ಕೇಂದ್ರ ಚುನಾವಣಾ ಆಯೋಗ ದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ನೂತನವಾಗಿ ಜಾರಿಗೆ ತಂದಿರುವ

“ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ – Special Incentive Review – SIR” ಈ ಯೋಜನೆಯ ಕುರಿತು

ಸಮಗ್ರ ಮಾಹಿತಿ ನೀಡಲು ಬಿಜೆಪಿ ಶಿವಮೊಗ್ಗ ನಗರ ಮಂಡಲ ಇಂದು ನಗರದ ಮೈಲಾರೇಶ್ವರ ಸಭಾ ಭವನದಲ್ಲಿ ಏರ್ಪಡಿಸಿದ್ದ ಬೂತ್ ಮಟ್ಟದ “BLA-2”

ಕಾರ್ಯಕರ್ತರ ವಿಶೇಷ ಕಾರ್ಯಾಗಾರದಲ್ಲಿ ಪಾಲ್ಗೊಂಡ ಸಂಸದ ಬಿ ವೈ ರಾಘವೇಂದ್ರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜಗದೀಶ್ ಅವರು, ನಗರಾಧ್ಯಕ್ಷರಾದ ಮೋಹನ್ ರೆಡ್ಡಿ ಅವರು, ಶಾಸಕರಾದ ಚನ್ನಬಸಪ್ಪ ಅವರು,

ಮತದಾರರ ಪಟ್ಟಿ ಪರಿಷ್ಕರಣೆ ರಾಜ್ಯ ಸಂಚಾಲಕರಾದ ಜಗದೀಶ್ ಹಿರೇಮನೆ ಅವರು ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.











































