ಟೋಲ್ ಬೂತ್​ನಲ್ಲಿ ಇನ್ಮುಂದೆ ಕ್ಯಾಷ್ ಪೇಮೆಂಟ್​ಗೆ ಅವಕಾಶವೇ ಇಲ್ಲ; ಫಾಸ್​ಟ್ಯಾಗ್ ಕಡ್ಡಾಯ

Picture of Savistara

Savistara

Bureau Report

ನವದೆಹಲಿ : ಹೆದ್ದಾರಿಗಳಲ್ಲಿರುವ ಟೋಲ್ ಬೂತ್​ಗಳಲ್ಲಿ ನೂರಕ್ಕೆ ನೂರು ಫಾಸ್​ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಇವತ್ತಿನಿಂದಲೇ ಡಿಜಿಟಲ್ ಟೋಲ್ ಕಲೆಕ್ಷನ್ ಸಿಸ್ಟಂ ಜಾರಿಯಾಗಿದೆ. ದೇಶಾದ್ಯಂತ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್​ಪ್ರೆಸ್​ವೇಗಳಲ್ಲಿ ಇರುವ ಟೋಲ್ ಬೂತ್​ಗಳಲ್ಲಿ ಫಾಸ್​ಟ್ಯಾಗ್ ಮೂಲಕವೇ ವಾಹನಗಳು ಟೋಲ್ ಪಾವತಿಸಬೇಕು. ಫಾಸ್​ಟ್ಯಾಗ್ ಇಲ್ಲದವರು ಟೂಲ್ ಬೂತ್​ಗಳಲ್ಲಿ ಕ್ಯಾಷ್ ನೀಡಿ ಪಾವತಿಸುವ ಅವಕಾಶ ನಿನ್ನೆಯೇ ಮುಕ್ತಾಯಗೊಂಡಿದೆ. ಫಾಸ್​ಟ್ಯಾಗ್ ಇಲ್ಲದ ವಾಹನಗಳಿಂದ ಟೋಲ್ ಬೂತ್​ಗಳಲ್ಲಿ ವಾಹನದಟ್ಟನೆ ಹೆಚ್ಚುತ್ತಿರುವುದು ಗಮನಕ್ಕೆ ಬಂದಿತ್ತು. ಟೋಲ್ ಬೂತ್​ಗಳಲ್ಲಿ ಈ ವಾಹನದಟ್ಟನೆ ಕಡಿಮೆ ಮಾಡಲು, ಕಾಯುವಿಕೆ ಅವಧಿ ಕಡಿಮೆ ಮಾಡಲು ಮತ್ತು ವಾಹನ ಸಂಚಾರವನ್ನು ಸುಗಮಗೊಳಿಸಲು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪೂರ್ಣ ಮಟ್ಟದಲ್ಲಿ ಡಿಜಿಟಲ್ ಟೋಲ್ ಕಲೆಕ್ಷನ್ ಸಿಸ್ಟಂ ಅನ್ನು ಅನುಷ್ಠಾನಕ್ಕೆ ತಂದಿದೆ. ಎಲ್ಲಾ ವಾಹನಗಳಿಗೂ ಫಾಸ್​ಟ್ಯಾಗ್ ಅಳವಡಿಸಿಕೊಳ್ಳಬೇಕಾಗುತ್ತದೆ. ಫಾಸ್​ಟ್ಯಾಗ್ ಅಳವಡಿಕೆ ಆಗಿದ್ದೂ ಅದು ಸಕ್ರಿಯವಾಗಿಲ್ಲದಿದ್ದರೆ ಆಟೊಮ್ಯಾಟಿಕ್ ಟೋಲ್ ಕಲೆಕ್ಷನ್ ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ವಾಹನ ಸವಾರರು ಕ್ಯಾಷ್ ಮೂಲಕ ಟೋಲ್ ಪೇಮೆಂಟ್ ಮಾಡುತ್ತಿದ್ದರು? ಈಗ ಕ್ಯಾಷ್ ಪೇಮೆಂಟ್​ಗೆ ಅವಕಾಶ ಇಲ್ಲದಿರುವಾಗ ಏನು ಮಾಡಬೇಕು? ಆಗ ಕ್ಯಾಷ್ ಬದಲು ಯುಪಿಐ ಅಥವಾ ಇತರ ಡಿಜಿಟಲ್ ವಿಧಾನಗಳಿಂದ ಟೋಲ್ ಪೇಮೆಂಟ್ ಮಾಡಬಹುದು. ಇದಕ್ಕೆ ಹೆಚ್ಚಿನ ಟೋಲ್ ವಿಧಿಸಲಾಗುತ್ತದೆ. ಶೇ. 125ರಷ್ಟು ಟೋಲ್ ಕಟ್ಟಬೇಕಾಗುತ್ತದೆ. ಅಂದರೆ, 100 ರೂ ಇರುವ ಟೋಲ್​ಗೆ 125 ರೂ ಪಾವತಿಸಬೇಕಾಗುತ್ತದೆ.

News Updates

ಇಂದು ರಾತ್ರಿ ಇಡೀ ನಾಗರಿಕತೆಯ ಸರ್ವನಾಶವಾಗಲಿದೆ : ಇರಾನ್ ಮೇಲೆ ಪ್ರಬಲ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್ : 48 ಗಂಟೆ ವಿದ್ಯುತ್ ಸಂಪರ್ಕ ಉಪಯೋಗಿಸದೆ ಮನೆಯೊಳಗಿರುವಂತೆ ಭಾರತೀಯರಿಗೆ ಎಚ್ಚರಿಸಿ ಸಹಾಯವಾಣಿ ತೆರೆದ ಕೇಂದ್ರ ಸರ್ಕಾರ..!

[t4b-ticker]
error: Content is protected !!