ಜಾಲ್ಲೂರು ಗ್ರಾಮದ ವಿನೋಬಾನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ಶಾಲೆಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಸ್ವಾಗತಿಸುವ “ಆಗತ ಸ್ವಾಗತ” ಕಾರ್ಯಕ್ರಮ ಜೂ.9ರಂದು ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆ ಯ ಆಡಳಿತ ಮಂಡಳಿ ಅಧ್ಯಕ್ಷರಾದನ. ಸೀತಾರಾಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಎಂ.ಬಿ. ಸದಾಶಿವ ಭಾಗವಹಿಸಿ, “ಆಧ್ಯಾತ್ಮಿಕ ಜೀವನ ಮತ್ತು ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು, ವಿದ್ಯಾರ್ಥಿಗಳ ಜೀವನದಲ್ಲಿ ವಿಶ್ವೇಶ್ವರಯ್ಯ ಹಾಗೂ ಕಲಾಂ ರವರ ಆದರ್ಶವನ್ನು ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ವಿಕ್ರಂಸಿಂಹ ನಾಯಕ ಹಾಗೂ ಶ್ರೀಮತಿ ಸುಮಾ ವಿಕ್ರಂ ಸಿಂಹ ನಾಯಕ್ ಆಗಮಿಸಿದ್ದರು . ಕಾರ್ಯಕ್ರಮದಲ್ಲಿ ಶಾಲೆಯ ಕೊಶಾಧಿಕಾರಿಗಳಾದ ಕೆ.ಸುಧಾಕರ ಕಾಮತ್ ಹಾಗೂ ಸಂಚಾಲಕರಾದ ಡಾ. ಗೋಪಾಲಕೃಷ್ಣ ಭಟ್ ಕಾಟೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಪುರುಷೋತ್ತಮ ಕಿರ್ಲಾಯ, ಶಿವಪ್ರಸಾದ್ ಉಗ್ರಾಣಿಮನೆ, ಹೇಮಂತ್ ಕಾಮತ್, ಹೇಮಂತ್ ಮಠ, ಪ್ರಾಥಮಿಕ ವಿಭಾಗದ ಶಾಲಾಭಿವೃದ್ಧಿ ಸಮೀತಿಯ ಅಧ್ಯಕ್ಷರಾದ ರವಿರಾಜ್ ಗಬ್ಬಲಡ್ಕ, ಮುಖ್ಯೋಪಾಧ್ಯಾಯರಾದ ಜಯಪ್ರಸಾದ್ ಕಾರಿಂಜ ಹಾಗೂ ಪೋಷಕ ವೃಂದದವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪ್ರಾಥಮಿಕ ವಿಭಾಗದ ಸಹ ಶಿಕ್ಷಕಿ ಶ್ರೀಮತಿ ಪಾವನ ನಿರೂಪಿಸಿ, ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಗಿರೀಶ್ ಕುಮಾರ್ ಸ್ವಾಗತಿಸಿದರು, ಸಂಸ್ಥೆಯ ಪ್ರೌಢ ವಿಭಾಗದ ಸಹಶಿಕ್ಷಕಿ ಯಾದ ವಿದ್ಯಾಲಕ್ಷ್ಮಿ ಬಿ.ಸಿ. ವಂದಿಸಿದರು.









































