‘ಧುರಂಧರ್‌’ ಸಿನಿಮಾವನ್ನು ಪ್ರಶಂಸಿಸಿದ ತೆಲುಗು ನಟರನ್ನು ತರಾಟೆಗೆ ತೆಗೆದುಕೊಂಡ ಪ್ರಕಾಶ್ ರಾಜ್

Picture of Savistara

Savistara

Bureau Report

ಈ ಚಿತ್ರ ವೀಕ್ಷಿಸಲು ಹಣ, ಸಮಯ ಎರಡನ್ನೂ ವ್ಯರ್ಥಮಾಡಬೇಡಿ ಎಂದ ನಟಿ ರಮ್ಯಾ

ಪರ-ವಿರೋಧ ಚರ್ಚೆಯ ನಡುವೆ ‘ಧುರಂಧರ್ 2’ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತೆಲುಗು ನಟರನ್ನು ಖ್ಯಾತ ನಟ ಪ್ರಕಾಶ್ ರಾಜ್ ಟೀಕಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ನಟರಾದ ಅಲ್ಲು ಅರ್ಜುನ್, ರಾಮ್ ಚರಣ್, ವಿಜಯ್ ದೇವರಕೊಂಡ, ಮಹೇಶ್ ಬಾಬು ಮತ್ತು ಜ್ಯೂನಿಯರ್ ಎನ್ಸಿಆರ್ ಅವರು ಫೋಸ್ಟ್ ಮಾಡಿ ಧುರಂಧರ್ 2 ಸಿನಿಮಾವನ್ನು ಪ್ರಶಂಸಿಸಿದ್ದಾರೆ. ಈ ಪ್ರಶಂಸೆಯನ್ನು ಟೀಕಿಸಿರುವ ನಟ ಪ್ರಕಾಶ್ ರಾಜ್, “ಋಣಭಾರ ದಕ್ಷಿಣಕ್ಕೂ ವ್ಯಾಪಿಸುತ್ತಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ನಟಿ ರಮ್ಯಾ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ಯುಟ್ಯೂಬ‌ರ್ ದ್ರುವ್ ರಾಠಿ ಮೊದಲಾದವರೂ ಅವರೂ ಉದ್ದನೆಯ ಪೋಸ್ಟ್ ಹಾಕುವ ಮೂಲಕ ‘ಧುರಂಧ‌ರ್ 2’ ಸಿನಿಮಾವನ್ನು ಟೀಕಿಸಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು, “ಉನ್ನತ ಸಿನಿಮಾಗಳ ಮೇಲೆ ತಮ್ಮ ವೃತ್ತಿಜೀವನ ಮತ್ತು ಅದೃಷ್ಟವನ್ನು ನಿರ್ಮಿಸಿಕೊಂಡ ಚಲನಚಿತ್ರ ನಿರ್ಮಾಪಕರ ಮಟ್ಟಿಗೆ ಈ ಸಿನಿಮಾ ಭಯಾನಕವಾಗಿದೆ. ಮೆದುಳನ್ನು ಮನೆಯಲ್ಲೇ ಬಿಟ್ಟು ಬರಲು ಒತ್ತಾಯಿಸಿರುವ ಸಿನಿಮಾ” ಎಂದು ವಿಮರ್ಶಿಸಿದ್ದಾರೆ.

ನಟಿ ರಮ್ಯಾ ಅವರು, “ಈ ಚಿತ್ರ ವೀಕ್ಷಿಸಲು ಚಿತ್ರಮಂದಿರಕ್ಕೆ ಹೋಗಿ ಹಣ ಮತ್ತು ಸಮಯ ಎರಡನ್ನೂ ವ್ಯರ್ಥಮಾಡಬೇಡಿ” ಎಂದು ಬರೆದಿರುವ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

“ಈ ಸಿನಿಮಾ ನೋಡುವುದೇ ಒಂದು ದೊಡ್ಡ ಸಾಹಸ. ಚಿತ್ರಮಂದಿರದಲ್ಲಿ ಹೇಗೆ ತಾಳ್ಮೆ ಪರೀಕ್ಷೆ ಮಾಡಬೇಕು ಎಂಬುದಕ್ಕೆ ಚಿತ್ರ ಉತ್ತಮ ಉದಾಹರಣೆ. ಚಿತ್ರ ಹೇಗಿದೆ ಎಂದರೆ, ಆಸಕ್ತಿ ಇಲ್ಲದ ಪಠ್ಯಪುಸ್ತಕದ ಕೊನೆಯೇ ಇಲ್ಲದ ಅಧ್ಯಾಯಗಳನ್ನು ಓದಿದ ಹಾಗೆ ಅನಿಸುತ್ತದೆ. ಚಿತ್ರ ವೀಕ್ಷಿಸುವಾಗ ನಿಮ್ಮ ಮಿದುಳು ಕೆಲಸ ಮಾಡುವುದನ್ನೇ ನಿಲ್ಲಿಸಿಬಿಡಬಹುದು. ಕೆಲವು ದೃಶ್ಯಗಳಿಗೆ ನಗು ಬರುತ್ತದೆ. ಈ ಚಿತ್ರ ಒಟಿಟಿಗೆ ಬರುವವರೆಗೂ ಕಾಯಿರಿ. ಒಟಿಟಿಯಲ್ಲಿ ಈ ಚಿತ್ರ ವೀಕ್ಷಿಸಲು ಇಷ್ಟವಿಲ್ಲದಿದ್ದರೆ ಬೇರೆ ಆಯ್ಕೆಗಳು ಇರುತ್ತವೆ.ಈ ಚಿತ್ರ ನೋಡಲು ನಿಮ್ಮ ಹಣ ಮತ್ತು ಸಮಯ ವ್ಯರ್ಥ ಮಾಡಬೇಡಿ” ಎಂದು ಬರೆದಿದ್ದಾರೆ.

[t4b-ticker]
error: Content is protected !!