ಬೆಂಗಳೂರು – ಮಂಗಳೂರು – ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ – ಪುತ್ತೂರಿನಲ್ಲಿ ಭರ್ಜರಿ ಸ್ವಾಗತ

Picture of Savistara

Savistara

Bureau Report

ಬಹುನಿರೀಕ್ಷಿತ ಬೆಂಗಳೂರು – ಮಂಗಳೂರು – ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದ್ದಾರೆ.

Advertisement

ಮಂಗಳೂರು ಜಂಕ್ಷನ್‌ನಿಂದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟನಾ ವಿಶೇಷ ರೈಲಿಗೆ ಚಾಲನೆ ನೀಡಿದ್ದು, ಸುಬ್ರಹ್ಮಣ್ಯ ರಸ್ತೆವರೆಗೆ ಈ ರೈಲಿನಲ್ಲಿ ಪ್ರಯಾಣ ಮಾಡಿದರು.ಈ ವೇಳೆ ಪುತ್ತೂರು

Advertisement

Advertisement

ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ರೈಲು ನಿಲುಗಡೆಗೊಂಡಾಗ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭರ್ಜರಿ ಸ್ವಾಗತ ನೀಡಿದರು.

Advertisement

Advertisement

ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಹೂಮಳೆಗರೆದು, ಘೋಷಣೆಗಳೊಂದಿಗೆ ಸಂಭ್ರಮಿಸಿದರು. ಜನರಲ್ಲಿ ಹರ್ಷ ಮನೆ ಮಾಡಿತ್ತು.ಈ ಸಂದರ್ಭದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಭರತ್ ಶೆಟ್ಟಿ,

Advertisement

Advertisement

ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಕಿಶೋರ್ ಕುಮಾರ್, ಭಾಗೀರಥಿ ಮುರುಳ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಪ್ರಸನ್ನ ದರ್ಬೆ, ನಂದನ್ ಮಲ್ಯ ಸೇರಿದಂತೆ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ರೈಲು ಸಂಚಾರದಿಂದ ಕರಾವಳಿ ಭಾಗದ ಜನರಿಗೆ ಬೆಂಗಳೂರು ಸಂಪರ್ಕ ಮತ್ತಷ್ಟು ವೇಗ ಹಾಗೂ ಸುಲಭವಾಗಲಿದೆ ಎಂದು ನಾಯಕರು ಹರ್ಷ ವ್ಯಕ್ತಪಡಿಸಿದರು.

[t4b-ticker]
error: Content is protected !!