ಬೆಳೆ ವಿಮೆ ಪರಿಹಾರ ರೈತರಿಗೆ ಅನ್ಯಾಯ | ಇಂದು ಮಲೆನಾಡು ಜನಹಿತರಕ್ಷಣಾ ವೇದಿಕೆ ಯಿಂದ ಸುಳ್ಯದಲ್ಲಿ ಪ್ರತಿಭಟನೆ

Picture of Savistara

Savistara

Bureau Report

ಇತಿಹಾಸದಲ್ಲಿ ಭಾರತ ಎಂದ ತಕ್ಷಣ ರೈತ ರಾಷ್ಟ್ರ ಎಂದು ವಿಶ್ವ ಪ್ರಖ್ಯಾತ. ಆದರೆ ಇವತ್ತಿನ ವಿದ್ಯಮಾನದಲ್ಲಿ ರೈತರ ಸಮಸ್ಯೆಗಳನ್ನು ಕೇಳುವವರೇ ಇಲ್ಲ. ಸರಕಾರಿ ಅಧಿಕಾರಿಗಳು ರೈತರಿಗೆ ಬೇರೆ ಬೇರೆ ರೀತಿಯಲ್ಲಿ ಮಾನಸಿಕ ಹಿಂಸೆ ನೀಡುತ್ತಾ ಬಂದಿರುತ್ತಾರೆ. ಅದರಲ್ಲಿ ಇಂದು ಬೆಳೆ ವಿಮೆ ಕಂತಿನ ಹಣ ಪಾವತಿಸಿದರೂ, ಬೆಳೆ ವಿಮೆ ಸರಿಯಾದ ರೀತಿಯಲ್ಲಿ ಜಮೆಯಾಗಿರುವುದಿಲ್ಲ. ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಮತ್ತು ರೈತರ ಖಾತೆಗೆ ತಕ್ಷಣ ಪೂರ್ತಿ ಹಣ ನ್ಯಾಯಯುತವಾಗಿ ಪಾವತಿಯಾಗಬೇಕು. ಈ ನಿಟ್ಟಿನಲ್ಲಿ ಕಿಶೋರ್ ಶೀರಾಡಿ ಸಂಚಾಲಕರು ಇವರ ನೇತೃತ್ವದಲ್ಲಿ ನಡೆಯುವ ಪಕ್ಷಾತೀತ, ಜಾತ್ಯಾತೀತ ರೈತರ ಬೃಹತ್ ‘ಪ್ರತಿಭಟನೆಗೆ ಇಂದು ಸುಳ್ಯ ತಾಲೂಕು ಕೇಂದ್ರದಲ್ಲಿ ಬೆಳಿಗ್ಗೆ 11 ಗಂಟೆಗೆ ರೈತರ ಪ್ರತಿಭಟನೆ ನಡೆಯಲಿದೆ ಯೆಂದು ಸುಳ್ಯ ತಾಲೂಕು ಯೂತ್ ಪ್ರಮುಖ್ ಶ್ರೀ ಡಿ. ಕೆ. ಅವಿನಾಶ್ಶ್ರೀ ರಮಾನಂದ ಎಣ್ಣೆಮಜಲುಜಿಲ್ಲಾ ಸಂಪರ್ಕಾಧಿಕಾರಿಮಲೆನಾಡು ಜನ ಹಿತರಕ್ಷಣಾ ವೇದಿಕೆ ಮತ್ತು ಸರ್ವಸದಸ್ಯರು, ಪದಾಧಿಕಾರಿಗಳು ಹಾಗೂ ಜಿಲ್ಲಾ ಶ್ರೀ ಹೂವಪ್ಪ ಸಂಪ್ಯಾಡಿ-ಕೊಲ್ಲಮೊಗ್ರಸುಳ್ಯ ತಾಲೂಕು ಸಂಪರ್ಕ ಮುಖ್ಯಸ್ಥರು ತಿಳಿಸಿದ್ದಾರೆ.

[t4b-ticker]
error: Content is protected !!