ಸುಳ್ಯದಲ್ಲಿ ಕೊಕ್ಕೊ ಬೆಳೆಯ ಸಮರ್ಪಕ ನಿರ್ವಹಣೆ ವಿಚಾರ ಸಂಕಿರಣ ಕಾರ್ಯಕ್ರಮ

Picture of Savistara

Savistara

Bureau Report

ಸುಳ್ಯ:ಸುಳ್ಯ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕೃಷಿಕ ಸಮಾಜ ವತಿಯಿಂದ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಕೊಕ್ಕೊ ಬೆಳೆಯ ನಿರ್ವಹಣೆ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ಅದ್ಯಕ್ಷತೆಯನ್ನು ಡಾ. ಎಂ.ಕೆ ರಾಜೇಶ್ ಮುಖ್ಯಸ್ಥರು ICAR, CPCRI ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ವಿಜ್ಞಾನಿಗಳಾದ ಡಾ ಎಲೈನ್ ಅಪ್ಸರಾ ಮತ್ತು ಡಾ. ಭವಿಷ್ಯ ಮಾಹಿತಿ ನೀಡಿದರು ಕೊಕ್ಕೊ ಬೆಳೆಯ ನಿರ್ವಹಣೆ, ರೋಗ ಹತೋಟಿ ಬಗ್ಗೆ ಮಾಹಿತಿ ಹಂಚಿಕೊಂಡರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿ.ಎ ಬ್ಯಾಂಕ್ ಅಧ್ಯಕ್ಷ ವಿಕ್ರಂ ಎ. ವಿ, ಕೃಷಿಕ ಸಮಾಜ ಅಧ್ಯಕ್ಷ ಕುಸುಮಧಾರ ಎ. ಟಿ,ಬ್ರೌನ್ ಗೋಲ್ಡ್ ಕೊಕ್ಕೊ ಪ್ರೊಡ್ಯೂಸರ್ ಕಂಪನಿ ಯ ಕೆಜೆ ವರ್ಗಿಸ್, ಟೊಮ್ ಚಾರ್ಜ್,ಸಿ. ಎ ಬ್ಯಾಂಕ್ ಮಾಜಿ ಅಧ್ಯಕ್ಷ ಹರೀಶ್ ಬೂಡುಪನ್ನೆ, ಕೃಷಿಕ ಬಂಧುಗಳು ಉಪಸ್ಥಿತರಿದ್ದರು

[t4b-ticker]
error: Content is protected !!