ಶ್ರೀಲಂಕ ವಿರುದ್ಧ 8 ವಿಕೆಟ್ ಗೆಲುವು: ಫೈನಲ್‌ಗೆ ಭಾರತ

Picture of Savistara

Savistara

Bureau Report

ದುಬೈ: 19 ವರ್ಷದೊಳಗಿನ ಏಷ್ಯಾ ಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ಧ 8 ವಿಕೆಟ್‌ಗಳ ಗೆಲುವು ಸಾಧಿಸಿರುವ ಭಾರತ ತಂಡವು ಫೈನಲ್ ಪ್ರವೇಶಿಸಿದೆ.

ಏಕದಿನ ಮಾದರಿಯಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಮಳೆ ಬಂದಿದ್ದರಿಂದ ಪಂದ್ಯವನ್ನು 20 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು. ಟಾಸ್ ಗೆದ್ದ ಭಾರತ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು.ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡವು ಭಾರತದ ಬಿಗಿ ಬೌಲಿಂಗ್ ದಾಳಿಯ ಎದುರು ರನ್‌ಗಳಿಸಲು ಪರದಾಡಿತು. 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತ್ತು.139 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತವು ಆರಂಭಿಕ ಆಟಗಾರ ವೈಭವ್‌ ಸೂರ್ಯವಂಶಿ (7 ರನ್, 8 ಎಸೆತ) ಹಾಗೂ ನಾಯಕ ಆಯುಷ್ ಮಾತ್ರೆ (9 ರನ್, 6 ಎಸೆತ) ವಿಕೆಟ್ ಬೇಗನೇ ಕಳೆದುಕೊಂಡಿತು.

ಆರನ್ ಜಾರ್ಜ್ (58 ರನ್, 49 ಎಸೆತ) ಹಾಗೂ ವಿಹಾನ್ ಮಲ್ಲೋತ್ರಾ (61 ರನ್, 45 ಎಸೆತ) ಉತ್ತಮ ಆಟದ ನೆರವಿನಿಂದ ಭಾರತ ತಂಡವು 18 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.ಡಿ.21ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಎದುರಿಸಲಿದೆ.

[t4b-ticker]
error: Content is protected !!