ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಹಾಗೂ ಕಡಬ ತಾಲೂಕುಗಳ ವ್ಯಾಪ್ತಿಯಲ್ಲಿರುವ ವಿವಿಧ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಟ್ಟು ₹25 ಕೋಟಿ ಅನುದಾನ ಒದಗಿಸುವಂತೆ ಮಾನ್ಯ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಕ್ಷೇತ್ರದ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು ಹಾಗೂ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಒಟ್ಟು 8 ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.


ಮನವಿಯಲ್ಲಿ ಉಲ್ಲೇಖಿಸಿರುವ ಪ್ರಮುಖ ಕಾಮಗಾರಿಗಳ ವಿವರ:

ರಾಜ್ಯ ಹೆದ್ದಾರಿ ಕಾಮಗಾರಿಗಳು:

ಸುಳ್ಯ ತಾಲೂಕಿನ ರಾಜ್ಯ ಹೆದ್ದಾರಿ 276ರ 13.80ರಿಂದ 14.80 ಕಿ.ಮೀ.ವರೆಗಿನ ಒಂದು ಕಿ.ಮೀ. ರಸ್ತೆ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲು – ₹3 ಕೋಟಿ.ಕಡಬ ತಾಲೂಕಿನ ರಾಜ್ಯ ಹೆದ್ದಾರಿ 100ರ 14.70ರಿಂದ 14.90 ಕಿ.ಮೀ.ವರೆಗಿನ 0.20 ಕಿ.ಮೀ. ರಸ್ತೆ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲು – ₹4 ಕೋಟಿ.

ಜಿಲ್ಲಾ ಮುಖ್ಯ ರಸ್ತೆ ಕಾಮಗಾರಿಗಳು:

3. ಸುಳ್ಯ ತಾಲೂಕಿನ ಎಲಿಮಲೆ–ಅರಂತೋಡು ರಸ್ತೆಯ 6ರಿಂದ 10 ಕಿ.ಮೀ.ವರೆಗಿನ 4 ಕಿ.ಮೀ. ರಸ್ತೆ ಅಭಿವೃದ್ಧಿಗೆ – ₹4.50 ಕೋಟಿ.
4. ಸುಳ್ಯ ತಾಲೂಕಿನ ಅಯ್ಯನಕಟ್ಟೆ ಭಾಗದ ರಸ್ತೆಯ 4ರಿಂದ 9 ಕಿ.ಮೀ.ವರೆಗಿನ 5 ಕಿ.ಮೀ. ರಸ್ತೆ ಅಭಿವೃದ್ಧಿಗೆ – ₹4.50 ಕೋಟಿ.
5. ಸುಳ್ಯ ತಾಲೂಕಿನ ಜೈವ…–ಮಂಡೆಕೋಲು ರಸ್ತೆಯ 6.50ರಿಂದ 10 ಕಿ.ಮೀ.ವರೆಗಿನ 3.50 ಕಿ.ಮೀ. ರಸ್ತೆ ಮರುಡಾಂಬರೀಕರಣಕ್ಕೆ – ₹2 ಕೋಟಿ.
6. ಕಡಬ ತಾಲೂಕಿನ ಸುಬ್ರಹ್ಮಣ್ಯ–ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ 29.50ರಿಂದ 31.50 ಕಿ.ಮೀ.ವರೆಗಿನ ರಸ್ತೆ ಕಾಂಕ್ರೀಟೀಕರಣ ಹಾಗೂ ಅಭಿವೃದ್ಧಿಗೆ – ₹2 ಕೋಟಿ.
7. ಕಡಬ ತಾಲೂಕಿನ ಪೆರ್ವಾಜೆ ಭಾಗದ ರಾಜ್ಯ ಹೆದ್ದಾರಿಯ 29ರಿಂದ 31 ಕಿ.ಮೀ.ವರೆಗಿನ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಗೆ – ₹2 ಕೋಟಿ.
8. ನೆಲ್ಯಾಡಿ ಭಾಗದ ಎನ್.ಎಚ್. 75 ಹಾಗೂ ಎಸ್.ಎಚ್. 113 ಸಂಪರ್ಕಿಸುವ ರಸ್ತೆಯ 8.45ರಿಂದ 10 ಕಿ.ಮೀ.ವರೆಗಿನ ರಸ್ತೆ ಅಗಲೀಕರಣಕ್ಕೆ – ₹3 ಕೋಟಿ.
ಈ ಎಲ್ಲಾ ಕಾಮಗಾರಿಗಳಿಗೆ ಒಟ್ಟು ₹2,500 ಲಕ್ಷ ಅಂದರೆ ₹25 ಕೋಟಿ ಅನುದಾನವನ್ನು ಒದಗಿಸುವಂತೆ ಮನವಿ ಮಾಡಲಾಗಿದೆ.ಕ್ಷೇತ್ರದ ಗ್ರಾಮೀಣ ಹಾಗೂ ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ, ಅಗತ್ಯ ಅನುದಾನ ಮಂಜೂರು ಮಾಡಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಚಿವರಲ್ಲಿ ಕೋರಲಾಗಿದೆ.









































