ಸಾಮಾನ್ಯವಾಗಿ ಹೆಚ್ಚಿನ ಸಿನಿಮಾಗಳ ಕಲೆಕ್ಷನ್ 2ನೇ ವಾರದಲ್ಲಿ ಕಡಿಮೆಯಾಗುತ್ತದೆ. ಆದ್ರೆ, ‘ರಾಮಾಯಣ’ ಇದಕ್ಕೆ ತದ್ವಿರುದ್ಧವಾಗಿ ಸಾಗುತ್ತಿದೆ. ಬಿಡುಗಡೆಯಾದ 11ನೇ ದಿನವಾದ 2ನೇ ಭಾನುವಾರದಂದು, ಈ ಪೌರಾಣಿಕ ಕಥಾಹಂದರವು ದೇಶೀಯ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ತನ್ನ ಏರುಗತಿಯನ್ನು ಕಾಯ್ದುಕೊಂಡಿದೆ. ಚಿತ್ರ ಬಿಡುಗಡೆಯಾಗಿ 11 ದಿನಗಳು ಕಳೆದಿದ್ದರೂ, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆಂಬುದನ್ನು ಈ ಅಂಕಿ-ಅಂಶಗಳು ಸಾಬೀತುಪಡಿಸಿವೆ. ಪ್ರೇಕ್ಷಕರ ಬಾಯ್ಮಾತಿನ ಪ್ರಚಾರವೇ ಈ ಗಳಿಕೆ ಏರಿಕೆಗೆ ಕಾರಣವಾಗಿದೆ.

11ನೇ ದಿನದ ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ ವರದಿ ಪ್ರಕಾರ, 11ನೇ ದಿನದಂದು ‘ರಾಮಾಯಣ’ ಚಿತ್ರವು ಭಾರತದಲ್ಲಿ 75 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಈ ಅಂಕಿ-ಅಂಶವು ಚಿತ್ರದ ಮೊದಲ ಭಾನುವಾರದ ಗಳಿಕೆಗಿಂತ ಹೆಚ್ಚಾಗಿದೆ. ಮೊದಲ ಭಾನುವಾರದಂದು 56.15 ಕೋಟಿ ರೂಪಾಯಿಯ ವ್ಯವಹಾರವಾಗಿತ್ತು. 11ನೇ ದಿನದ ಗಳಿಕೆಯು ಅದಕ್ಕಿಂತ ಶೇ.33.6ರಷ್ಟು ಹೆಚ್ಚಾಗಿದೆ. ಅಲ್ಲದೇ, ಶನಿವಾರದಂದು ಚಿತ್ರ 72.90 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಆ ದಿನಕ್ಕೆ ಹೋಲಿಸಿದರೆ 11ನೇ ದಿನದಂದು ಶೇ. 2.9ರಷ್ಟು ಏರಿಕೆಯನ್ನು ದಾಖಲಿಸಿದೆ.


11 ದಿನಗಳಲ್ಲಿ ಸಿನಿಮಾ ಗಳಿಸಿದ್ದೆಷ್ಟು?

ಗ್ಲೋಬಲ್ ಕಲೆಕ್ಷನ್ 1,384.50 ಕೋಟಿ ರೂ.

ಇಂಡಿಯಾ ಗ್ರಾಸ್ ಕಲೆಕ್ಷನ್ 909 ಕೋಟಿ ರೂ.

ಇಂಡಿಯಾ ನೆಟ್ ಕಲೆಕ್ಷನ್ 760.60 ಕೋಟಿ ರೂ.

