ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಪ್ರಧಾನಿ ಮೋದಿ: ಇನ್ಮುಂದೆ ನಿಮ್ಮ ಪ್ರಯಾಣ ಜಸ್ಟ್ 2.5 ಗಂಟೆ!

Picture of Savistara

Savistara

Bureau Report

ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇಯನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ.ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಎಂದೂ ಕರೆಯಲ್ಪಡುವ 213 ಕಿಲೋಮೀಟರ್ ಉದ್ದದ ಈ ಎಕ್ಸ್‌ಪ್ರೆಸ್‌ವೇ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ಗಳನ್ನು ಸಂಪರ್ಕಿಸಲಿದ್ದು, ಈ ಮೂಲಕ ಈ ಹಿಂದೆ ಕನಿಷ್ಠ 6 ಗಂಟೆಗಳ ಕಾಲದ ಪ್ರಯಾಣ ಇನ್ಮುಂದೆ ಕೇವಲ 2.5 ಗಂಟೆಗೆ ಇಳಿಕೆಯಾಗಲಿದೆ. ಪ್ರವಾಸಿಗರಿಗೆ ಮತ್ತು ನಿತ್ಯ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ.ಈ ಯೋಜನೆಯಲ್ಲಿ ವಿಶೇಷವಾಗಿ ಪರಿಸರ ಮತ್ತು ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಲಾಗಿದ್ದು, ಏಷ್ಯಾದಲ್ಲೇ ಅತಿ ಉದ್ದವಾದ 12 ಕಿ.ಮೀ. ಎತ್ತರದ ವನ್ಯಜೀವಿ ಕಾರಿಡಾ‌ರ್ ಅನ್ನು ನಿರ್ಮಿಸಲಾಗಿದೆ. ಇದರಿಂದ ರಸ್ತೆಗಳಿಗೆ ಕಾಡು ಪ್ರಾಣಿಗಳ ಆಗಮನಕ್ಕೆ ತಡೆ ಬೀಳಲಿದ್ದು, ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದೆ. ಇದರ ಜೊತೆಗೆ ಈ ಹತ್ತು ಇಂಟರ್‌ಚೇಂಜ್‌ಗಳು, ಮೂರು ರೈಲ್ವೆ ಓವರ್‌ಬ್ರಿಡ್ಜ್‌ಗಳು, ನಾಲ್ಕು ಪ್ರಮುಖ ಸೇತುವೆಗಳುನಿರ್ಮಾಣ ಮಾಡಲಾಗಿದ್ದು, ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ.

[t4b-ticker]
error: Content is protected !!