ಮಧ್ಯಪ್ರಾಚ್ಯದಲ್ಲಿ ಮತ್ತೆ ಕದನ ತೀವ್ರವಾಗುವ ಆತಂಕ: ಚೀನಾಕ್ಕೆ ಟ್ರಂಪ್‌ ಎಚ್ಚರಿಕೆ!

Picture of Savistara

Savistara

Bureau Report

ವಾಷಿಂಗ್ಟನ್: ಎರಡು ವಾರಗಳ ಕದನ ವಿರಾಮದ ನಡುವೆಇಸ್ಲಮಾಬಾದ್ ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ ಮಧ್ಯಪ್ರಾಚ್ಯ ಇನ್ನಷ್ಟು ಉದ್ವಿಗ್ನವಾಗುವ ಸಾಧ್ಯತೆ ಹೆಚ್ಚಳವಾಗಿದೆ.ಒಂದೆಡೆ ಇಸ್ರೇಲ್ ಲೆಬನಾನ್ ಮೇಲೆ ಭಾರೀ ದಾಳಿ ಮುಂದುವರಿಸಿದ್ದು, ಇರಾನ್ ಮೇಲೂ ಮತ್ತೆ ದಾಳಿ ನಡೆಸುವ ಸಾಧ್ಯತೆಗಳು ಹೆಚ್ಚಿವೆ.

ಇರಾನ್ ಕೂಡ ಪ್ರಬಲ ತಿರುಗೇಟು ನೀಡಲು ಸಜ್ಜಾಗಿದೆ.ಪಾಕಿಸ್ಥಾನದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳು ವಿಫಲವಾದ ವೇಳೆಯೇ ಅಮೆರಿಕ ಅಧ್ಯಕ್ಷ ಇರಾನ್ ಯುದ್ಧದ ವಿಚಾರದಲ್ಲಿ ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ.ANI ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಏನಾಗುತ್ತದೆ ಎಂದು ನಾವು ನೋಡುತ್ತೇವೆ. ನಾವು ಇರಾನ್ ಜತೆ ಆಳವಾದ ಮಾತುಕತೆ ನಡೆಸುತ್ತಿದ್ದೇವೆ,

ಏನೇ ಇರಲಿ ನಾವು ಗೆಲ್ಲುತ್ತೇವೆ. ನಾವು ಅವರನ್ನು ಮಿಲಿಟರಿ ರೀತಿಯಲ್ಲಿ ಸೋಲಿಸಿದ್ದೇವೆ. ನಾವು ಹೊರ್ಮುಜ್ ಜಲಸಂಧಿಯನ್ನು ಸ್ವಚ್ಛಗೊಳಿಸುತ್ತಿದ್ದೇವೆ. ಒಪ್ಪಂದ ಮಾಡಿಕೊಳ್ಳುತ್ತೇವೆಯೋ ಇಲ್ಲವೋ, ಅದು ನನಗೆ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಕಾರಣ ನಾವು ಗೆದ್ದಿದ್ದೇವೆ” ಎಂದು ಹೇಳಿದ್ದಾರೆ.ನಮಗೆ NATO ಪಡೆಗಳು ಯಾವುದೇ ಸಹಾಯ ಮಾಡಲಿಲ್ಲ” ಎಂದು ಟ್ರಂಪ್‌ ಪರೋಕ್ಷ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನೊಂದೆಡೆ, ಚೀನಾ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಟ್ರಂಪ್, “ಚೀನಾ ಹಾಗೆ ಮಾಡಿದ್ದು ಹೌದಾದರೆ, ದೊಡ್ಡ ಸಮಸ್ಯೆಗಳನ್ನು ಎದುರಿಸಲಿದೆ” ಎಂದು ಗುಡುಗಿದ್ದಾರೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!