ʻಜೆಡಿಎಸ್ ಬೆಳ್ಳಿ ಹಬ್ಬʼ ಸಮಾವೇಶ – 1 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ

Picture of Savistara

Savistara

Bureau Report

ಬೆಂಗಳೂರು: ಜೆಡಿಎಸ್ ಪಕ್ಷ ಸ್ಥಾಪನೆ ಆಗಿ 25 ವರ್ಷ ಕಳೆದ ಹಿನ್ನಲೆ ಬೆಂಗಳೂರಿನ ಕೊಮ್ಮಘಟ್ಟದ ಬಳಿ ಜೆಡಿಎಸ್ ಬೆಳ್ಳಿ ಹಬ್ಬ ಸಮಾವೇಶ ನಡೆಸುತ್ತಿದೆ. ಸಮಾವೇಶ ಪೂರ್ವಭಾವಿ ಸಿದ್ಧತೆಯನ್ನ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವೀಕ್ಷಣೆ ಮಾಡಿದ್ರು. ಸಮಾವೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.

ಸಿದ್ಧತೆ ವೀಕ್ಷಣೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ, 25 ವರ್ಷ ಪಕ್ಷ ಪೂರೈಕೆ ಮಾಡಿದೆ. ಬೆಂಗಳೂರಿನಲ್ಲಿ JDS ಶಕ್ತಿ ಕುಗ್ಗಿದೆ ಅಂತ ಅನೇಕರು ಹೇಳ್ತಾರೆ‌. ಆದರೆ ನಮಗೂ ಶಕ್ತಿ ಇದೆ. ಬೆಂಗಳೂರಿನಲ್ಲಿ ಸಂಘಟನೆ ಒತ್ತು ಕೊಡಬೇಕು. ಜಿಬಿಎ ಚುನಾವಣೆಗೆ ಸಿದ್ಧತೆ ಆಗ್ತಿದೆ. ಸುಪ್ರೀಂ ಕೋರ್ಟ್ ಕೂಡಾ ಚುನಾವಣೆ ಮಾಡಬೇಕು ಅಂತ ಹೇಳಿದೆ. ಜಿಬಿಎ ಚುನಾವಣೆಯಲ್ಲಿ ಹೊಸ ನಾಯಕರು ಸೃಷ್ಟಿ ಆಗ್ತಾರೆ. ಬೆಂಗಳೂರಿನಲ್ಲಿ ಅನೇಕ ಸಮಸ್ಯೆಗಳು ಇವೆ. ಜನರು ಎಚ್ಚೆತ್ತುಕೊಳ್ಳಲು ಇದೊಂದು ಸಮಾವೇಶ ಮಾಡ್ತಾ ಇದ್ದೇವೆ ಅಂತ ತಿಳಿಸಿದರು.ಜಿಬಿಎ ಚುನಾವಣೆಯಲ್ಲಿ ಗೊಂದಲ ಇಲ್ಲ. ಫೈನಲ್ ನೋಟಿಫಿಕೇಶನ್ ಆಗಿದೆ.

ಈಗಾಗಲೇ ಜಿಬಿಎ ಚುನಾವಣೆ ಸಭೆ ನಡೆದಿದೆ. ಇದಕ್ಕೆ ಸಮಾವೇಶ ಮಾಡ್ತಾ ಇದ್ದೇವೆ‌. ಪಕ್ಷ ಸಂಘಟನೆ ಮಾಡೋದು, ದೇವೇಗೌಡ, ಕುಮಾರಸ್ವಾಮಿ ಕೊಡುಗೆ ಬಗ್ಗೆ ಬೆಂಗಳೂರು ಜನರಿಗೆ ತಿಳಿಸೋ ಕೆಲಸ ಮಾಡುತ್ತೇವೆ. ಜೆಡಿಎಸ್ ಸಂಘಟನೆ ಬೆಂಗಳೂರಿನಲ್ಲಿ ಇದೆ ಅಂತ ಸಾಬೀತು ಮಾಡ್ತೀವಿ. ಈಗಾಗಲೇ ಉಸ್ತುವಾರಿ ನೇಮಕ ಮಾಡಲಾಗಿದೆ. ಪಾರ್ಟಿ ಸಂಘಟನೆ ದೃಷ್ಟಿಯಿಂದ ಎಲ್ಲಾ ಕ್ರಮ ತೆಗೆದುಕೊಳ್ಳಲಾಗ್ತಿದೆ. ಹೊಸ ನಾಯಕತ್ವ ಸೃಷ್ಟಿಗೆ ಪಕ್ಷ ಸಹಕಾರ ನೀಡಲಿದೆ. ನಮ್ಮ ಅಭ್ಯರ್ಥಿಗಳು ಜನರ ಜೊತೆ ಇರಬೇಕು. ವಾರ್ಡ್ ಸಮಸ್ಯೆ ಬಗ್ಗೆ ಹೋರಾಟ ಮಾಡಬೇಕು. ಜನರ ಸಂಘಟನೆ ಮಾಡೋರಿಗೆ ಪಕ್ಷ ಅವಕಾಶ ಕೊಡಲಿದೆ ಅಂತ ತಿಳಿಸಿದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!