ಹಿಂದೂ ಯುವಕನಿಗೆ ಹೊಡೆದು ಜೀವ ತೆಗೆದ ಕಿರಾತಕರು, ಮರಕ್ಕೆ ಕಟ್ಟಿ ಸುಟ್ಟೇ ಬಿಟ್ರು.. ಆದ್ರೆ ಕೇಸ್‌ ಆಗೇ ಇಲ್ಲ!

Picture of Savistara

Savistara

Bureau Report

ದುಷ್ಕರ್ಮಿಗಳ ಗುಂಪೊಂದು ಹಿಂದೂ ಯುವಕನನ್ನ ಮನಬಂದಂತೆ ಥಳಿಸಿ ಜೀವ ತೆಗೆದು, ಪೊಲೀಸರು ಬರುವಷ್ಟರಲ್ಲಿ ಮೃತದೇಹವನ್ನು ಮರಕ್ಕೆ ಕಟ್ಟಿ ಸುಟ್ಟು ಹಾಕಿ ಪರಾರಿಯಾಗಿದೆ. ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಈ ಕೃತ್ಯ ಎಸಗಲಾಗಿದೆ. ಮೈಮೆನ್ಸಿಂಗ್‌ ಜಿಲ್ಲೆಯಲಿ ಹಿಂದೂ ಯುವಕನ ಮೇಲೆ ಕ್ರೌರ್ಯ ಮೆರೆಯಲಾಗಿದೆ.

ಮೃತ ಯುವಕನನ್ನು ದೀಪು ಚಂದ್ರದಾಸ್‌ ಎಂದು ಗುರುತಿಸಲಾಗಿದೆ. ಭಾಲುಕಾ ಉಪಾಜಿಲ್ಲಾದಲ್ಲಿ ಇರುವ ಗಾರ್ಮೆಂಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದನು. ಕೆಲಸ ಮುಗಿಸಿಕೊಂಡು ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ವಾಪಸ್‌ ಆಗುವಾಗ ಗುಂಪೊಂದು ಯುವಕನನ್ನ ಸುತ್ತುವರೆದು ಅವಾಚ್ಯ ಶಬ್ಧಗಳಿಂದ ಮೊದಲು ನಿಂದಿಸಿದೆ. ಬಳಿಕ ಮನಸೋಯಿಚ್ಛೆ ಹೊಡೆದಿದ್ದಾರೆ. ಇದರಿಂದ ಸ್ಥಳದಲ್ಲೇ ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ಹೇಳಲಾಗಿದೆ.

ಇಷ್ಟಕ್ಕೆ ಸುಮ್ಮನಾಗದ ದುಷ್ಕರ್ಮಿಗಳ ಗುಂಪು ಯುವಕನ ಮೃತದೇಹವನ್ನು ಮರವೊಂದಕ್ಕೆ ಕಟ್ಟಿ ಬೆಂಕಿ ಹಚ್ಚಿ ಓಡಿ ಹೋಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಆದರೆ ಇದುವರೆಗೂ ಯಾರ ವಿರುದ್ಧವೂ ಕೇಸ್‌ ಅನ್ನು ದಾಖಲು ಮಾಡಿಲ್ಲ ಎಂದು ಹೇಳಲಾಗಿದೆ.

ಸಂಸತ್‌ ಚುನಾವಣೆ ವೇಳೆ ಯುವ ನಾಯಕ ಶರೀಫ್‌ ಒಸ್ಮಾನ್‌ ಹಾದಿ ಮೃತಪಟ್ಟ ನಂತರ ಇಂತಹ ಕೃತ್ಯಗಳು ದೇಶದೆಲ್ಲೆಡೆ ಹೆಚ್ಚಾಗುತ್ತಿವೆ. ಅಶಾಂತಿ ವಾತಾವರಣ ಮೂಡಿದ್ದು ಅಲ್ಪಸಂಖ್ಯಾತರು ಭಯದಲ್ಲೇ ಬದುಕು ಸಾಗಿಸುತ್ತಿದ್ದಾರೆ. ವಿದೇಶದಲ್ಲಿ ಮರಣ ಹೊಂದಿದ ನಾಯಕ ಶರೀಫ್‌ ಒಸ್ಮಾನ್‌ ಹಾದಿ ಮೃತದೇಹ ಇಂದು ಬಾಂಗ್ಲಾಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

[t4b-ticker]
error: Content is protected !!