MRPL ಸಂಸ್ಥೆಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಸಹಕಾರ; ಯುವಸ್ಪಾರ್ಕ್ ಮತ್ತು ಧೀರ್ಯ ಫೌಂಡೇಶನ್ ಸಹಯೋಗದಲ್ಲಿ ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ.
ಶಿವಮೊಗ್ಗ ಜಿಲ್ಲೆ, ನಗರ, 13 ನವೆಂಬರ್ 2026 : ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ನಾರಿ ಶಕ್ತಿ’ ಉತ್ತೇಜನ ಮತ್ತು ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ಆಶಯಕ್ಕೆ ಪೂರಕವಾಗಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರ ಸಕ್ರಿಯ ಪ್ರಯತ್ನಗಳ ಫಲವಾಗಿ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಸಹಕಾರದೊಂದಿಗೆ,


ಹೊಸನಗರ ತಾಲ್ಲೂಕಿನ ನಗರದಲ್ಲಿ ಸಂಪೇಕಟ್ಟೆ ಹೊಸೂರು, ಮೂಡುಗೊಪ್ಪ (ನಗರ), ನಿಟ್ಟೂರು, ಅಂಡಗದೋದೂರು, ಸುಳುಗೋಡು, ಖೈರಗುಂದ (ಮಾಸ್ತಿಕಟ್ಟೆ), ಕರೀಮನೆ, ಯಡೂರು, ಅರಮನೆಕೊಪ್ಪ (ಮತ್ತಿಮನೆ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯ್ದ 300 ಮಹಿಳೆಯರಿಗೆ ಅವರ ಜೀವನೋಪಾಯಕ್ಕೆ ಬೆಂಬಲವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.


ಇದರೊಂದಿಗೆ ಪ್ರತಿ ಫಲಾನುಭವಿಗೆ 5 ಮೀಟರ್ನಂತೆ ಒಟ್ಟು 1,500 ಮೀಟರ್ ಬಟ್ಟೆಯನ್ನು 300 ಹೊಲಿಗೆ ಕಿಟ್ಗಳ ರೂಪದಲ್ಲಿ ಒದಗಿಸಲಾಯಿತು.ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ CSR ಸಹಕಾರದಲ್ಲಿ, ಯುವಸ್ಪಾರ್ಕ್ (YuvaSpark) ಮತ್ತು ಧೀರ್ಯ ಫೌಂಡೇಶನ್ ಸಹಯೋಗದೊಂದಿಗೆ ಸಂಸದರ ಪ್ರಯತ್ನ ಸಾಕಾರಗೊಂಡಿದ್ದು, ವಿಶೇಷವಾಗಿ ಗ್ರಾಮೀಣ ಮಹಿಳೆಯರ ಕೌಶಲ್ಯವನ್ನು ಸ್ವಂತ ಉದ್ಯೋಗವಾಗಿ ರೂಪಿಸಿಕೊಳ್ಳಲು, ಸ್ಥಳೀಯವಾಗಿಯೇ ಆದಾಯ ಗಳಿಸಲು ಹಾಗೂ ಕುಟುಂಬದ ಆರ್ಥಿಕತೆಗೆ ನೆರವಾಗಲು ಈ ಉಪಕ್ರಮ ಸಹಕಾರಿಯಾಗಲಿದೆ.


ಮಹಿಳೆಯರಿಗೆ ನೆರವು ನೀಡುವುದಷ್ಟೇ ಅಲ್ಲ, ಅವರು ಸ್ವಂತ ದುಡಿಮೆಯ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಆಶಯ ಸಾರ್ಥಕವಾದಂತಾಗಿದೆ.ಈ ಜನೋಪಯೋಗಿ ಕಾರ್ಯಕ್ಕೆ CSR ಸಹಕಾರ ನೀಡಿದ MRPL ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಮತ್ತು ಕಾರ್ಯಕ್ರಮದ ಅನುಷ್ಠಾನದಲ್ಲಿ ಸಹಕರಿಸಿದ ಯುವಸ್ಪಾರ್ಕ್ ಹಾಗೂ ಧೀರ್ಯ ಫೌಂಡೇಶನ್ನ ಪದಾಧಿಕಾರಿಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೃತಜ್ಞತೆ ಸಲ್ಲಿಸಿದರು.


“ಹೆಮ್ಮೆಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ‘ನಾರಿ ಶಕ್ತಿ’ ಪರಿಕಲ್ಪನೆಯ ಆಶಯದಂತೆ, ಮಹಿಳೆಯರಿಗೆ ನೆರವು ನೀಡುವುದಲ್ಲದೆ, ಅವರ ಕೌಶಲ್ಯಕ್ಕೆ ಉದ್ಯೋಗದ ಅವಕಾಶ ಕಲ್ಪಿಸಿ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವುದು ನಮ್ಮ ಉದ್ದೇಶ. ಈ ಮೂಲಕ ಮಹಿಳಾ ಸಬಲೀಕರಣದ ಸಂಕಲ್ಪವನ್ನು ಸ್ಥಳೀಯ ಮಟ್ಟದಲ್ಲಿ ಸಾಕಾರಗೊಳಿಸುವ ಸಣ್ಣ ಪ್ರಯತ್ನ ಇದಾಗಿದೆ” ಎಂದು ಸಂಸದ ರಾಘವೇಂದ್ರ ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅರಗ ಜ್ಞಾನೇಂದ್ರ, MRPL ಸಂಸ್ಥೆಯ ಹರೀಶ್ ರಾವ್ (HR) ಪ್ರಶಾಂತ್ ಎಸ್. ಪೊದುವಾಳ್, ಪ್ರಧಾನ ವ್ಯವಸ್ಥಾಪಕ (CSR) ಮಂದಾರ್ ವಿ. ಕಾಳೆ, ಯುವಸ್ಪಾರ್ಕ್ ಸ್ಥಾಪಕ ನಿರ್ದೇಶಕರಾದ ಆಕರ್ಷ್ ಶ್ರಾಫ್,
ಧೀರ್ಯ ಫೌಂಡೇಶನ್ ನ ಪ್ರಕೃತ್ ಯಾದಳಂ, ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷರಾದ ಸತೀಶ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರಮಾಕಾಂತ್, ಮ್ಯಾಮ್ ಕೋಸ್ ನಿರ್ದೇಶಕರಾದ ಕೃಷ್ಣಮೂರ್ತಿ, ಸುರೇಶ್ ಸ್ವಾಮಿರಾವ್, ಆಲಗದ್ದೆ ಉಮೇಶ್, ವೀಣಾ ಪುರುಷೋತ್ತಮ್, ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ರವೀಂದ್ರ ಸೇರಿದಂತೆ ಗಣ್ಯರು, ಫಲಾನುಭವಿ ಮಹಿಳೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.









































