ಕುಚುಪುಡಿ ನೃತ್ಯದ ವಿವಿಧ ಪ್ರಕಾರಗಳ ಪ್ರದರ್ಶನಗಳ ಮೂಲಕ ನಿರಂತರ 24 ಗಂಟೆಗಳ ಕಾಲ ನೃತ್ಯ ಮಾಡಿ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಮಾಡಿದ ಸುಳ್ಯದ ಕೆವಿಜಿ ವಿದ್ಯಾಸಂಸ್ಥೆಗಳ ಸಹ ಸಂಸ್ಥೆಯಾದ ನೆಹರೂ ಮೆಮೋರಿಯಲ್ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಅಭಿಷೇಕ್ ಕಣೆಮರಡ್ಕ.ಎ.11ರಂದು ಸಂಜೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ಅಭಿಷೇಕ್ ಕಣೆಮರಡ್ಕದ ನೃತ್ಯ ಪ್ರದರ್ಶನ ಆರಂಭಗೊಂಡು ಎ.12ರಂದು ಸಂಜೆ 7 ಗಂಟೆಯವರೆಗೆ ನಿರಂತರವಾಗಿ ನಡೆದು 24 ಗಂಟೆ ಪೂರ್ಣಗೊಂಡಿದೆ.
ಕುಚುಪುಡಿ ನೃತ್ಯದ ತರಂಗಂ, ಅಷ್ಟಪದಿ, ಶಬ್ದಂ ಹೀಗೆ ವಿವಿಧ ಪ್ರಾಕಾರಗಳನ್ನು ಅವರು ಪ್ರದರ್ಶನ ಮಾಡುತ್ತಿದ್ದು ಪ್ರೇಕ್ಷಕರ ಕಣ್ಮಣ ಸೆಳೆಯುತ್ತಿದೆ.ಇದು ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಸೇರಿದೆ.ಅಭಿಷೇಕ್ ಕಣೆಮರಡ್ಕ ರವರು ಮಂಡೆಕೋಲು ಗ್ರಾಮದ ಕಣೆಮರಡ್ಕ ರವಿ ಕೆ. – ಶ್ರೀಮತಿ ಸುಜಾತ ದಂಪತಿಗಳ ಪುತ್ರ. ಕುಚುಪುಡಿ ನೃತ್ಯ ಅಭ್ಯಾಸ ಮಾಡಿರುವ ಇವರು, ಭರತನಾಟ್ಯದ ಜೂನಿಯರ್ ಹಾಗೂ ಸೀನಿಯರ್ ಅಭ್ಯಾಸ ಮಾಡಿ, ಈಗ ವಿದ್ವತ್ ಕಲಿಯುತ್ತಿದ್ದಾರೆ.











































