ಭಾರತೀಯ ಪರಂಪರೆಯಲ್ಲಿ ಜನಿಸಿದ ಪಂಥಗಳಾದ ಬೌದ್ಧ ಮತ್ತು ಸಿಖ್ ಧರ್ಮಗಳನ್ನು ಹೊರತುಪಡಿಸಿ ಇನ್ನು ಯಾವುದೇ ಮತಕ್ಕೆ ಮತಾಂತರವಾದರೆ ಎಸ್ಸಿ ಎಸ್ಟಿ ಸ್ಥಾನಮಾನ ಪಡೆಯಲು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಐತಿಹಾಸಿಕ ಎಂದು ಬಿಜೆಪಿ ಸುಳ್ಯ ಮಂಡಲ ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಜಯನಗರ ತಿಳಿಸಿದ್ದಾರೆ.ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು, ಸಂವಿಧಾನದ ಆಶಯಗಳನ್ನು ನ್ಯಾಯಾಲಯವು ಎತ್ತಿ ಹಿಡಿದಿದೆ. ಕ್ರೈಸ್ತ ಮೀಷನರಿಗಳು ಇಸ್ಲಾಮಿಕ್ ಮೂಲಭೂತವಾದಿಗಳು ಬೇರೆ ಬೇರೆ ರೀತಿಯ ಆಸೆ ಆಮೀಷಗಳನ್ನು ಒಡ್ಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮುಗ್ಧ ಜನರನ್ನು ಮತಾಂತರ ಮಾಡುವಂತ ಪ್ರವೃತ್ತಿಗೆ ಅವರನ್ನು ಮರುಳು ಮಾಡಿ ಅವರ ದಾರಿ ತಪ್ಪಿಸಿ ಅವರನ್ನು ಮೋಸದ ಜಾಲಕ್ಕೆ ಸಿಲುಕಿಸಿ ಅವರನ್ನು ಮತಾಂತರ ಮಾಡುವಂತ ಪ್ರಕ್ರಿಯೆಗೆ ಈ ಮೂಲಕ ಸಂಪೂರ್ಣವಾಗಿ ಕಡಿವಾಣ ಬೀಳಲಿದೆ.ಆದ್ದರಿಂದ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪನ್ನು ಸ್ವಾಗತಿಸುವುದಾಗಿ ಅವರು ತಿಳಿಸಿದ್ದಾರೆ.
ಮತಾಂತರಿತರಿಗೆ ಎಸ್ಸಿ, ಎಸ್ಟಿ ಸ್ಥಾನಮಾನ ರದ್ದು – ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತರ್ಹ : ಜಗನ್ನಾಥ ಜಯನಗರ
Savistara
Bureau Report
[t4b-ticker]













































