಾವು ನೀಡಿದ್ದ 163 ಭರವಸೆಗಳಲ್ಲಿ 158 ಈಡೇರಿಸಿದ್ದೇವೆ. 2023ರಿಂದ ಇಂದಿನ ವರೆಗೆ ಅಧಿಕಾರ ನಡೆಸಿದ್ದು ನಾವು ನೀಡಿದ್ದ 560ಕ್ಕೂ ಹೆಚ್ಚು ಭರವಸೆಗಳಲ್ಲಿ 300ರಷ್ಟು ಈಡೇರಿಸಿದ್ದೇವೆ. ಇದೇ ವೇಳೆ, ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿದ್ದು ಅದರ ಬಗ್ಗೆ ಸಂತೃಪ್ತಿ ಇದೆ. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಅಧೋಗತಿ ಹೋಗುತ್ತದೆ, ದಿವಾಳಿ ಆಗುತ್ತದೆ ಎಂದು ವಿಪಕ್ಷಗಳು, ಪ್ರಧಾನಿ ಆದಿಯಾಗಿ ಹೇಳಿಕೆ ನೀಡಿದ್ದರು. ಆದರೆ ನಾವು ಮೂರು ವರ್ಷದಲ್ಲಿ ಇದಕ್ಕಾಗಿ 1.40 ಲಕ್ಷ ಕೋಟಿ ವ್ಯಯಿಸಿದ್ದು ನುಡಿದಂತೆ ನಡೆದಿದ್ದೇವೆ. ಇದರ ಕಾರಣದಿಂದ ರಾಜ್ಯವು ಇಡೀ ದೇಶದಲ್ಲೇ ತಲಾದಾಯಲ್ಲಿ ಮೊದಲ ಸ್ಥಾನ ಪಡೆದಿದೆ. ಜನರ ಖರೀದಿ ಸಾಮರ್ಥ್ಯ ಹೆಚ್ಚಿದೆ. 2025-26ರಲ್ಲಿ ದೇಶದ ಜಿಡಿಪಿ 7.4 ಶೇ. ಇದ್ದರೆ, ಕರ್ನಾಟಕದಲ್ಲಿ ಮಾತ್ರ 8.1 ಶೇ. ಇದೆ ಎನ್ನುವುದು

ನಮ್ಮ ಅಭಿವೃದ್ಧಿಯನ್ನು ತೋರಿಸುತ್ತದೆ. ಇನ್ನು ನಾವು ಗ್ಯಾರಂಟಿಗಾಗಿ ಸಾಲ ಮಾಡಿದ್ದೇವೆ ಎನ್ನುವ ಸುಳ್ಳು ಆರೋಪವನ್ನು ವಿಪಕ್ಷಗಳು ಮಾಡಿವೆ. ಜಿಎಸ್ಟಿಪಿ ಅಂದರೆ ಒಟ್ಟು ಆದಾಯದ 25 ಶೇ.ಕ್ಕಿಂತ ಹೆಚ್ಚು ಸಾಲ ಮಾಡಬಾರದು ಎಂದಿದೆ. ನಾವು 30 ಲಕ್ಷ ಕೋಟಿ ಜಿಎಸ್ಟಿಸಿಪಿ ಹೊಂದಿದ್ದು, ರಾಜ್ಯದ ಸಾಲ 24.94 ಶೇ.ಕ್ಕಿಂತ ಹೆಚ್ಚು ಆಗಿಲ್ಲ ಎಂದು ಸ್ಪಷ್ಟಪಡಿಸಿದರು.55ರಾಜ್ಯಪಾಲರ ಕಚೇರಿಯಲ್ಲಿ ರಾಜಿನಾಮೆ ಪತ್ರ ಕೊಟ್ಟಿದ್ದೇನೆ. ಸಂವಿಧಾನ ಪ್ರಕಾರ ಅಂಗೀಕರಿಸಿ ಮುಂದಿನ ಸಿಎಂ ಅಧಿಕಾರಕ್ಕೇರಲು ರಾಜ್ಯಪಾಲರು ಅವಕಾಶ ಮಾಡಿಕೊಡಬೇಕು ಎಂದು ಹೇಳಿದ ಸಿದ್ದರಾಮಯ್ಯ, ನನಗೆ ಸಂವಿಧಾನವೇ ದೇವರು, ಅದರಿಂದಾಗಿಯೇ ಮುಖ್ಯಮಂತ್ರಿ, ಶಾಸಕ ಎಲ್ಲವೂ ಆಗುವಂತಾಯಿತು. ಇಲ್ಲದಿದ್ದರೆ ಆಗುತ್ತಿರಲಿಲ್ಲ. ನನಗೆ ಮತದಾರರು ಮತ್ತು ಸಂವಿಧಾನ ದೇವರು ಎಂದರು. ಡಿಸಿಎಂ ಡಿಕೆಶಿ ಮತ್ತು ಇತರ ಸಚಿವರ ಸಮ್ಮುಖದಲ್ಲಿ ಸಿದ್ದರಾಮಯ್ಯ ಮನದಾಳ ಹಂಚಿಕೊಂಡಿದ್ದಾರೆ.

[t4b-ticker]
error: Content is protected !!