ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ಸುಳ್ಯ ತಾಲೂಕು ಇದರ ವತಿಯಿಂದ ಸಿ .ಎ. ಬ್ಯಾಂಕ್ ಸಭಾಭವನದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್( ರಿ) ಅಧ್ಯಕ್ಷರಾದ ಶ್ರೀಮತಿ ಪುಷ್ಪ ಮೇದಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು ಕಾರ್ಯಕ್ರಮವನ್ನು ದಂಪತಿಗಳಾದ ಕಳಪಾರೆ ಪೈಲಾರು ಶ್ರೀಮತಿ ಚೈತ್ರ ಲೋಕೇಶ್ ಪೂಜಾರಿ ಉದ್ಘಾಟಿಸಿ ದರು. ಈ ಸಂದರ್ಭದಲ್ಲಿ ಮುಖ್ಯ ಅಭ್ಯಾಗತರಾಗಿ ಸಾಂದೀಪ ವಿಶೇಷ ಚೇತನ ಶಾಲೆ ಸುಳ್ಯ ಇದರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹರಿಣಿ ಸದಾಶಿವ ಮಹಿಳಾ ದಿನಾಚರಣೆಯ ಬಗ್ಗೆ ಮಾಹಿತಿಯನ್ನು ನೀಡಿದರು .

ಈ ಸಂದರ್ಭದಲ್ಲಿ ನಾಟಿ ವೈದ್ಯ ಮತ್ತು ಶೋಭಾನೆ ಹಾಡುಗಾರರಾದ ಶ್ರೀಮತಿ ಸತ್ಯವತಿ ಅಡ್ಪಂಗಾಯ ಇವರನ್ನು ಸನ್ಮಾನಿಸಲಾಯಿತು. ಶ್ರೀಮತಿ ಜಯಂತಿಯವರು ಸತ್ಯವತಿಯವರ ಕಿರುಪರಿಚಯವನ್ನು ವಾಚಿಸಿದರು. ಸ್ತ್ರೀ ಆರೋಗ್ಯ ತಜ್ಞರಾದ ಸುಳ್ಯದ ಡಾ|ವೀಣಾ ರವರು ಆರೋಗ್ಯ ಮಾಹಿತಿಯನ್ನ ನೀಡಿದರು. ನುರಿತ ತರಬೇತುದಾರರಿಂದ ಗವ್ಯ ಉತ್ಪನ್ನಗಳಿಂದ ತಯಾರಿಸಲಾಗುವ ಧೂಪ, ದೀಪ, ದಂತಮಜ್ಜನ,ಗೋ ರಕ್ಷಾ ಕವಚ ಗಳ ಬಗ್ಗೆ ಗೋ ಸೇವಾ ಪ್ರಮುಖ್ ಅಕ್ಷಯ್ ಇವರು ಮಾಹಿತಿಯನ್ನು ನೀಡಿದರು. ಮಹಿಳಾ ದಿನಾಚರಣೆಯ ಪ್ರಯುಕ್ತ ಈ ವರ್ಷದ ಅದೃಷ್ಟ ಗೃಹಿಣಿ ಮಹಿಳೆಯನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ ನ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಅನುಷ್ಠಾನ ಸಮಿತಿ ಸದಸ್ಯರು ಗ್ರಾಮ ಸಂಚಾಲನ ಸಮಿತಿ ಸದಸ್ಯ ರು ಉಪಸ್ಥಿತರಿದ್ದರು ಆರೋಗ್ಯ ಭಾರತಿ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಜೀ, ಜಿಲ್ಲಾ ಪ್ರಮುಖ್ ಪುರುಷೋತ್ತಮ ದೇವಸ್ಯಉಪಸ್ಥಿತರಿದ್ದರು. ಗುಣವತಿ ಕೊಲ್ಲಂತಡ್ಕ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು .ವಕೀಲೆ ಸುಮನ ವಂದೆಮಾತರಂ ಗೀತೆ ಹಾಡಿದರು. ಶ್ರೀಮತಿ ಶಶಿಕಲಾ ಎ ಕಾರ್ಯಕ್ರಮ ನಿರೂಪಿಸಿ ಶಾರದಾ ಡಿ ಶೆಟ್ಟಿ ವಂದಿಸಿ ದರು. ಶಾಂತಿ ಮಂತ್ರ ದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.













































