‘ಕ್ಯಾಶ್‌ಲೆಸ್’ ಕನಸಿಗೆ ಹಿನ್ನಡೆ: UPI ಬಳಕೆ ಕುಸಿತ, ನಗದು ವಹಿವಾಟಿನತ್ತ ಚಿತ್ತ

Picture of Savistara

Savistara

Bureau Report

ನವದೆಹಲಿ: ಯುಪಿಐ ಪಾವತಿ ಮೇಲೆ ವ್ಯಾಪಾರಿಶುಲ್ಕ (ಎಂಡಿಆರ್) ವಿಧಿಸುವ ಕ್ರಮದ ಕುರಿತು ಈ ಬಾರಿಯ ಸಂಸತ್ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಯೊಂದು ಅಂಗೀಕಾರಗೊಂಡ ಬೆನ್ನಲ್ಲೇ ಡಿಜಿಟಲ್ ಪಾವತಿಯಲ್ಲಿ ಕುಸಿತ ಮತ್ತು ನಗದು ವಹಿವಾಟು ಹೆಚ್ಚಳವಾಗುತ್ತಿರುವ ಅಂಶದ ಮೇಲೆ ವರದಿಯೊಂದು ಬೆಳಕು ಚೆಲ್ಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದತ್ತಾಂಶಗಳ ಪ್ರಕಾರ, ಸಾರ್ವಜನಿಕರ ಬಳಿಯಿರುವ ನಗದು ಪ್ರಮಾಣದ ಬೆಳವಣಿಗೆ ದರವು ಕೋವಿಡ್-19 ಅವಧಿಯಲ್ಲಿ ಅಂದರೆ 2020-21ರಲ್ಲಿ ಸುಮಾರು ಶೇ 17ರ ಗರಿಷ್ಠ ಮಟ್ಟ ತಲುಪಿತ್ತು. 2023-24ರ ಅವಧಿಯಲ್ಲಿ ಶೇ 4ರ ಮಟ್ಟಕ್ಕೆ ಇಳಿದಿದ್ದರೂ, ನಂತರ ಮತ್ತೆ ಏರಿಕೆಯಾಗಿದೆ.’ದಿ ಹಿಂದೂ’ ಪತ್ರಿಕೆ ನಡೆಸಿದ ವಿಶ್ಲೇಷಣೆಯ ಪ್ರಕಾರ, ಸಾರ್ವಜನಿಕರ ಬಳಿಯಿರುವ ನಗದು ಪ್ರಮಾಣದ ಬೆಳವಣಿಗೆ ದರವು 2024-25ರಲ್ಲಿ ಶೇ 6.5ಕ್ಕೆ ಏರಿಕೆ ಕಂಡಿದ್ದು, 2025-26ರಲ್ಲಿ ಶೇ 12ಕ್ಕೆ ತಲುಪಿದೆ. ಅಲ್ಲದೇ 2026-27ರ ಜುಲೈ 31ರ ವೇಳೆಗೆ ಸಾರ್ವಜನಿಕರ ಬಳಿಯಿರುವ ನಗದು ಮೊತ್ತ ₹41.8 ಲಕ್ಷ ಕೋಟಿ ಆಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ13ರಷ್ಟು ಹೆಚ್ಚು ಎಂದು ವರದಿ ತಿಳಿಸಿದೆ.ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಅಂಕಿ-ಅಂಶಗಳೂ ಯುಪಿಐ ವಹಿವಾಟುಗಳ ಬೆಳವಣಿಗೆಯ ದರದಲ್ಲಿನಿಧಾನಗತಿಯನ್ನು ಸೂಚಿಸಿವೆ. 2019-20ರಲ್ಲಿ ಶೇ 133ರಷ್ಟು ಬೆಳವಣಿಗೆ ದಾಖಲಿಸಿದ್ದ ಯುಪಿಐ ವಹಿವಾಟುಗಳು, 2020-21ರಲ್ಲಿ ಶೇ 95ಕ್ಕೆ ಇಳಿದಿದ್ದವು. ಕೋವಿಡ್ ನಂತರ ಈ ದರ ಮತ್ತೆ ಶೇ 105ಕ್ಕೆ ಏರಿಕೆಯಾದರೂ, ಆ ಬಳಿಕ ವರ್ಷದಿಂದ ವರ್ಷಕ್ಕೆ ಕುಂಟುತ್ತಾ ಸಾಗಿದೆ. 2025-26 ರಲ್ಲಿ ಬೆಳವಣಿಗೆ ದರವು ಶೇ 20.3 ಕ್ಕೆ ತಲುಪಿದೆ.

[t4b-ticker]
error: Content is protected !!