ಕ್ಷೇತ್ರ ಪುನರ್ವಿಂಗಡಣೆ ‘ರಾಜಕೀಯ ನೋಟು ಅಮಾನೀಕರಣ’ವಾಗಲಿದೆ: ಶಶಿ ತರೂ‌ರ್

Picture of Savistara

Savistara

Bureau Report

ನವದೆಹಲಿ: ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯು”ರಾಜಕೀಯ ನೋಟು ಅಮಾನೀಕರಣ”ವಾಗಿ ಪರಿಣಮಿಸುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶುಕ್ರವಾರ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.ಮಹಿಳಾ ಮೀಸಲು ಕಾನೂನಿನ ತಿದ್ದುಪಡಿ ಮತ್ತು ಸೀಮಾ ನಿರ್ಣಯ ಆಯೋಗದ ಸ್ಥಾಪನೆಗಾಗಿ ಮಂಡಿಸಲಾದ ಮೂರು ಮಸೂದೆಗಳ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ, ಮಹಿಳಾ ಮೀಸಲಾತಿಯನ್ನು ಸಂಸತ್ತಿನ ವಿಸ್ತರಣೆಯೊಂದಿಗೆ ಜೋಡಿಸಿದ್ದಕ್ಕಾಗಿ ಕೇಂದ್ರ ಸರಕಾರವನ್ನು ತರೂರ್ ಟೀಕಿಸಿದರು.ಮಹಿಳಾ ಮೀಸಲಾತಿಯನ್ನು ಕ್ಷೇತ್ರ ನಿರ್ಣಯದೊಂದಿಗೆ ಜೋಡಿಸುವುದು ಭಾರತೀಯ ಮಹಿಳೆಯರ ಆಕಾಂಕ್ಷೆಗಳನ್ನು ದೇಶದ ಇತಿಹಾಸದಲ್ಲಿ “ಅತ್ಯಂತ ವಿವಾದಾತ್ಮಕ ಮತ್ತು ಸಂಕೀರ್ಣ” ಆಡಳಿತಾತ್ಮಕ ವ್ಯಾಯಾಮಗಳಲ್ಲಿ ಒಂದಕ್ಕೆ ಒತ್ತೆಯಾಳುಗಳನ್ನಾಗಿ ಮಾಡುವುದಾಗಿದೆ ಎಂದರು.”ಇಂದು ನಾವು ಮಹಿಳಾ ಮೀಸಲಾತಿ ಪರವಾಗಿ ಬಹುತೇಕ ಸರ್ವಾನುಮತದ ರಾಜಕೀಯ ಒಮ್ಮತವಿರುವ ಹೊಸ್ತಿಲಲ್ಲಿ ನಿಂತಿದ್ದೇವೆ. ಪ್ರತಿಯೊಂದು ಪ್ರಮುಖ ಪಕ್ಷವೂ ಸಾಂಕೇತಿಕತೆಯ ಸಮಯ ಮುಗಿದಿದೆ ಮತ್ತು ಸಾಮೂಹಿಕ ಪಾಲುದಾರಿಕೆಯ ಯುಗ ಪ್ರಾರಂಭವಾಗಬೇಕು ಎಂದು ಅರಿತುಕೊಂಡಿದೆ ಆದರೆ ನಮ್ಮ ಮುಂದಿರುವ ಶಾಸಕಾಂಗ ಪ್ರಕ್ರಿಯೆಯಿಂದ ನಾನು ತೀವ್ರವಾಗಿ ವಿಚಲಿತನಾಗಿದ್ದೇನೆ” ಎಂದರು.

[t4b-ticker]
error: Content is protected !!