ಸುಬ್ರಹ್ಮಣ್ಯ :ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುವ ನಾಗರಾಧನೆಯ ಕ್ಷೇತ್ರವಾಗಿರುವ ಕುಕ್ಕೆಸುಬ್ರಹ್ಮಣ್ಯ- ಉಡುಪಿ ರಾಜ್ಯ ಹೆದ್ದಾರಿ ರಸ್ತೆಯ ಕಿಲೋಮೀಟರ್ 6.20 ರ ಕೋಟೆ ಹೊಳೆ ಎಂಬಲ್ಲಿ ಮುಳುಗು ಸೇತುವೆಯಿಂದ ಕಡಬ ಭಾಗದಿಂದ ಕುಕ್ಕೆಗೆ ಬರುವ ವಿದ್ಯಾರ್ಥಿಗಳು, ಭಕ್ತರು ಹಾಗೂ ಊರಿನ ಜನರು ಪ್ರತಿ ಮಳೆಗಾಲದಲ್ಲಿ ಕಷ್ಟ ಅನುಭವಿಸುತ್ತಿದ್ದರು ಯಾವಾಗ ಎಷ್ಟು ಹೊತ್ತಿಗೆ ಸೇತುವೆ ಮುಳುಗಿ ದಾಟಲು ಅನನುಕೂಲವಾಗುವುದೆಂಬ ವಿಷಯ ಯಾರಿಗೂ ತಿಳಿಯದಾಗಿತ್ತು ಅನೇಕ ತುರ್ತು ಸಂದರ್ಭದಲ್ಲಿ ಜನ ಸಮಸ್ಯೆಗೆ ಒಳಗಾಗುತ್ತಿದ್ದರು ಜನಪ್ರತಿನಿಧಿಗಳ ಮೇಲೆ ಒತ್ತಡ ನಂತರ ಮಾಜಿ ಶಾಸಕ ಅಂಗಾರ ರ ಮುತುವರ್ಜಿ ಮತ್ತು ಭಾಗೀರಥಿ ಮುರುಳ್ಯ ನೆರವಿನಿಂದ ಇದೀಗ ಹಳೆಯದನ್ನೆಲ್ಲ ಮರೆಸುವಂತೆ ಅತ್ಯಂತ ಸುಂದರ 40 ಮೀಟರ್ ಉದ್ದದ 12 ಮೀಟರ್ ಅಗಲದ ಸರ್ವ ಋತು ಸೇತುವೆಯು ವಾಹನ ಸಂಚಾರಕ್ಕೆ ಸಿದ್ದಗೊಂಡಿದೆ.

20 ಮೀಟರ್ ಉದ್ದದ 2 ಸ್ಪಾನ್ ಒಳಗೊಂಡಂತೆ 3 ಪಿಲ್ಲರ್ಗಳ ಸುಂದರ ಸೇತುವೆಯಾಗಿದೆ ಉಳಿದಂತೆ ಕೂಡು ರಸ್ತೆ ಬಾಕಿಯಾಗಿದೆ.ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆಯ ಕಾಮಗಾರಿಯನ್ನು ಸಹಾಯಕ ಇಂಜೀನಿಯರ್ ಪ್ರಮೋದ್ ಕುಮಾರ್ ನಿರ್ವಹಿಸಿದ್ದು ಕೇರಳದ ಲೊಫ್ ಕನ್ಸ್ಟ್ರಕ್ಷನ್ ಅವರು ಕಾಮಗಾರಿ ಮಾಡಿರುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಹಾಗೂ ಸ್ಟ್ರಕ್ಚರಲ್ ಕನ್ಸಲ್ಟೆಂಟ್ ಇಂಜನಿಯರ್ ಪ್ರಸನ್ನ ದರ್ಬೆಯವರು ಯೋಜನೆ ಮತ್ತು ತಾಂತ್ರಿಕ ವಿನ್ಯಾಸ ಮಾಡಿರುತ್ತಾರೆ.









