ವಿದೇಶದ ವ್ಯವಹಾರ 475.50 ಕೋಟಿ
11ನೇ ದಿನದಂದು, ಈ ಚಿತ್ರವು ಸಾಗರೋತ್ತರ ಪ್ರದೇಶಗಳಿಂದಲೇ 40 ಕೋಟಿ ರೂಪಾಯಿಗಳನ್ನು ಗಳಿಸಿದೆ. ಜಾಗತಿಕ ಮಟ್ಟದಲ್ಲಿ 1,400 ಕೋಟಿ ರೂಪಾಯಿ ತಲುಪಲು ಈ ಚಿತ್ರಕ್ಕೆ ಈಗ ಕೇವಲ 15.50 ಕೋಟಿ ರೂಪಾಯಿಗಳಷ್ಟೇ ಬಾಕಿಯಿದೆ.
ಹಾಗೆಯೇ, ಭಾರತದಲ್ಲಿ 800 ಕೋಟಿ ರೂಪಾಯಿಗಳ ನಿವ್ವಳ ಗಳಿಕೆಯನ್ನು ತಲುಪಲು 39.40 ಕೋಟಿ ರೂಪಾಯಿಗಳ ಅಗತ್ಯವಿದೆ.ಆರಂಭದಿಂದಲೂ ಹಿಂದಿ ಆವೃತ್ತಿಯಿಂದಲೇ ಗಮನಾರ್ಹ ಕೊಡುಗೆ, 2ನೇ ಸ್ಥಾನದಲ್ಲಿ ಕನ್ನಡ (ನೆಟ್/ನಿವ್ವಳ ಗಳಿಕೆ)
ಹಿಂದಿ 582.25 ಕೋಟಿ ರೂ.
ಕನ್ನಡ 63.10 ಕೋಟಿ ರೂ.
ತೆಲುಗು 49.40 ಕೋಟಿ ರೂ.
ತಮಿಳು 34.40 ಕೋಟಿ ರೂ.
ಮಲಯಾಳಂ 31.45 ಕೋಟಿ ರೂ.
ಕನ್ನಡದಲ್ಲಿ 50 ಕೋಟಿ ರೂ.
ಗಳಿಕೆಯನ್ನು ದಾಟಿದ ಮೊದಲ ಬಾಲಿವುಡ್ ಚಿತ್ರವಾಗಿ ‘ರಾಮಾಯಣ’ಕಳೆದ ವಾರಾಂತ್ಯದ ವೇಳೆಗೆ ರಾಮಾಯಣ ಗಮನಾರ್ಹ ದಾಖಲೆಯೊಂದನ್ನು ಬರೆಯಿತು. ಕನ್ನಡ ಆವೃತ್ತಿಯು ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ದೇಶೀಯ ಮಾರುಕಟ್ಟೆಯಲ್ಲಿ 50 ಕೋಟಿ ರೂಪಾಯಿಗೂ ಅಧಿಕ ನೆಟ್ ಕಲೆಕ್ಷನ್ ಮಾಡಿದೆ. ಕನ್ನಡ ಆವೃತ್ತಿಯ ಮೂಲಕ ಈ ಮೈಲಿಗಲ್ಲನ್ನು ತಲುಪಿದ ಮೊದಲ ಬಾಲಿವುಡ್ ಚಲನಚಿತ್ರವಾಗಿ ‘ರಾಮಾಯಣ’ ಗುರುತಿಸಿಕೊಂಡಿದೆ.
11ನೇ ದಿನದಂದು ಭಾಷಾವಾರು ಗಳಿಕೆ ಹೀಗಿತ್ತು
ಹಿಂದಿ 55 ಕೋಟಿ ರೂ.
ಕನ್ನಡ 5.75 ಕೋಟಿ ರೂ.
ಮಲಯಾಳಂ 5 ಕೋಟಿ ರೂ.
ತಮಿಳು 4.75 ಕೋಟಿ ರೂ.
ತೆಲುಗು 4.50 ಕೋಟಿ ರೂ.
ರಾಮಾಯಣ 2ನೇ ಭಾನುವಾರದಂದು ಧುರಂಧರ್ 2ರ ದಾಖಲೆ ಮುರಿದಿದೆ:
