ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: ರಿಕ್ಟ‌ರ್ ಮಾಪಕದಲ್ಲಿ 6.7 ತೀವ್ರತೆ ದಾಖಲು

Picture of Savistara

Savistara

Bureau Report

ಪಾಲು (ಇಂಡೋನೇಷ್ಯಾ): ಇಂಡೋನೇಷ್ಯಾದ ಮಧ್ಯಸುಲವೇಸಿ ದ್ವೀಪದಲ್ಲಿ ಮಂಗಳವಾರ (ಜೂ.16) ಭೀಕರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.7 ರಷ್ಟು ತೀವ್ರತೆ ದಾಖಲಾಗಿರುವ ಈ ಪ್ರಬಲ ಭೂಕಂಪದಿಂದಾಗಿ ಹಲವು ಕಟ್ಟಡಗಳು ಜಖಂಗೊಂಡಿದ್ದು, ವ್ಯಾಪಕ ಹಾನಿ ಸಂಭವಿಸಿದೆ.ಎಂಟು ವರ್ಷಗಳ ಹಿಂದೆ (2018ರಲ್ಲಿ) ಸಂಭವಿಸಿದ್ದ ಭೀಕರ ಭೂಕಂಪ ಮತ್ತು ಸುನಾಮಿ ದುರಂತಕ್ಕೆ ಸಾಕ್ಷಿಯಾಗಿದ್ದ ‘ಪಾಲು’ (Palu) ನಗರದ ಜನತೆ ಇಂದಿನ ಭೂಕಂಪದಿಂದಾಗಿ ಮತ್ತೊಮ್ಮೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.ಸುಮಾರು 4 ಲಕ್ಷ ಜನಸಂಖ್ಯೆ ಹೊಂದಿರುವ ಮಧ್ಯ ಸುಲವೇಸಿ ಪ್ರಾಂತ್ಯದ ರಾಜಧಾನಿ ಪಾಲು ನಗರದಲ್ಲಿ ಭೂಮಿ ಜೋರಾಗಿ ಕಂಪಿಸುತ್ತಿದ್ದಂತೆ, ಜನರು ಜೀವಭಯದಿಂದ ಮುಕ್ತ ಪ್ರದೇಶ ಹಾಗೂ ರಸ್ತೆಗಳತ್ತ ಓಡಿ ಬಂದಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಪ್ರಮುಖ ಆಸ್ಪತ್ರೆಗಳಿಂದ ರೋಗಿಗಳನ್ನು ಐವಿ ಡ್ರಿಪ್ಸ್ (IV Drips) ಸಮೇತ ಹೊರಗೆ ಕರೆತರಲಾಯಿತು.ಭೂಕಂಪದ ತೀವ್ರತೆಗೆ ಹಲವು ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳ ಮೇಲ್ಪಾವಣಿಗಳು ಕುಸಿದಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ರಸ್ತೆಗಳ ಉದ್ದಕ್ಕೂ ಕಟ್ಟಡಗಳ ಅವಶೇಷಗಳು ಮತ್ತು ಗಾಜಿನ ಚೂರುಗಳು ಬಿದ್ದಿರುವ ದೃಶ್ಯಗಳು ಕಂಡುಬಂದಿವೆ. ಸದ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯು ಆಸ್ತಿಪಾಸ್ತಿ ನಷ್ಟ, ಗಾಯಗೊಂಡವರು ಹಾಗೂ ನಿರಾಶ್ರಿತರಾದವರ ನಿಖರ ಮಾಹಿತಿಯನ್ನು ಕಲೆಹಾಕುತ್ತಿದೆ.

ಅಮೆರಿಕದ ಭೂಗರ್ಭ ಶಾಸ್ತ್ರ ಸಮೀಕ್ಷೆ (USGS) ಪ್ರಕಾರ, ಈ ಭೂಕಂಪದ ಕೇಂದ್ರಬಿಂದು ಪಾಲು ನಗರದಿಂದ ಆನ್ನೇಯಕ್ಕೆ 43 ಕಿಲೋಮೀಟರ್ ದೂರದಲ್ಲಿ ಹಾಗೂ ಭೂಮಿಯ ಆಳದಿಂದ ಸುಮಾರು 10 ಕಿಲೋಮೀಟ‌ರ್ ಆಳದಲ್ಲಿ ಪತ್ತೆಯಾಗಿದೆ.

ಸುನಾಮಿ ಭೀತಿಯಿಲ್ಲ: ಇಂಡೋನೇಷ್ಯಾದ ಹವಾಮಾನ ಮತ್ತುಭೂಭೌತಶಾಸ್ತ್ರ ಸಂಸ್ಥೆಯು ಈ ಭೂಕಂಪದಿಂದ ಸುನಾಮಿ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ, ಕರಾವಳಿ ಪ್ರದೇಶದ ಜನರು ಮುನ್ನೆಚ್ಚರಿಕೆಯಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಸಾವು-ನೋವಿನ ವರದಿಯಾಗಿಲ್ಲ, ಆದರೆ ಹಾನಿಯ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.

ಹಳೆಯ ಕಹಿ ನೆನಪುಗಳು: ಬೆಚ್ಚಿಬಿದ್ದ ಜನತೆಇಂಡೋನೇಷ್ಯಾ ದೇಶವು ಪ್ರಮುಖ ಭೂಕಂಪನ ವಲಯದಲ್ಲಿದ್ದು (Seismic Faults), ಇಲ್ಲಿ ಜ್ವಾಲಾಮುಖಿ ಮತ್ತು ಭೂಕಂಪಗಳು ಸಾಮಾನ್ಯವಾಗಿದೆ. ಆದರೆ 2018ರಲ್ಲಿ ಪಾಲು ನಗರದಲ್ಲಿ ಸಂಭವಿಸಿದ್ದ 7.5 ತೀವ್ರತೆಯ ಭೂಕಂಪ ಹಾಗೂ 3 ಮೀಟರ್ ಎತ್ತರದ ಸುನಾಮಿ ಅಲೆಗಳು 4,000ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದವು. ಆ ದುರಂತದ ಕಹಿನೆನಪು ಇಂದಿನ ಭೂಕಂಪದಿಂದಾಗಿ ಇಲ್ಲಿನ ನಿವಾಸಿಗಳಲ್ಲಿ ಮತ್ತೊಮ್ಮೆ ಆತಂಕ ಮೂಡಿಸಿದೆ.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!