ಮೃತರ ಖಾತೆಗೂ ಗೃಹಲಕ್ಷ್ಮೀ ಹಣ! ಕಡಬ, ಪುತ್ತೂರಿನಲ್ಲಿ ಸರ್ಕಾರದಿಂದ ವಸೂಲಾತಿ ಚುರುಕು

Picture of Savistara

Savistara

Bureau Report

ಕಡಬ/ಪುತ್ತೂರು: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಮೃತಪಟ್ಟ ಬಳಿಕವೂ ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿರುವ ಪ್ರಕರಣಗಳಲ್ಲಿ ಇದೀಗ ಸರ್ಕಾರ ವಸೂಲಾತಿ ಕಾರ್ಯಾಚರಣೆ ಚುರುಕುಗೊಳಿಸಿದೆ.

Advertisement

ತಾಂತ್ರಿಕ ಕಾರಣಗಳಿಂದ ಮರಣ ಹೊಂದಿದ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿರುವ ಗೃಹಲಕ್ಷ್ಮೀ ಹಣವನ್ನು ಸರ್ಕಾರದ ಖಾತೆಗೆ ಮರುಪಾವತಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.ಕಡಬ ತಾಲೂಕಿನಲ್ಲಿ 724 ಮಂದಿ ಗೃಹಲಕ್ಷ್ಮೀ ಫಲಾನುಭವಿಗಳು ಮೃತಪಟ್ಟಿದ್ದು, ಅವರಲ್ಲಿ 225 ಮಂದಿಯ ಖಾತೆಗಳಿಗೆ ಮರಣದ ಬಳಿಕವೂ ಒಟ್ಟು ₹21.16 ಲಕ್ಷ ಹಣ ಜಮೆಯಾಗಿದೆ.

Advertisement

Advertisement

ಈ ಪೈಕಿ ಈಗಾಗಲೇ 93 ಫಲಾನುಭವಿಗಳ ಖಾತೆಗಳಿಂದ ₹9,47,109 ಹಣವನ್ನು ಸರ್ಕಾರದ ಖಾತೆಗೆ ವಾಪಸ್ ಪಡೆಯಲಾಗಿದೆ. ಇನ್ನು ಕೆಲ ಪ್ರಕರಣಗಳಲ್ಲಿ ಮೃತ ಫಲಾನುಭವಿಗಳ ಸಂಬಂಧಿಕರು ಖಾತೆಯಿಂದ ₹7,42,264 ಹಣವನ್ನು ಡ್ರಾ ಮಾಡಿಕೊಂಡಿರುವುದು ಪತ್ತೆಯಾಗಿದೆ. ಖಾತೆಗಳಲ್ಲಿ ಉಳಿದಿದ್ದ ₹1,87,345 ಹಣವನ್ನು ಡ್ರಾ ಮಾಡದಂತೆ ಬ್ಯಾಂಕ್‌ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಇದೇ ರೀತಿಯ ಪರಿಸ್ಥಿತಿ ಪುತ್ತೂರು ತಾಲೂಕಲ್ಲೂ ಕಂಡುಬಂದಿದೆ.

Advertisement

Advertisement

ಇಲ್ಲಿ ಒಟ್ಟು 1,033 ಗೃಹಲಕ್ಷ್ಮೀ ಫಲಾನುಭವಿಗಳು ಮೃತಪಟ್ಟಿದ್ದು, 321 ಮಂದಿಯ ಖಾತೆಗಳಿಗೆ ಮರಣದ ಬಳಿಕ ₹29.46 ಲಕ್ಷ ಹಣ ಜಮೆಯಾಗಿದೆ.ಇದರಲ್ಲಿ ಈಗಾಗಲೇ 111 ಫಲಾನುಭವಿಗಳ ಖಾತೆಗಳಿಂದ ₹10,83,562 ಹಣವನ್ನು ಸರ್ಕಾರಕ್ಕೆ ಮರುಪಾವತಿಸಲಾಗಿದೆ.

Advertisement

ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ, ಫಲಾನುಭವಿಗಳ ಮರಣದ ಮಾಹಿತಿಯನ್ನು ಆಧರಿಸಿ ಅವರ ಖಾತೆಗಳಿಗೆ ಗೃಹಲಕ್ಷ್ಮೀ ಹಣ ಜಮೆಯಾಗದಂತೆ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ.

Advertisement

ಇನ್ನು ಸಂಬಂಧಿಕರು ಈಗಾಗಲೇ ಡ್ರಾ ಮಾಡಿಕೊಂಡಿರುವ ಹಣವನ್ನು ಯಾವ ರೀತಿಯಲ್ಲಿ ಸರ್ಕಾರಕ್ಕೆ ಮರುಪಾವತಿಸಿಕೊಳ್ಳಬೇಕು ಎಂಬ ಬಗ್ಗೆಯೂ ಅಧಿಕಾರಿಗಳು ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಕ್ರಮ ಕೈಗೊಳ್ಳುತ್ತಿದೆ.

[t4b-ticker]
error: Content is protected !!