11ನೇ ದಿನದಂದು ಚಿತ್ರ ಮತ್ತೊಂದು ಹೊಸ ದಾಖಲೆ ಬರೆದಿದೆ. ಬಾಲಿವುಡ್ ಚಲನಚಿತ್ರವೊಂದರ ಪೈಕಿ, ‘ರಾಮಾಯಣ’ ಇದೀಗ ಎರಡನೇ ಭಾನುವಾರದಂದು ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿ ಹೊರಹೊಮ್ಮಿದೆ. ಇದು 68 ಕೋಟಿ ರೂಪಾಯಿಗಳನ್ನು ಗಳಿಸಿದ್ದ ‘ಧುರಂಧರ್ 2’ ಚಿತ್ರದ 2ನೇ ಭಾನುವಾರದ ಗಳಿಕೆಯನ್ನು ಹಿಂದಿಕ್ಕಿದೆ.ಇದಕ್ಕೂ ಮುನ್ನ, ಈ ಚಿತ್ರವು ಕೇವಲ 8 ದಿನಗಳಲ್ಲಿ ವಿಶ್ವಾದ್ಯಂತ 1,000 ಕೋಟಿ ರೂಪಾಯಿಗಳ ಗಳಿಕೆಯನ್ನು ದಾಟಿತ್ತು. ಹೀಗೆ ಅತಿ ವೇಗವಾಗಿ ಈ ಮೈಲಿಗಲ್ಲನ್ನು ತಲುಪಿದ ಭಾರತೀಯ ಚಲನಚಿತ್ರಗಳಲ್ಲಿ ಇದೂ ಒಂದಾಗಿದೆ.
ಅಲ್ಲದೇ, ಇದು ‘ಆರ್‌ಆರ್‌ಆರ್’ ಚಿತ್ರದ ಒಟ್ಟು ಜಾಗತಿಕ ಗಳಿಕೆಯನ್ನೂ (ಸುಮಾರು 1,230 ಕೋಟಿ ರೂಪಾಯಿ) ಮೀರಿಸಿದೆ.10 ದಿನಗಳಲ್ಲಿ ಕೆಜಿಎಫ್ ದಾಖಲೆ ಬ್ರೇಕ್!ಈವರೆಗೆ ವಿಶ್ವಾದ್ಯಂತ 1,384.50 ಕೋಟಿ ರೂಪಾಯಿ ಗಳಿಸಿರುವ ಚಿತ್ರ 10 ದಿನಗಳಲ್ಲಿ ಯಶ್ ಅವರದ್ದೇ ಆದ ಬ್ಲಾಕ್ಬಸ್ಟರ್ ಕೆಜಿಎಫ್ ಅಧ್ಯಾಯ 2ನ್ನು ಮೀರಿಸಿದೆ. ಈ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ನಟ ಯಶ್ ಅವರ ಸಿನಿಮಾವಾಗಿ ರಾಮಾಯಣ ಹೊರಹೊಮ್ಮಿದೆ.
ಕೆಜಿಎಫ್ ಚಾಪ್ಟರ್ 2ನ ಒಟ್ಟು ಗಳಿಕೆಯಷ್ಟು?
ಗ್ಲೋಬಲ್ ಕಲೆಕ್ಷನ್ 1,215 ಕೋಟಿ ರೂ.
ಇಂಡಿಯಾ ಗ್ರಾಸ್ ಕಲೆಕ್ಷನ್ 1,000.85 ಕೋಟಿ ರೂ.
ಇಂಡಿಯಾ ನೆಟ್ ಕಲೆಕ್ಷನ್ 859.70 ಕೋಟಿ ರೂ.
ವಿದೇಶದ ವ್ಯವಹಾರ 214.15 ಕೋಟಿ ರೂ.
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ರಣ್ಬೀರ್ ಕಪೂರ್ ಶ್ರೀರಾಮನಾಗಿ, ದಕ್ಷಿಣ ಚಿತ್ರರಂಗದ ಬಹುಬೇಡಿಕೆ ತಾರೆ ಸಾಯಿ ಪಲ್ಲವಿ ಸೀತೆಯಾಗಿ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸಿದ್ದಾರೆ. ನವೆಂಬರ್ 5ರಂದು ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಎರಡನೇ ಭಾಗವನ್ನು 2028ರ ದೀಪಾವಳಿಯಂದು ಬಿಡುಗಡೆ ಮಾಡಲು ಯೋಜಿಸಲಾಗಿದೆ.









































