ನೌಕಾ ದಿಗ್ರಂಧನ ತೆಗೆಯದಿದ್ರೆ ಗಲ್ಫ್ ವ್ಯಾಪಾರ ತಲೆಕೆಳಗಾಗುತ್ತೆ ಹುಷಾ‌ರ್..! ಅಮೆರಿಕಾಗೆ ಇರಾನ್ ವಾರ್ನಿಂಗ್

Picture of Savistara

Savistara

Bureau Report

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇರಾನ್ ಮತ್ತು ಅಮೆರಿಕಾ ನಡುವಿನ ಮಾತಿನ ಸಮರ ಮತ್ತಷ್ಟು ತೀವ್ರಗೊಂಡಿದೆ. ಹಾರ್ಮುಜ್‌ ಜಲಸಂಧಿಯಲ್ಲಿ ಅಮೆರಿಕಾ ಜಾರಿಗೊಳಿಸಿರುವ ನೌಕಾ ದಿಗ್ವಂಧನವನ್ನು ಹಿಂಪಡೆಯದಿದ್ದರೆ ಗಲ್ಫ್ ಪ್ರದೇಶದ ವ್ಯಾಪಾರವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.ಇರಾನ್‌ನ ಸೈನಿಕ ವಲಯದ ಹಿರಿಯ ಅಧಿಕಾರಿಗಳು, ಅಮೆರಿಕಾ ಹಡಗುಗಳು ಜಲಸಂಧಿ ನಿಯಂತ್ರಣಕ್ಕೆ ಮುಂದಾದರೆ ಅವು ಕ್ಷಿಪಣಿಗಳ ನೇರ ಗುರಿಯಾಗಲಿವೆ ಎಂದು ಸ್ಪಷ್ಟವಾಗಿ ಎಚ್ಚರಿಸಿದ್ದಾರೆ. ಜಾಗತಿಕ ತೈಲ ಸರಬರಾಜಿನ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಮೂಲಕ ವಿಶ್ವದ ಸುಮಾರು 20 ಶೇಕಡಾ ತೈಲ ಸಾಗಾಟ ನಡೆಯುವುದರಿಂದ, ಈ ಬೆಳವಣಿಗೆ ಜಾಗತಿಕ ಮಾರುಕಟ್ಟೆಗಳಿಗೆ ಆತಂಕ ಉಂಟುಮಾಡಿದೆ.

ಇದಕ್ಕೆ ವಿರುದ್ಧವಾಗಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ಶೀಘ್ರವೇ ಅಂತ್ಯಗೊಳ್ಳುವ ಹಂತಕ್ಕೆ ಬಂದಿದೆ ಎಂದು ಹೇಳಿರುವುದು ಪರಿಸ್ಥಿತಿಯಲ್ಲಿನ ವಿರೋಧಾಭಾಸವನ್ನು ತೋರಿಸಿದೆ. ಒಂದೆಡೆ ಯುದ್ಧ ವಿರಾಮ ಮತ್ತು ಮಾತುಕತೆಗಳ ಪ್ರಯತ್ನಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಕಠಿಣ ಹೇಳಿಕೆಗಳು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ.

ಇದರ ಜೊತೆಗೆ, ಅಮೆರಿಕಾ ಇರಾನ್ ಜೊತೆ ವ್ಯವಹಾರ ನಡೆಸುವ ಹಣಕಾಸು ಸಂಸ್ಥೆಗಳ ಮೇಲೆ ದ್ವಿತೀಯ ನಿರ್ಬಂಧಗಳನ್ನು ಹೇರಲು ಸಿದ್ಧತೆ ನಡೆಸಿದೆ ಎಂಬ ವರದಿಗಳು ಹೊರಬಿದ್ದಿವೆ. ಇದರಿಂದ ಇರಾನ್ ಆರ್ಥಿಕತೆಗೆ ಹೆಚ್ಚುವರಿ ಒತ್ತಡ ಬೀಳುವ ಸಾಧ್ಯತೆ ಇದೆ.ಒಟ್ಟಾರೆ, ಗಲ್ಫ್ ಪ್ರದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಜಾಗತಿಕ ತೈಲ ಬೆಲೆ, ಸಾಗಾಟ ಮಾರ್ಗಗಳು ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ಮೇಲೆ ದೊಡ್ಡ ಪರಿಣಾಮ ಬೀರುವ ಭೀತಿ ಮುಂದುವರಿದಿದೆ. ಮುಂದಿನ ಕೆಲವು ದಿನಗಳಲ್ಲಿ ನಡೆಯುವ ರಾಜತಾಂತ್ರಿಕ ಮಾತುಕತೆಗಳು ಪರಿಸ್ಥಿತಿಯನ್ನು ಹೇಗೆ ಬದಲಾಯಿಸುತ್ತವೆ ಎಂಬುದರ ಮೇಲೆ ಜಗತ್ತಿನ ಗಮನ ನೆಟ್ಟಿದೆ.

[t4b-ticker]
error: Content is protected !!