ಪಿಯು ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸೈಬರ್ ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವೈಬ್‌ಸೈಟ್ ಸೃಷ್ಟಿಸಿ ವಿದ್ಯಾರ್ಥಿ, ಪಾಲಕರನ್ನು ವಂಚಿಸಲು ಮುಂದಾಗುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ఇంజినియరింగా సౌరి ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯಲಿರುವ ಸಿಇಟಿ ಪ್ರವೇಶಪತ್ರ ಡೌನ್‌ಲೋಡ್ ಹಾಗೂ నిటోగి ಸಂಬಂಧಿಸಿ ನಕಲಿ ವೈಬ್‌ಸೈಟ್‌ಗಳನ್ನು ರಚಿಸಿ ವಂಚನೆಗೆ ಮುಂದಾಗಿದ್ದಾರೆ. ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಸಾಮಾನ್ಯವಾಗಿ ಪಾಲಕರು ವಿವಿಧ ಕಾಲೇಜು, ವಿಶ್ವವಿದ್ಯಾಲಯ ಸೇರಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಜಾಲತಾಣಗಳ ಮಾಹಿತಿ ಹುಡುಕಾಟ ನಡೆಸಲು ಮುಂದಾಗುತ್ತಿದ್ದಾರೆ. ಈ ವೇಳೆ ಸೈಬರ್ ವಂಚಕರ ನಕಲಿ ಲಿಂಕ್, ವೈಬ್‌ಸೈಟ್‌ಗಳು ಕಾಣುತ್ತಿವೆ. ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚು ವಂಚನೆಗೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಏ.23, 24ರಂದು ನಡೆಯಲಿರುವ ಸಿಇಟಿ ಪ್ರವೇಶಪತ್ರಗಳನ್ನು ಬಹುತೇಕರು ಮೊಬೈಲ್‌ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಮೊಬೈಲ್‌ಗಳಿಗೆ ಬರುವ ನಕಲಿ ಲಿಂಕ್, ಸಂದೇಶಗಳನ್ನು ಗಮನಿಸುವ ಗ್ರಾಮೀಣ ವಿದ್ಯಾರ್ಥಿಗಳು ಸೈಬರ್ ವಂಚಕರ ಮೋಸಕ್ಕೆ ಬಲಿಯಾಗುತ್ತಿದ್ದಾರೆ. ಈ ಕುರಿತು ಸೈಬರ್ ಅಪರಾಧ ವಿಭಾಗದ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ವಿವಿಧ ರೀತಿಯಲ್ಲಿ ವಂಚನೆಗೆ ಮುಂದಾಗುತ್ತಿರುವ ವಂಚಕರ ಕೃತ್ಯಕ್ಕೆ ಪಾಲಕರಲ್ಲಿ ಆತಂಕ ಹೆಚ್ಚಿದೆ.
ಕೆಇಎ ಎಚ್ಚರಿಕೆ
ಸಿಇಟಿ ಪರೀಕ್ಷೆ ಪ್ರವೇಶ ಪತ್ರದ ಬಗ್ಗೆ ಸೈಬರ್ ವಂಚಕರಿಂದ ಎಚ್ಚರಿಕೆಯಿಂದ ಇರುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎಚ್ಚರಿಕೆ ನೀಡಿದೆ. ಗ್ರಾಮೀಣ ವಿದ್ಯಾರ್ಥಿಗಳು ಮೊಬೈಲ್‌ಗೆ ಬರುವ ಲಿಂಕ್, ಸಂದೇಶಗಳ ಬಗ್ಗೆ ಜಾಗೃತರಾಗಿರಬೇಕು. ಅಧಿಕೃತ ಇಲಾಖೆ ವೈಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಕೆಇಎ ಹೇಳಿದೆ.











































